ಕೊಪ್ಪಳ-27- ಇಂದು ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷೆ ಶಕುಂತಲಾ ಹುಡೇಜಾಲಿ ಹೇಳಿದರು. ಅವರು ಶನಿವಾರದಂದು ನಗರದ ಫಾನಘಂಟಿ ಕಲ್ಯಾಣ ಮಂಟಪದಲ್ಲಿ ಕಲಬುರಗಿ ವಿಭಾಗದ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರಗಳ ರಾಜ್ಯಮಟ್ಟದ ವಿಶೇಷ ತರಬೇತಿ
ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಇಂದು ಸಂಸಾರದ ಜಂಜಾಟದ ಜೊತಗೆ
ಸಹಕಾರ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಇಂತಹ ಕಾರ್ಯಗಾರಗಳಲ್ಲಿ ಮಹಿಳೆಯರು
ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದರು. ಕಾರ್ಯಗಾರವನ್ನು ಉದ್ಘಾಟಿಸಿದ ರಾಜ್ಯ
ಸಹಕಾರಿ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಮಾತನಾಡಿ ಮಹಿಳೆಯರ ಬಲವರ್ಧನೆಗೆ
ಎಲ್ಲರೂ ಶ್ರಮೀಸಬೇಕು, ಮಹಿಳೆಯರ ಅಭಿವೃದ್ದಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಎಂದರು. ವೇದಿಕೆಯ ಮೇಲೆ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಹನುಮಂತಪ್ಪ,
ನಿರ್ದೇಶಕರಾದ ತೋಟಪ್ಪ ಕಾಮನೂರ, ಗವಿಸಿದ್ದೇಶ ಹುಡೇಜಾಲಿ, ನೀಲಕಂಠಯ್ಯ ಹಿರೇಮಠ, ಅಮರೇಶ
ಉಪಲಾಪೂರ, ಸಹಕಾರ ಸಂಘದ ವೀಣಾ ನಾಗೇಶ, ಡಾ. ಬೃಹದಾಂಬ, ಡಿ.ಆರ್. ಉಮೇಶ, ಯುನಿಯನ್
ಸಿ.ಇ.ಓ ಶರಣಬಸಪ್ಪ ಕಾಟ್ರಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment