PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ. ೦೪ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಗಂಗಾವತಿ ತಾಲೂಕಿನಲ್ಲಿ ಅತಿ ಹೆಚ್ಚು ೨೨೦೧೩೯ ಮತದಾರರಿದ್ದರೆ ೨೭೧ ಮತಗಟ್ಟೆಗಳಿವೆ.  ಯಲಬುರ್ಗಾ ತಾಲೂಕು ೧೭೨೫೩೫ ಅತಿ ಕಡಿಮೆ ಮತದಾರರನ್ನು ಹೊಂದಿದ್ದು, ೨೧೩ ಮತಗಟ್ಟೆಗಳನ್ನು ಹೊಂದಿದೆ. 
     ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಒಟ್ಟು ೨೯ ಕ್ಷೇತ್ರಗಳಿದ್ದು, ಪುರುಷ-೩೯೪೫೬೭, ಮಹಿಳೆ-೩೮೯೪೧೬, ಇತರೆ-೩೦ ಹಾಗೂ ಒಟ್ಟು ೭೮೪೦೧೩ ಮತದಾರರಿದ್ದಾರೆ.  ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಒಟ್ಟು ೯೪೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕುಷ್ಟಗಿ ತಾಲೂಕಿನಲ್ಲಿ  ೦೧ ರಿಂದ ೦೭ ರವರೆಗಿನ ಒಟ್ಟು ೦೭ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಪುರುಷ-೯೩೫೩೮ ಮಹಿಳೆ-೯೧೧೦೫, ಇತರೆ-೦೬, ಒಟ್ಟು- ೧೮೪೬೪೯ ಮತದಾರರಿದ್ದಾರೆ. ಒಟ್ಟು ೨೧೮ ಮತಗಟ್ಟೆಗಳಿವೆ.
     ಹನುಮನಾಳ ಕ್ಷೇತ್ರದಲ್ಲಿ ಪುರುಷ-೧೩೮೦೦, ಮಹಿಳೆ-೧೩೧೯೪, ಒಟ್ಟು- ೨೬೯೯೪ ಮತದಾರರಿದ್ದಾರೆ.  ಇಲ್ಲಿ ೩೦ ಮತಗಟ್ಟೆಗಳಿವೆ.  ಹನುಮಸಾಗರ ಕ್ಷೇತ್ರದಲ್ಲಿ ಪುರುಷ-೧೪೭೭೫ ಮಹಿಳೆ-೧೪೮೩೪, ಒಟ್ಟು- ೨೯೬೦೯ ಮತದಾರರಿದ್ದಾರೆ.  ಇಲ್ಲಿ ೩೬ ಮತಗಟ್ಟೆಗಳಿವೆ. ಚಳಗೇರಾ ಕ್ಷೇತ್ರದಲ್ಲಿ ಪುರುಷ-೧೧೭೦೭ ಮಹಿಳೆ-೧೧೩೩೭, ಇತರೆ-೦೧, ಒಟ್ಟು- ೨೩೦೪೫ ಮತದಾರರಿದ್ದಾರೆ.  ಇಲ್ಲಿ ೩೬ ಮತಗಟ್ಟೆಗಳಿವೆ.  ಕೊರಡಕೇರಾ ಕ್ಷೇತ್ರವು ಪುರುಷ-೧೪೭೩೪ ಮಹಿಳೆ-೧೪೦೨೭, ಇತರೆ-೦೨, ಒಟ್ಟು- ೨೮೭೬೩ ಮತದಾರರನ್ನು ಹೊಂದಿದ್ದು.  ಇಲ್ಲಿ ೩೪ ಮತಗಟ್ಟೆಗಳಿವೆ. ಹಿರೇಮನ್ನಾಪುರ ಕ್ಷೇತ್ರದಲ್ಲಿ ಪುರುಷ-೧೨೩೦೫ ಮಹಿಳೆ-೧೨೨೭೮, ಇತರೆ-೦೧, ಒಟ್ಟು- ೨೪೫೮೪ ಮತದಾರರಿದ್ದಾರೆ.  ಇಲ್ಲಿ ೨೯ ಮತಗಟ್ಟೆಗಳಿವೆ.  ಯರಗೇರಾ ಕ್ಷೇತ್ರದಲ್ಲಿ ಪುರುಷ-೧೨೧೭೧ ಮಹಿಳೆ-೧೧೫೦೩, ಇತರೆ-೦೧, ಒಟ್ಟು- ೨೩೬೭೫ ಮತದಾರರಿದ್ದಾರೆ.  ಇಲ್ಲಿ ೨೮ ಮತಗಟ್ಟೆಗಳಿವೆ. ಮತ್ತು ಮಣೇದಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ-೧೪೦೪೬ ಮಹಿಳೆ-೧೩೯೩೨, ಇತರೆ-೦೧ ಒಟ್ಟು- ೨೭೯೭೯ ಮತದಾರರಿದ್ದಾರೆ.  ಇಲ್ಲಿ ೩೬ ಮತಗಟ್ಟೆಗಳಿವೆ.   
ಕೊಪ್ಪಳ ತಾಲೂಕಿನಲ್ಲಿ ೦೮ ರಿಂದ ೧೫ ರವರೆಗಿನ ಒಟ್ಟು ೦೮ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಪುರುಷ-೧೦೪೩೮೦ ಮಹಿಳೆ-೧೦೨೩೦೧, ಇತರೆ-೦೯, ಒಟ್ಟು- ೨೦೬೬೯೦ ಮತದಾರರಿದ್ದಾರೆ.  ಇಲ್ಲಿ ಒಟ್ಟು ೨೪೪ ಮತಗಟ್ಟೆಗಳಿವೆ.
     ಅಳವಂಡಿ ಕ್ಷೇತ್ರದಲ್ಲಿ ಪುರುಷ-೧೪೯೯೪, ಮಹಿಳೆ-೧೪೩೧೮, ಇತರೆ-೦೩, ಒಟ್ಟು- ೨೯೩೧೫ ಮತದಾರರಿದ್ದಾರೆ.  ಇಲ್ಲಿ ೩೮ ಮತಗಟ್ಟೆಗಳಿವೆ. ಹಿರೇಸಿಂಧೋಗಿ ಕ್ಷೇತ್ರದಲ್ಲಿ ಪುರುಷ-೧೩೩೨೨, ಮಹಿಳೆ-೧೩೨೭೬, ಇತರೆ-೦೧, ಒಟ್ಟು- ೨೬೫೯೯ ಮತದಾರರಿದ್ದಾರೆ.  ಇಲ್ಲಿ ೩೧ ಮತಗಟ್ಟೆಗಳಿವೆ.   ಲೇಬಗೇರಿ ಕ್ಷೇತ್ರದಲ್ಲಿ ಪುರುಷ-೧೩೫೧೨, ಮಹಿಳೆ-೧೩೧೫೮, ಒಟ್ಟು-೨೬೩೧೦ ಮತದಾರರಿದ್ದು, ೩೧ ಮತಗಟ್ಟೆಗಳಿವೆ. ಇರಕಲ್ಲಗಡಾ ಕ್ಷೇತ್ರದಲ್ಲಿ ಪುರುಷ-೧೨೨೪೭, ಮಹಿಳೆ-೧೧೮೧೧, ಒಟ್ಟು-೨೪೦೫೮ ಮತದಾರರಿದ್ದು, ೨೯ ಮತಗಟ್ಟೆಗಳಿವೆ.  ಬಂಡಿಹರ್ಲಾಪುರ ಕ್ಷೇತ್ರದಲ್ಲಿ ಪುರುಷ-೧೩೦೨೧, ಮಹಿಳೆ-೧೩೧೯೯, ಇತರೆ-೦೨, ಒಟ್ಟು-೨೬೨೨೨ ಮತದಾರರಿದ್ದು, ೩೩ ಮತಗಟ್ಟೆಗಳಿವೆ. ಹಿಟ್ನಾಳ ಕ್ಷೇತ್ರದಲ್ಲಿ ಪುರುಷ-೧೨೧೪೭, ಮಹಿಳೆ-೧೨೩೬೩, ಒಟ್ಟು-೨೪೫೧೦, ಮತದಾರರಿದ್ದು, ೨೭ ಮತಗಟ್ಟೆಗಳಿವೆ.  ಗಿಣಿಗೇರಾ ಕ್ಷೇತ್ರದಲ್ಲಿ ಪುರುಷ-೧೧೧೫೧, ಮಹಿಳೆ-೧೦೬೮೩, ಒಟ್ಟು-೨೧೮೩೪ ಮತದಾರರಿದ್ದು, ೨೩ ಮತಗಟ್ಟೆಗಳಿವೆ. ಗೊಂಡಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ-೧೪೩೪೬, ಮಹಿಳೆ-೧೩೪೯೩, ಇತರೆ-೦೩, ಒಟ್ಟು-೨೭೮೪೨ ಮತದಾರರಿದ್ದು, ೩೨ ಮತಗಟ್ಟೆಗಳಿವೆ.
ಗಂಗಾವತಿ ತಾಲೂಕಿನಲ್ಲಿ ೧೬ ರಿಂದ ೨೩ ರವರೆಗಿನ ಒಟ್ಟು ೦೮ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಪುರುಷ-೧೦೮೯೩೬, ಮಹಿಳೆ- ೧,೧೧,೧೯೨, ಇತರೆ-೧೧, ಒಟ್ಟು- ೨೨೦೧೩೯ ಮತದಾರರಿದ್ದಾರೆ.  ತಾಲೂಕಿನಲ್ಲಿ ಒಟ್ಟು ೨೭೧ ಮತಗಟ್ಟೆಗಳಿವೆ.
     ಆನೇಗುಂದಿ ಕ್ಷೇತ್ರದಲ್ಲಿ ಪುರುಷ-೧೩೮೦೫, ಮಹಿಳೆ-೧೪೬೩೬, ಇತರೆ-೦೧, ಒಟ್ಟು ೨೮೪೪೨ ಮತದಾರರಿದ್ದಾರೆ, ಒಟ್ಟು ೩೭ ಮತಗಟ್ಟೆಗಳಿವೆ.  ಮರಳಿ ಕ್ಷೇತ್ರದಲ್ಲಿ ಪುರುಷ-೧೪೦೧೮, ಮಹಿಳೆ-೧೪೫೧೮, ಇತರೆ-೦೪, ಒಟ್ಟು ೨೮೫೪೦ ಮತದಾರರಿದ್ದಾರೆ, ಒಟ್ಟು ೩೬ ಮತಗಟ್ಟೆಗಳಿವೆ.  ಸಿದ್ದಾಪುರ ಕ್ಷೇತ್ರದಲ್ಲಿ ಪುರುಷ-೧೪೨೭೯, ಮಹಿಳೆ-೧೪೪೮೯, ಇತರೆ-೦೧, ಒಟ್ಟು ೨೮೭೬೯ ಮತದಾರರಿದ್ದಾರೆ, ಒಟ್ಟು ೩೨ ಮತಗಟ್ಟೆಗಳಿವೆ. ಹೇರೂರು ಕ್ಷೇತ್ರದಲ್ಲಿ ಪುರುಷ-೧೩೩೩೩, ಮಹಿಳೆ-೧೩೬೫೮, ಇತರೆ-೦೨, ಒಟ್ಟು ೨೬೯೯೩ ಮತದಾರರಿದ್ದಾರೆ, ಒಟ್ಟು ೩೩ ಮತಗಟ್ಟೆಗಳಿವೆ. ಹುಲಿಹೈದರ್ ಕ್ಷೇತ್ರವು ಪುರುಷ-೧೪೩೪೬, ಮಹಿಳೆ-೧೪೩೫೦, ಇತರೆ-೦೧, ಒಟ್ಟು ೨೮೬೯೭ ಮತದಾರರನ್ನು ಒಳಗೊಂಡಿದ್ದು, ಒಟ್ಟು ೩೯ ಮತಗಟ್ಟೆಗಳಿವೆ. ನವಲಿ ಕ್ಷೇತ್ರದಲ್ಲಿ ಪುರುಷ-೧೨೮೫೦, ಮಹಿಳೆ-೧೨೯೨೦, ಒಟ್ಟು ೨೫೭೭೦ ಮತದಾರರಿದ್ದಾರೆ, ಒಟ್ಟು ೨೯ ಮತಗಟ್ಟೆಗಳಿವೆ. ಯರಡೋಣ ಕ್ಷೇತ್ರದಲ್ಲಿ ಪುರುಷ-೧೨೭೧೩, ಮಹಿಳೆ-೧೩೩೨೨, ಇತರೆ-೦೨, ಒಟ್ಟು ೨೬೦೩೭ ಮತದಾರರಿದ್ದಾರೆ, ಒಟ್ಟು ೨೯ ಮತಗಟ್ಟೆಗಳಿವೆ. ಮತ್ತು ಚಿಕ್ಕಮಾದಿನಾಳ-ವೆಂಕಟಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ-೧೩೫೯೨, ಮಹಿಳೆ-೧೩೨೯೯, ಒಟ್ಟು ೨೬೮೯೧ ಮತದಾರರಿದ್ದಾರೆ, ಒಟ್ಟು ೩೬ ಮತಗಟ್ಟೆಗಳಿವೆ..
ಯಲಬುರ್ಗಾ ತಾಲೂಕಿನಲ್ಲಿ ೨೪ ರಿಂದ ೨೯ ರವರೆಗಿನ ಒಟ್ಟು ೦೬ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಪುರುಷ-೮೭೭೧೩, ಮಹಿಳೆ-೮೪೮೧೮, ಇತರೆ-೦೪, ಒಟ್ಟು ೧೭೨೫೩೫ ಮತದಾರರಿದ್ದಾರೆ, ಒಟ್ಟು ೨೧೩ ಮತಗಟ್ಟೆಗಳಿವೆ.
     ಹಿರೇವಂಕಲಕುಂಟಾ ಕ್ಷೇತ್ರದಲ್ಲಿ ಪುರುಷ-೧೪೫೭೯, ಮಹಿಳೆ-೧೪೨೧೮, ಒಟ್ಟು ೨೮೭೯೭ ಮತದಾರರಿದ್ದಾರೆ, ಒಟ್ಟು ೩೭ ಮತಗಟ್ಟೆಗಳಿವೆ.  ಚಿಕ್ಕಮ್ಯಾಗೇರಿ ಕ್ಷೇತ್ರದಲ್ಲಿ ಪುರುಷ-೧೩೬೯೯, ಮಹಿಳೆ-೧೩೩೨೧, ಒಟ್ಟು ೨೭೦೨೦ ಮತದಾರರಿದ್ದಾರೆ, ಒಟ್ಟು ೩೬ ಮತಗಟ್ಟೆಗಳಿವೆ.  ಮಂಗಳೂರು ಕ್ಷೇತ್ರದಲ್ಲಿ ಪುರುಷ-೧೪೪೦೩, ಮಹಿಳೆ-೧೩೭೨೮, ಇತರೆ-೦೩, ಒಟ್ಟು ೨೮೧೩೪ ಮತದಾರರಿದ್ದಾರೆ, ಒಟ್ಟು ೩೧ ಮತಗಟ್ಟೆಗಳಿವೆ., ತಳಕಲ್ಲ ಕ್ಷೇತ್ರದಲ್ಲಿ ಪುರುಷ-೧೪೫೩೪, ಮಹಿಳೆ-೧೪೩೭೧, ಒಟ್ಟು ೨೮೯೦೫ ಮತದಾರರಿದ್ದಾರೆ, ಒಟ್ಟು ೩೭ ಮತಗಟ್ಟೆಗಳಿವೆ. ಇಟಗಿ ಕ್ಷೇತ್ರದಲ್ಲಿ ಪುರುಷ-೧೪೩೦೩, ಮಹಿಳೆ-೧೩೫೯೫, ಇತರೆ-೦೧, ಒಟ್ಟು ೨೭೮೯೯ ಮತದಾರರಿದ್ದಾರೆ, ಒಟ್ಟು ೩೫ ಮತಗಟ್ಟೆಗಳಿವೆ.  ಮುಧೋಳ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ-೧೬೧೯೫, ಮಹಿಳೆ-೧೫೫೮೫, ಒಟ್ಟು ೩೧೭೮೦ ಮತದಾರರಿದ್ದಾರೆ, ಒಟ್ಟು ೩೭ ಮತಗಟ್ಟೆಗಳಿವೆ.

Advertisement

0 comments:

Post a Comment

 
Top