PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-07- ಶಿವರಾತ್ರಿ ಹಬ್ಬದ ಪ್ರಯುಕ್ತ ನಾಡಿನೆಲ್ಲೆಡೆ ಸಂಭ್ರಮ ಮನೆಮಾಡಿದ್ದು, ನಾಡಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಮುಂಜಾನೆಯಿಂದಲೇ ಅಭಿಷೇಕ, ವಿಶೇಷ ಪೂಜೆ, ಭಜನೆ ಆಯೋಜಿಸಲಾಗಿದೆ. : ಹಿಂದೂ ಧರ್ಮದ ಪ್ರಮುಖ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಶಿವರಾತ್ರಿ ಹಬ್ಬ ಮತ್ತೆ ಬಂದಿದೆ ಸಾಮಾನ್ಯವಾಗಿ ಈ ಹಬ್ಬವು ಮಾಘ ಮಾಸದದಲ್ಲಿ ಆಚರಣೆಗೆ ಒಳಪಡುತ್ತದೆ.
ಶಿವರಾತ್ರಿ ಅಂದ ಕೂಡಲೇ ಮನಸ್ಸಿಗೆ ಬರುವ ಮೊದಲ ವಿಚಾರ ಎಂದರೆ ಜಾಗರಣೆ ಶಿವರಾತ್ರಿ‘ಯಂದು ಜಾಗರಣೆ ಮಾಡಬೇಕ ಆ ಸಮಯದಲ್ಲಿ ಮನಸ್ಸನ್ನು ಶಿವನಿಗೆ ಅಭಿಮುಖವಾಗಿಸಿಕೊಂಡು ಧ್ಯಾನಮಗ್ನರಾಗಬೇಕು. ಜೀವನದಲ್ಲಿ ಉಳಿದ ದಿನಗಳಲ್ಲಿ ಶಿವನ ಒಲುಮೆಯನ್ನು ಸಂಪಾದಿಸುವುದು ಕಷ್ಟಸಾಧ್ಯ. ಶಿವರಾತ್ರಿಯಲ್ಲಿ ಇದು ತುಂಬಾ ಸುಲಭ. ಆ ಕಾಲದಲ್ಲಿ ವಿಶೇಷವಾಗಿ ಶಿವನ ಸಾನ್ನಿಧ್ಯವಿದೆ. ಆದ್ದರಿಂದ ಆ ಕಾಲವನ್ನು ಶಿವನಿಗಾಗಿಯೇ ಮೀಸಲಿಡಬೇಕು. ಅಂದು ಅಮಂಗಲದಲ್ಲಿ ಮನಸ್ಸನ್ನು ತೊಡಗಿಸದೆ ಮಂಗಲದಲ್ಲಿ- ಶಿವನಲ್ಲಿ ಮನಸ್ಸನ್ನು ತೊಡಗಿಸಬೇಕು. ಕಣ್ಣು ಶಿವನ ರೂಪದಲ್ಲಿ ನೆಡಬೇಕು. ಕಿವಿ ಶಿವನ ಗುಣಗಾನವನ್ನು ಆಲಿಸಬೇಕು. ಮೂಗು ಶಿವನ ಪೂಜಾಸಾಮಾಗ್ರಿಗಳ ಗಂಧವನ್ನು ಆಸ್ವಾದನೆ ಮಾಡಬೇಕು. ನಾಲಿಗೆ ಶಿವನ ನೈವೇದ್ಯವನ್ನು ಸವಿಯಬೇಕು. ಚರ್ಮ ಶಿವನ ಪದಸ್ಪರ್ಶದಿಂದ ಪಾವನವಾಗಬೇಕು. ಕಾಲುಗಳು ಶಿವನ ಪ್ರದಕ್ಷಿಣೆ ಮಾಡಬೇಕು. ಕೈಗಳು ಶಿವನಿಗೆ ಜೋಡಿಸಲ್ಪಡಬೇಕು ಎಂಬುದು ವಿದ್ವಾಂಸರ ಉವಾಚ . ಸಾಮಾನ್ಯವಾಗಿ ಎಲ್ಲ ದೇವಾನುದೇವತೆಗಳ ಪೂಜಾ ಕೈಂಕರ್ಯಗಳು ಹಗಲಿನಲ್ಲಿ ನಡೆಯುತ್ತವೆ. ಆದರೆ ಮಹಾ ಶಿವರಾತ್ರಿಯಂದು ಶಿವ ಪೂಜೆ ರಾತ್ರಿಯವೇಳೆ ಆಚರಿಸಲ್ಪಡುತ್ತದೆ. ಆ ದಿನ ಭಕ್ತರು ಪುಣ್ಯ ತೀರ್ಥಗಳಲ್ಲಿ ಮಿಂದು ಉಪವಾಸ ಮಾಡಿ ಬಿಲ್ವ ಪತ್ರೆಗಳಿಂದ ಅರ್ಚಿಸಿ ಭಕ್ತಿ ಭಾವಗಳಿಂದ ಜಾಗರಣೆ ಮಾಡಿ ಶಿವನನ್ನು ಸ್ತುತಿಸಿ ಭಜನೆ ಮಾಡಿ ಹರಕೀರ್ತನೆ ಗಳನ್ನು ಕೇಳಿ ಪಾವನ ರಾಗುತ್ತಾರೆ. ಶಿವರಾತ್ರಿ ಪೂಜೆ ರಾತ್ರಿ ಕಾಲವೆ ಪ್ರಶಸ್ತವೇಕೆಂದರೆ ಶಿವನು ತಾನು ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ರಾತ್ರಿ ಸಮಯದಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತೇನೆ ಎಂದಿದ್ದಾನೆ. ಕಾರಣ ಶಿವರಾತ್ರಿ ದಿನದಂದು ರಾತ್ರಿಯ ವೇಳೆಯಲ್ಲಿ ತನ್ನನ್ನು ಪೂಜಿಸಿದವರ ಪಾಪಗಳು ಪರಿಮಾರ್ಜನೆಯಾಗುತ್ತವೆ ಎಂದು ಸಾರಿದ್ದಾನೆ ಎಂಬ ಬಗ್ಗೆ ಶಾಸ್ತ್ರೋಕ್ತಿ ಯೊಂದಿದೆ. ಶಿವರಾತ್ರಿಯಂದು ಕೈಗೊಳ್ಳುವ ಉಪವಾಸಕ್ಕೆ ಬಹಳ ಪ್ರಾಶಸ್ತ್ಯವಿದೆ. ಆಹಾರಗಳನ್ನು ತೆಗೆದುಕೊಳ್ಳದೇ ವೃತವನ್ನು ಆಚರಿಸುವುದು. ಶಿವರಾತ್ರಿಯಂದು ವೃತವನ್ನು ಪೂರ್ಣಗೊಳಿಸಲು ದೇವರಿಗೆ ಪ್ರಸಾದ ರೂಪವಾಗಿ ಅರ್ಪಿಸಿದ ಆಹಾರವನ್ನು ತೆಗೆದುಕೊಳ್ಳುವುದು ವಾಡಿಕೆ.


Advertisement

0 comments:

Post a Comment

 
Top