PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಮಾ. ೧೩. ಸಿನಿಎಮಾ ಕ್ಷೇತ್ರ ಒಂದು ಉದ್ಯಮ ಹೌದಾದರೂ ಅಲ್ಲಿ ಸಾಕಷ್ಟು ಆಯಾಮಗಳಿವೆ,ಅಲ್ಲಿ ಕಲೆ ಇದೆ, ಸಂಸ್ಕೃತಿ ಇದೆ ಮತ್ತು ನೆಲದ ಜೀವಂತಿಕೆ ಇದೆ ಎಂದು ಸಿನೆಮಾಮೈ ಡಾರ್ಲಿಂಗ್ ಚಿತ್ರದ ನಿರ್ದೇಶಕ ಗೌರೀಶ ಅಕ್ಕಿ ಅಭಿಪ್ರಾಯಪಟ್ಟರು. ಅವರು ನಗರದ ಸಾಹಿತ್ಯ ಭವನದಲ್ಲಿ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಯುವಚೇತನ ಶಿವರಾಜ ತಂಗಡಗಿ ವೇದಿಕೆ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವುಗಳ ಆಶ್ರಯದಲ್ಲಿ ನಡೆದ ಕೊಪ್ಪಳ ಜಿಲ್ಲೆಯ ಪತ್ರಕರ್ತ ಗೌರೀಶ ಅಕ್ಕಿ ನಿರ್ದೇಶನದ ಸಿನೆಮಾ ಮೈ ಡಾರ್ಲಿಂಗ್ ಚಿತ್ರದ ಬಿಡುಗಡೆ ನಿಮಿತ್ಯ ಪ್ರಮೋಷನ್ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಪ್ರೀತಿಯನ್ನು ನಾನು ಎಷ್ಟುಕೊಂಡಾಡಿದರೂ ಕಡಿಮೆ, ಗೊಂಡಬಾಳ ಹಾಗೂಸ್ನೇಹಿತರು ಅತ್ಯುತಮ ಸಹಕಾರ ನೀಡಿದ್ದಾರೆ, ಇಲ್ಲಿ ಬೆಳೆಯುವ ಸಾಕಷ್ಟು ಪ್ರತಿಭೆಗಳಿವೆ ಅವುಗಳನ್ನು ಎಲ್ಲರೂ ಸೇರಿ ಬೆಳೆಸೋಣ, ಗೊಂಡಬಾಳರು ಮಾಡುತ್ತಿರುವ ಚಲನಚಿತ್ರ ಮತ್ತು ಧಾರವಾಹಿಗಳ ಸದುಪಯೋಗ ಪಡೆದುಕೊಳ್ಳಿ ಎಂದ ಅವರು, ಮೆಹಂದಿ ಹೂ ಹಾಗೂ ಹೊಂಗಿರಣ ಚಿತ್ರಗಳ ಟೈಟಲ್ ಲಾಂಚ್ ಮಾಡಿದರು. ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮದಲ್ಲಿ, ಗೌರೀಶ ಅಕ್ಕಿ, ಮನೋಜವ ಗಲಗಲಿ, ಶ್ರೇಯಸ್‌ರೊಂದಿಗೆ ಪ್ರೇಕ್ಷಕರು ಟೀ ಪಾರ್ಟೀ ಮಾಡಿದ್ದು ವಿಶೇಷವಾಗಿತ್ತು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಸಮಾರಂಭ ಉದ್ಘಾಟಿಸಿ  ಮಾತನಾಡಿದರು, ಡಾ|| ಮಹಾಂತೇಶ ಮಲ್ಲನಗೌಡರ ಮಾತನಾಡಿದರು, ವೇದಿಕೆಯಲ್ಲಿ ಬಸವರಾಜ ಕರುಗಲ್, ಜಿ.ಎಸ್. ಗೋನಾಳ, ಎಂ.ಸಾಧಿಕ ಅಲಿ, ಮಾಜಿ ಕಸಾಪಧ್ಯಕ್ಷ ವೀರಣ್ಣ ನಿಂಗೋಜಿ, ವಕೀಲರಾದ ಎಸ್.ಎ. ನಿಂಗೋಜಿ, ಶಿವಾನಂದ ಹೊದ್ಲೂರ, ಹೇಮಲತಾ ಪರೀಕ್ಷಿತರಾಜ, ಲತಾ ಆರ್. ಅಳವಂಡೀಕರ್, ಇಂದಿರಾ ಭಾವಿಕಟ್ಟಿ, ಬಸವರಾಜ ಕೊಪ್ಪಳ, ಬಸವರಾಜ ಮಾಲಗಿತ್ತಿ, ರಾಜಕುಮಾರ ನಾಯಕ ಇತರರು ಇದ್ದರು. ಕೊಪ್ಪಳದ ಚಲನಚಿತ್ರ ನಿರ್ದೇಶಕ ಗೌರೀಶ ಅಕ್ಕಿ, ಖ್ಯಾತ ಕಲಾವಿದರಾದ ಸುನಂದಾ ಹೊಸಪೇಟೆ, ನಟ ಮನೋಜವ ಗಲಗಲಿ, ನಟ ಶ್ರೇಯಸ್, ನಟಿ ಸೃಷ್ಟಿ ದೆಹಲಿ ರನ್ನು ಸನ್ಮಾನಿಸಲಾಯಿತು. ವಿಜಯಕುಮಾರ ಗೊಂಡಬಾಳ ಪ್ರಾರ್ಥಿಸಿದರು, ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಆನಂದ ಗೊಂಡಬಾಳ ವಂದಿಸಿದರು, ಸುರೇಶ ಕಂಬಳಿ ನಿರೂಪಿಸಿದರು. ಸಾಹಿತ್ಯ ಎಂಟರ್‌ಪ್ರೈಸಸ್ ಶ್ರೀ ಸಹಸ್ರಾಜನೇಯ ಪಿಕ್ಚರ್‍ಸ್‌ನ ಮಕ್ಕಳಚಿತ್ರ ಹೊಂಗಿರಣ, ಕಲಾತ್ಮಕ ಚಿತ್ರ ಮೆಹಂದಿಹೂ ಹಾಗೂ ಹೊಸ ದಾರವಾಹಿಗಳ ಚಿತ್ರೀಕರಣ ಶೀಘ್ರ ಆರಂಭವಾಗಲಿದೆ, ಇದೇ ವೇಳೆ ಸಿನೆಮಾ ಕ್ಷೇತ್ರದ ಆಸಕ್ತರಿಗೆ ಮತ್ತು ಪ್ರತಿಭಾವಂತರಿಗೆ ಚಲನಚಿತ್ರ ಆಡಿಷನ್ ಮತ್ತು ಸ್ಕ್ರೀನ್ ಟೆಸ್ಟ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಭಾಗವಹಿಸಿ ಶುಭ ಹಾರೈಸಿದರು, ಇದೇ ವೇಳೆ ಶಾಸಕರನ್ನು ಸನ್ಮಾನಿಸಲಾಯಿತು, ಧರ್ಮಣ್ಣ ಹಟ್ಟಿ, ಮಂಜುನಾಥ ಬಂಡಿಹರ್ಲಾಪೂರ, ವೈಶಂಪಾಯನ ಇತರರು ಕಾರ್ಯಕ್ರಮ ನಡೆಸಿಕೊಟ್ಟರು.


Advertisement

0 comments:

Post a Comment

 
Top