PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ೧೩ ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ದಿ. ೧೨-೦೩-೨೦೧೬, ಶನಿವಾರ, ಶಾಲಾ ಅಡಿಟೋರಿಯಮ್‌ನಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಎಸ್.ಎಫ್.ಎಸ್. ಶಾಲೆಯ ಮುಖ್ಯೋಪಾಧ್ಯಾಯ ಜೈಸ್ ಮೆಕರಿಲ್ ಆಗಮಿಸಿದ್ದರು. ಅವರು ಮಾತನಾಡಿ ಮಕ್ಕಳು ಬೌದ್ಧಿಕ ಮತ್ತು ಸರ್ವತೋಮುಖ ಬೆಳವಣಿಗೆಯತ್ತ ಗಮನ ಕೊಡಬೇಕು. ಕೇವಲ ಅಂಕಗಳಿಕೆಗೆ ಮಾತ್ರ ಮಕ್ಕಳು ಸೀಮಿತವಾಗಬಾರದು, ಜ್ಞಾನ ಪಡೆಯಲು ಕಠಿಣ ಪರಿಶ್ರಮವೊಂದೇ ದಾರಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಶ್ರೀನಿವಾಸ ಗುಪ್ತಾ ಮಾತನಾಡಿ ಶಾಲೆಯ ಮಕ್ಕಳು ಗುರಿಯೆಡೆಗೆ ಇಟ್ಟ ಬಾಣವನ್ನು ಮತ್ತೆ ಹಿಂಪಡೆಯಬಾರದು. ಶಾಲೆಯ ಈವರೆಗಿನ ಎಸ್.ಎಸ್.ಎಲ್.ಸಿ. ಫಲಿತಾಂಶ ತೃಪ್ತಿ ತಂದಿದೆ. ರಾಜ್ಯಮಟ್ಟದ ರ್‍ಯಾಂಕ್‌ನ್ನು ನಾವು ಅಪೇಕ್ಷಿಸುತ್ತಿದ್ದು, ಒಂದು ವೇಳೆ ನಮ್ಮ ಶಾಲೆಯ ವಿದ್ಯಾರ್ಥಿಗಳಾರಾದರೂ ರ್‍ಯಾಂಕ್ ಪಡೆದುಕೊಂಡರೆ ಅವರ ಭವಿಷ್ಯತ್ತಿಗೆ ಅನುಕೂಲವಾಗುವ ಒಂದು ಲ್ಯಾಪ್‌ಟಾಪ್ ಬಹುಮಾನ ನೀಡುವುದಾಗಿ ಘೋಷಿಸಿದರು.

Advertisement

0 comments:

Post a Comment

 
Top