PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ. ೨೭ (ಕ ವಾ) ಕೊಪ್ಪಳ ತಾಲೂಕು ಹಿಟ್ನಾಳ ಗ್ರಾಮದ ಕಸ್ತೂರಿ (೨೫) ಗಂಡ ಶಿವಪ್ಪ ಕಂಬಾರ ಎಂಬ ಮಹಿಳೆ ಕಳೆದ ಜನವರಿ ೨೨ ರಿಂದ ಕಾಣೆಯಾಗಿದ್ದು, ಮಹಿಳೆಯ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪಿಎಸ್‌ಐ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಹಿಟ್ನಾಳ ಗ್ರಾಮದ ಶಿವಪ್ಪ ಯಮನಪ್ಪ ಕಂಬಾರ ಅವರು ತಮ್ಮ ಪತ್ನಿ ಕಸ್ತೂರಿ (೨೫) ಕಳೆದ ಜ. ೨೨ ರಂದು ಮಧ್ಯಾಹ್ನ ೨ ಗಂಟೆಗೆ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.  ಇವರನ್ನು ಹುಡುಕಿಕೊಡುವಂತೆ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.  ಕಾಣೆಯಾದ ಮಹಿಳೆಯ ಚಹರೆ ಗುರುತು ಇಂತಿದೆ.  ಹೆಸರು- ಕಸ್ತೂರಿ ಗಂಡ ಶಿವಪ್ಪ ಕಂಬಾರ, ವಯಸ್ಸು- ೨೫ ವರ್ಷ, ಜಾತಿ- ಕುಂಬಾರ, ಎತ್ತರ- ಸುಮಾರು ೫ ಅಡಿ, ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು ಭಾಷ ಮಾತನಾಡುತ್ತಾರೆ.  ಈ ಚಹರೆ ಗುರುತಿನ ಯುವತಿ ಕುರಿತು ಮಾಹಿತಿ ದೊರೆತಲ್ಲಿ, ಎಸ್‌ಪಿ, ಕೊಪ್ಪಳ-೦೮೫೩೯-೨೩೦೧೧೧, ಡಿವೈಎಸ್‌ಪಿ, ಕೊಪ್ಪಳ-೦೮೫೩೯-೨೨೨೪೩೩, ಸಿಪಿಐ ಕೊಪ್ಪಳ ಗ್ರಾಮೀಣ- ೦೮೫೩೯-೨೨೧೩೩೩ ಅಥವಾ ಪಿಎಸ್‌ಐ ಮುನಿರಾಬಾದ್- ೦೮೫೩೯-೨೭೦೩೩೩ ಕ್ಕೆ ಸಂಪರ್ಕಿಸಿ ನೀಡುವಂತೆ ತಿಳಿಸಿದೆ.

Advertisement

0 comments:

Post a Comment

 
Top