PLEASE LOGIN TO KANNADANET.COM FOR REGULAR NEWS-UPDATES


ಅಪಘಾತದಲ್ಲಿ ಗಾಯಗೊಂಡಿದ್ದ ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯ ಎಎಸ್ಐ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದು. ಪೋಲಿಸ್ ಠಾಣೆ ಮುಂದೇ ಮೃತ ದೇಹವನ್ನಿಟ್ಟು ಪೋಲಿಸ್ ಇಲಾಖೆ ಸಿಬ್ಬಂಧಿಗಳು ಶ್ರಧಾಂಜಲಿ ಸಲ್ಲಿಸಿದ್ರು.ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಎಎಸ್ಐ ಯಾಗಿದ್ದ ಕನಕಪ್ಪ ಕಳೆದ 7 ದಿನಗಳ ಹಿಂದೇ ಕರ್ತವ್ಯ ನಿಮಿತ್ಯ ತೆರಳುತ್ತಿರುವ ಸಂದರ್ಭದಲ್ಲಿ ಹೊಸಪೇಟೆ ರಸ್ತೇಯ ಬಸಪೂರ ಗ್ರಾಮದ ಬಳಿ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ,ತೀರ್ವವಾಗಿ ಗಾಯಗೊಂಡಿದ್ದರು, ಕನಕಪ್ಪರನ್ನು ಹುಬ್ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೇ ನೀಡಲಾಗುತ್ತಿತ್ತು,ಆದ್ರೆ ಚಿಕಿತ್ಸೇ ಫಲಕಾರಿಯಾಗದೆ ಕಳೆದ ರಾತ್ರಿ ಕೊನೆಯುಸೊರೆಳೆದಿದ್ದಾರೆ.ಎಲ್ಲಾ ಪೋಲಿಸ್ ಸಿಬ್ಬಂಧಿಗಳು ಕೊಪ್ಪಳ ಗ್ರಾಮೀಣ ಠಾಣೆ ಮುಂದೇ ಕಳೆಬರಹನಿಟ್ಟು ಕಂಬನಿ ಮಿಡಿದ ಪೋಲೀಸ್ ಸಿಬ್ಬಂಧೀಗಳು ಶ್ರದಾಂಜಲಿ ಸಲ್ಲಿಸಿದ್ರು. ಸಂದರ್ಭದಲ್ಲಿ ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿತ್ತು.ಕೊಪ್ಪಳ ಜಿಲ್ಲಾ ವರಿಷ್ಠಾಧೀಕಾರಿ ತ್ಯಾಗರಾಜನ್,ಡಿವೈಎಎಸ್ಪಿ,ಸೇರಿದಂತೆ ಪೋಲಿಸ್ ಹಿರಿಯ ಅಧೀಕಾರಿಗಳು ಬಂದು ಶ್ರಧಾಂಜಲಿ ಸಲ್ಲಿಸಿದ್ರು. ಒಂದುವರೆ ತಿಂಗಳ ಹಿಂದೆಯಷ್ಟೇ ಎಎಸ್ಐ ಯಾಗಿ ಭಡ್ತಿ ಹೊಂದಿದ್ದ ಕನಕಪ್ಪ,ಕರ್ತವ್ಯನಿಷ್ಠೇ ಹೊಂದಿದ್ದರು.ಆದ್ರೆ ವಿದಿಯಾಟ ಮುಂದೇ ಏನು ಎಂಬ್ಬಂತೆ ಬಡ್ತಿ ಯಾಗಿ ಒಂದುವರೆ ತಿಂಗಳಲ್ಲೆ ಕೊನೆಯುಸಿರೆಳೆದಿದ್ದಾರೆ.

Advertisement

0 comments:

Post a Comment

 
Top