ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಮತ್ತು ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳಿಗೆ ೨೦೧೫-೧೬ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ದೊರೆತಿದೆ. ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ಗೈಡ್ಸ್ ವಿದ್ಯಾರ್ಥಿನಿಯ ಆಶಾ ಅತ್ತನೂರ ಮತ್ತು ಆದರ್ಶ ವಿದ್ಯಾಲಯದ ಸ್ಕೌಟ್ಸ್ ವಿದ್ಯಾರ್ಥಿ ಶರಣು ಹವಾಲ್ದಾರ ಇವರಿಗೆ ಇತ್ತೀಚಿಗೆ ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಪುರಸ್ಕಾರವನ್ನು ರಾಜ್ಯಪಾಲರಾದ ವಾಜುಬಾಯಿ ರೂಡಾಬಾಯಿ ವಾಲಾ ವಿತರಿಸಿದರು. ಈ ಸಂದರ್ಭದಲ್ಲಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಸ್ಕೌಟ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂದ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೇಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ, ಮುಖ್ಯೋಪಾದ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ, ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಯ ಮಹಾಂತೇಶ ಸೇರಿದಂತೆ ಪೋಷಕರು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Home
»
karnataka news information
»
koppal district information
»
Koppal News
»
school college koppal district
» ಸರಸ್ವತಿ ವಿದ್ಯಾಮಂದಿರ ಮತ್ತು ಆದರ್ಶ ವಿದ್ಯಾಲಯ ಶಾಲೆಗಳಿಗೆ ರಾಜ್ಯ ಪುರಸ್ಕಾರ- State Award Scouts & Guides
Subscribe to:
Post Comments (Atom)

0 comments:
Post a Comment