ಕೊಪ್ಪಳ,ಫೆ.೨೭ ಸಂಗೀತ ಮತ್ತು ಸಾಹಿತ್ಯ ಮನುಷ್ಯನನ್ನು ಪ್ರಾಣಿಗಿಂತ ಭಿನ್ನ ಎನಿಸಲು ಕಾರಣವಾಗಿದೆ. ಯಾಕೆಂದರೇ ಇವೆರಡು ಬೇರೆ ಯಾವ ಪ್ರಾಣಿ ಪಕ್ಷಿಗಳಿಗೆ ಸಂವಹನವಾಗಲಾರದು ಅದಕ್ಕೆಂದೇ ಮನುಷ್ಯ ಶ್ರೇಷ್ಟತೆಯನ್ನು ಪಡೆದಿದ್ದಾನೆ ಎಂದು ಸಮೀಪದ ಭಾಗ್ಯನಗರದ ಶ್ರೀಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ೨೦೧೫-೧೬ ನೇ ಸಾಲಿನ ನೊಂದಾಯಿತ ಸಂಘ-ಸಂಸ್ಥೆಗಳ ಧನ ಸಹಾಯ ಯೋಜನೆಯಡಿಯಲ್ಲಿ ಫೆ.೨೬ ರಂದು ಏರ್ಪಡಿಸಿದ್ದ ೧೨ ನೇ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು. ಅಕ್ಬರನ ಆಸ್ಥಾನದಲ್ಲಿದ್ದ ತಾನಸೇನ್‌ನು ಮೇಘಮಲ್ಹಾರ ರಾಗದಿಂದ ಮಳೆ ಬರಿಸುವ ಮತ್ತು ದೀಪಕರಾಗದಿಂದ ದೀಪ ಬೆಳಗಿಸುವ ಸಾಮರ್ಥ್ಯ ಹೊಂದಿದ್ದರು. ಸಂಗೀತಕ್ಕೆ ಯಾವುದೇ ಜಾತಿ,ಮತ ಧರ್ಮಗಳಿಲ್ಲ. ಅದಕ್ಕೆ ಪುಟ್ಟರಾಜ ಗವಾಯಿಗಳ ಪಂಚಾಕ್ಷರಿ ಸಂಗೀತ ಶಾಲೆ ಅಂಧ ಅನಾಥರಿಗೆಲ್ಲಾ ಆಶ್ರಯವಾದುದ್ದೆ ನಿದರ್ಶನ ಎಂದು ಅಭಿಪ್ರಾಯ ಪಟ್ಟರು. ಪತ್ರಕರ್ತ ಸೋಮರಡ್ಡಿ ಅಳವಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಹಿತ್ಯಕ್ಕೆ ಪ್ರಚಾರ ಮತ್ತು ಶ್ರೇಷ್ಠತೆ ಪ್ರಾಪ್ತವಾಗುವುದು. ಸಂಗೀತದಿಂದ ಭಾಗ್ಯನಗರ ಸಾಹಿತ್ಯ ಸಂಗೀತ ಎರಡಕ್ಕೂ ಹೆಸರಾಗಿದೆ ಎಂದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಹೆಚ್.ಎಸ್. ಪಾಟೀಲರನ್ನು ಮತ್ತು ಹಿರಿಯ ಸಂಗೀತಗಾರ ಗೋವಿಂದರಾಜ ಬೊಮ್ಮಲಾಪುರ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕನ್ನಡ
ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಮಾಜಿ ಜಿ.ಪಂ.
ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ತಾ.ಪಂ. ಸದಸ್ಯರಾದ ದಾನಪ್ಪ ಜಿ. ಕವಲೂರು, ಶ್ರೀನಿವಾಸ
ಹ್ಯಾಟಿ, ರಾಜಪ್ಪ ಹ್ಯಾಟಿ, ಪಿಎಸ್‌ಐ ವಿಶ್ವನಾಥ ಹಿರೇಗೌಡ ಕುಕನೂರು, ಪತ್ರಕರ್ತ ಶರಣಪ್ಪ
ಬಾಚಲಾಪುರ, ಮಾಸ್ತಿ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯರಾದ ಪರಶುರಾಮ ಮ್ಯಾಳಿ,
ಉಪಸ್ಥಿತರಿದ್ದರು. ಸಂಗೀತ ಕಲಾವಿದರಾದ ಸದಾಶಿವ ಪಾಟೀಲ್, ಕೊಪ್ಪಳ ಸಿಪಿಐ ಆರ್.ಎಸ್.
ಉಜ್ಜನಕೊಪ್ಪ, ನಾಗರಾಜ ಶ್ಯಾವಿ, ಪ್ರತಿಮಾ ಬೊಮ್ಮಲಾಪುರ, ಸಂಜಯ ಅಂದ್ರಾಳ, ಶಂಕುತಲಾ
ಬೇನಾಳ, ಪೂಜಾ ಹನುಮಸಾಗರ, ಅಂಬಿಕಾ ಉಪ್ಪಾರ, ಲಚ್ಚಣ್ಣ ಹಳಪೇಟೆ, ಮಹೆಬೂಬ ಕಿಲ್ಲೇದಾರ,
ಮಲ್ಲಿಕಾ ಮಾಂಡಗೊಂಡ ಭಾಗವಹಿಸಿದ್ದರು. ಕೊನೆಯಲ್ಲಿ ಪ್ರಾಚಾರ್ಯರಾದ ರಾಮಚಂದ್ರಪ್ಪ
ಉಪ್ಪಾರ ಮಂಗಲಗೀತೆ ಹಾಡಿದರು. ಪ್ರಾರಂಭದಲ್ಲಿ ಶ್ರೀಗುರು ಪಂಚಾಕ್ಷರಿ ಸಂಗೀತ ಸೇವಾ
ಸಂಸ್ಥೆ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಸಂಗೀತಗಾರರಿಗೆಲ್ಲಾ ಸಂಸ್ಥೆಯಿಂದ
ಸನ್ಮಾನಿಸಲಾಯಿತು.
Home
»
Koppal News
»
koppal organisations
» ಸಂಗೀತ ಮತ್ತು ಸಾಹಿತ್ಯ ಮನುಷ್ಯನನ್ನು ಪ್ರಾಣಿಗಿಂತ ಭಿನ್ನವಾಗಿಸುತ್ತವೆ ವಿಠ್ಠಪ್ಪ ಗೋರಂಟ್ಲಿ.
Subscribe to:
Post Comments (Atom)
0 comments:
Post a Comment