PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳದಲ್ಲಿ ಭೂಮಿ ಬಗೆದರೂ ಸಿಗುತ್ತಿಲ್ಲ ಜಲಮೂಲ
*೧೧೦ ಗ್ರಾಮಗಳಲ್ಲಿ  ನೀರಿನ ಸಮಸ್ಯೆ
*೨೯ ಗ್ರಾಮಗಳಿಗೆ  ಟ್ಯಾಂಕರ್ ನೀರೇ ಗತಿ
* ೬೯೭ಲಕ್ಷ ಅನುದಾನ ಕ್ರೀಯಾ ಯೋಜನೆ-
* ತಾಲೂಕಿಗೆ  ೫೦ ಲಕ್ಷದಂತೆ ೨ಕೋಟಿ  ಬರವಸೆ --ಮುಖ್ಯಾಂಶಗಳು  
ಕೊಪ್ಪಳ ಜಿಲ್ಲೆಯಲ್ಲಿ  ಭೂಮಿ ಬಗೆದರೂ ಕೂಡ  ಜಲ ಮೂಲಗಳು ಕೈಗೆಟಗದಂತಾಗಿದೆ. ಇದರಿಂದ  ೧೧೦ ಗ್ರಾಮಗಳು  ಕುಡಿಯುವ ನೀರಿಗಾಗಿ  ಬಾಯಾರಿ  ನಿಂತಿದ್ದು, ಮಳೆಯಾದರೆ  ಮಾತ್ರ ಕುಡಿಯಲು ನೀರು  ಇಲ್ಲವಾದಲ್ಲಿ  ದೇವರೇ  ಗತಿಯಾದಂತಾಗಿದೆ. ಹೌದು!  ವರ್ಷದಿಂದ  ವರ್ಷಕ್ಕೆ  ಮಳೆರಾಯನ ಮುನಿಸಿನಿಂದಾಗಿ ಪ್ರತಿವರ್ಷ ಬೆಸಿಗೆ ಕಾಲದಲ್ಲಿ  ಭೂಮಿಯಲ್ಲಿ  ಇರುವ  ಅಂತರ ಜಲಮಟ್ಟ ಕುಸಿಯುತ್ತಾ  ಸಾಗಿದೆ. ಇದರಿಂದ ಅನೇಕ ಗ್ರಾಮಗಳಲ್ಲಿ  ಕುಡಿಯುವ ನೀರಿನ ಸಮಸ್ಯೆ  ಎದುರಿಸುವುದು  ಸಾಮಾನ್ಯವಾಗಿದೆ. ಆದರೆ ಇದನ್ನ ಅರಿತ ಜಿಲ್ಲಾ ಪಂಚಾಯತ್ ಗ್ರಾಮೀಣ  ಕುಡಿಯುವ  ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಹಾಗೂ ಟಾಸ್ಕಫೋರ್ಸ್ ಯೋಜನೆಯಡಿಯಲ್ಲಿ  ನೀರಿನ ದಾಹ  ನಿಭಾಯಿಸಲು  ಎಲ್ಲಾ ಸಿದ್ದತೆ ಮಾಡಿಕೊಂಡು  ಜಿಲ್ಲಾಧಿಕಾರಿಗೆ  ಪ್ರಸ್ತಾವಣೆಗೆ  ಕಳಿಸಿದ್ದಾರೆ.
೧೧೦ ಗ್ರಾಮಗಳಲ್ಲಿ ನೀರಿನ ದಾಹ:
 ಒಟ್ಟು ಜಿಲ್ಲೆಯ  ನಾಲ್ಕು  ತಾಲೂಕಗಳಲ್ಲಿ ೫ ವಿಧಾನ ಸಭಾ  ಕ್ಷೇತ್ರಗಳಲ್ಲಿ  ೭೩೭  ಗ್ರಾಮಗಳು ಬರುತ್ತಿವೆ.  ಅದರಲ್ಲಿ  ಪ್ರಥಮ  ಆಧ್ಯತೆಗೆ ೧೧೦ ಗ್ರಾಮಗಳಲ್ಲಿ  ನೀರಿನ ಸಮಸ್ಯೆ  ಎದರಿಸಬಹುದು  ಇದನ್ನು  ನಿಬಾಯಿಸಲು  ಸುಮಾರು ೬ಕೋಟಿ ೯೭ ಲಕ್ಷ ರೂ. ಬೆಕಾಗುತ್ತದೆ ಎಂದು ಕ್ರೀಯಾ ಯೋಜನೆ  ಸಿದ್ದಪಡಿಸಿದ್ದಾರೆ.
  ಕೊಪ್ಪಳ  ತಾಲೂಕಿನಲ್ಲಿ ೧೬೬ ಹಳ್ಳಿಗಳ ಪೈಕಿ ೧೮ ಗ್ರಾಮಗಳು, ಗಂಗಾವತಿ ತಾಲೂಕಿ ಗಂಗಾವತಿ  ಹಾಗೂ  ಕನಕಗಿರಿ ಕ್ಷೇತ್ರದಲ್ಲಿ ೨೪೨ ಗ್ರಾಮಗಳ ಪೈಕಿ ೨೫ ಗ್ರಾಮಗಳು, ಕುಷ್ಟಗಿ ತಾಲೂಕಿನ ೧೭೬ ಗ್ರಾಮಗಳ ಪೈಕಿ ೧೭ ಗ್ರಾಮಗಳು,  ಹಾಗೂ ಯಲಬುರ್ಗಾ ತಾಲೂಕಿನ ೧೫೩ ಗ್ರಾಮಗಳ ಪೈಕಿ ೫೦ ಸೇರಿದಂತೆ ಒಟ್ಟು ೧೧೦ ಗ್ರಾಮಗಳು ನೀರಿನ ಸಮಸ್ಯೆಯನ್ನು  ಎದರಿಸಬಹುದು ಎಂದು ತಿಳಿಸಿದ್ದಾರೆ.
ಅದೇ ರೀತಿ  ಈಬಾರಿ  ನೀರಿನ ಸಮಸ್ಯೆ  ಉಂಟಾಗುವ ಗ್ರಾಮಗಳಲ್ಲಿ ಬೋರ್ ಕೊರೆಯಿಸಿ ಮೋಟಾರು ಅಳವಡಿಸಲಾಗುವುದು,  ಹಾಗೂ ಹೈಡ್ರೋಫ್ರ್ಯಾಕ್ಚರಿಂಗ ಮಾಡಿಸುವುದು ಮತ್ತು ಇದ್ದ ಬೋರವೇಲ್‌ಗಳನ್ನು  ಫ್ಲಶಿಂಗ್ ಕಾಮಗಾರಿ  ನಡೆಸಲಾಗುವುದು. ಆದರೆ ಒಂದು ವೇಳೆ  ಇದಕ್ಕೂ  ಮೀರಿ ನೀರಿನ ಸಮಸ್ಯೆ  ಎದುರಾದರೆ  ಟ್ಯಾಂಕರ್ ಮೂಲಕ  ನೀರು ಸರಬರಾಜು ಮಾಡಲು  ಎಲ್ಲಾ ಸಿದ್ದತೆಗಳನ್ನು  ಮಾಡಕೊಳ್ಳಲಾಗಿದೆ ಎಂದು  ಹೇಳಿದರು.
೨೯ ಗ್ರಾಮಗಳಲ್ಲಿ ಟ್ಯಾಂಕರ ನೀರೇ  ಗತಿ : ಜಿಲ್ಲೆಯ  ೧೧೦ ಗ್ರಾಮಗಳಲ್ಲಿ  ನೀರಿನ ಸಮಸ್ಯೆಯಾಗಿದ್ದು ಅದರಲ್ಲಿ ೨೯ ಗ್ರಾಮಗಳಲ್ಲಿ  ಟ್ಯಾಂಕರ್ ನೀರೇ  ಗತಿಯಾಗಿದೆ.  ಕೊಪ್ಪಳ  ತಾಲೂಕಿನಲ್ಲಿ ೭ ಗ್ರಾಮಗಳು, ಗಂಗಾವತಿ ೫,  ಕುಷ್ಟಗಿ ತಾಲೂಕಿನಲ್ಲಿ  ೮ ಹಾಗೂ ಯಲಬುರ್ಗಾ ತಾಲೂಕಿನಲ್ಲಿ  ೯ ಗ್ರಾಮಗಳಿಗೆ ಟ್ಯಾಂಕರ್  ನೀರೇ ಗತಿಯಾಗಿದ್ದು, ಇಲ್ಲಿ ಎಷ್ಟೇ  ಜಲ ಮೂಲ ಹುಡಿಕಿದರೂ ಹನಿ ನೀರು ಸಿಗುವುದಿಲ್ಲ. ಒಂದು ವೇಳೆ  ನೀರು ಸಿಕ್ಕರೂ ಕೂಡ  ಅದು  ಕುಡಿಯಲು ಹಾಗೂ ಬಳಸಲು  ಕೂಡ ಯೋಗ್ಯವಲ್ಲದ  ನೀರಾಗಿದ್ದರಿಂದ  ೨೯ ಗ್ರಾಮಗಳಿಗೆ  ಟ್ಯಾಂಕರ್  ಮೂಲಕ  ನೀರು  ಸರಬರಾಜು ಮಾಡಲು ೮೭ ಲಕ್ಷ ರೂ.  ಅನುದಾನ ಅನುಮೊದನೆ ಕಳಿಸಿದ್ದಾರೆ.
 ೬೯೭ ಲಕ್ಷ  ಅನುದಾನ :   ಕುಡಿಯುವ ನೀರಿನ ಸಮಸ್ಯೆ  ಉಂಟಾಗುವ ಗ್ರಾಮಗಳಲ್ಲಿ  ನೀರಿನ ಸಮಸ್ಯೆ  ನಿಬಾಯಿಸಲು ಜಿ.ಪಂ. ೬೯೭ ಲಕ್ಷ  ಅನುದಾನ  ಬೇಕಾಗುತ್ತೆ ಎಂದು ಕ್ರೀಯಾಯೋಜನೆ ತಯಾರಿಸಿ  ಜಿಲ್ಲಾಧಿಕಾರಿ ಅನುಮೋದನೆಗೆ ಕಳಿಸಿದ್ದಾರೆ.  ಆದರೆ  ಅನುಮೋದನೆ ಪ್ರಕಾರವಾಗಿ  ತಾಲೂಕಿಗೆ  ೫೦ ಲಕ್ಷ ರೂ. ಈಗಾಗಲೇ  ೨ಕೋಟಿ  ಕುಡಿಯುವ ನೀರಿಗಾಗಿ ಜಿಲ್ಲಾಡಳಿತ  ಬಿಡುಗಡೆ ಮಾಡಲಾಗುವುದು  ಎಂದು ಬರವಸೆ  ನೀಡಿದ್ದಾರೆ.
   ಒಟ್ಟಾರೆ  ಮುಂಬರುವ ಬೆಸೆಗೆಯಲ್ಲಿ  ಕುಡಿಯುವ ನೀರಿನ  ಸಮಸ್ಯೆ  ಉಂಟಾಗಬಹುದಾದ  ಗ್ರಾಮಗಳಲ್ಲಿ ಕುಡಿಯುವ  ನೀರಿನ ಸಮಸ್ಯೆ  ನಿಭಾಯಿಸಲು  ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸನ್ನದ್ದವಾಗಿದ್ದು, ಯಾವರೀತಿ  ನೀರಿನ ಸಮಸ್ಯೆ ನಿಭಾಯಿಸುತ್ತಿದೆ ಎಂಬುದು  ಕಾದು ನೋಡುವಂತಾಗಿದೆ.

Advertisement

0 comments:

Post a Comment

 
Top