PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ. ೨೭ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಯೋಜನೆಗಳಿಗೆ ಕಳೆದ ವರ್ಷಕ್ಕಿಂತ ಈ ವರ್ಷದ ರೈಲ್ವೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕಳೆದ ಫೆ. ೨೫ ರಂದು ರೈಲ್ವೆ ಬಜೆಟ್ ಮಂಡಿಸಿದ್ದು, ಇದರಲ್ಲಿ ಮುನಿರಾಬಾದ್-ಮೆಹಬೂಬನಗರ ರೈಲ್ವೆ ಕಾಮಗಾರಿಗೆ ರೂ. ೧೮೦ ಕೋಟಿ, ಗದಗ-ವಾಡಿ ರೈಲ್ವೆ ಯೋಜನೆಗೆ- ರೂ. ೬೦ ಕೋಟಿ., ಹೊಸಪೇಟೆ-ಹರ್ಲಾಪುರ ಡಬ್ಲಿಂಗ್ ಕಾಮಗಾರಿಗೆ- ರೂ. ೩೦೦ ಕೋಟಿ, ಭಾಗ್ಯನಗರ ರೈಲ್ವೆ ಗೇಟ್ ಸಂ: ೬೨ ರ ಮೇಲ್ಸೇತುವೆ ಕಾಮಗಾರಿಗೆ- ರೂ. ೧೭. ೫೦ ಕೋಟಿ. ಹಾಗೂ ಕಿನ್ನಾಳ ರಸ್ತೆ ರೈಲ್ವೆ ಗೇಟ್‌ಸಂಖ್ಯೆ ೬೪ ರ ಕೆಳ ಸೇತುವೆ ಕಾಮಗಾರಿಗೆ- ರೂ. ೦೮ ಕೋಟಿ ಗಳ ಅನುದಾನವನ್ನು ಪ್ರಸಕ್ತ ರೈಲ್ವೆ ಬಜೆಟ್‌ನಲ್ಲಿ ಒದಗಿಸಲಾಗಿದೆ.  ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲವಾಗುವಂತೆ ಕಳೆದ ವರ್ಷಕ್ಕಿಂತ, ಪ್ರಸಕ್ತ ವರ್ಷ ಹೆಚ್ಚಿನ ಅನುದಾನ ನೀಡಿದ್ದಕ್ಕಾಗಿ ಸಂಸದ ಸಂಗಣ್ಣ ಕರಡಿ ಅವರು ರೈಲ್ವೆ ಸಚಿವರನ್ನು ಅಭಿನಂದಿಸಿದ್ದಾರೆ ಎಂದು ಸಂಸದರ ಕಚೇರಿ ತಿಳಿಸಿದೆ.

Advertisement

0 comments:

Post a Comment

 
Top