PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಫೆ.೦೪ (ಕ ವಾ) ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ-೨೦೧೬ ಕ್ಕೆ ಸಂಬಂಧಿಸಿದಂತೆ ಕುಷ್ಟಗಿ ತಾಲೂಕಾ ಪಂಚಾಯತಿಯ ಕ್ಷೇತ್ರವಾರು ಮತದಾರರ ಮತ್ತು ಮತಗಟ್ಟೆಗಳ ಸಂಖ್ಯಾ ವಿವರ ಈ ಕೆಳಗಿನಂತಿದೆ.
     ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ೨೫ ತಾಲೂಕಾ ಪಂಚಾಯತ್ ಕ್ಷೇತ್ರಗಳಲ್ಲಿ ಪುರುಷ -೯೩,೫೩೮ ಮತ್ತು ಮಹಿಳೆ-೯೧,೧೦೫ ಹಾಗೂ ಇತರೆ-೦೬ ಜನ ಮತದಾರರನ್ನು ಒಳಗೊಂಡಂತೆ ಒಟ್ಟು ೧,೮೪,೬೪೯ ಮತದಾರರಿದ್ದು, ೨೧೮ ಮತಗಟ್ಟೆಗಳಿವೆ.
     ಕ್ಷೇತ್ರವಾರು ಮತದಾರರ ಸಂಖ್ಯೆ, ಮತಗಟ್ಟೆಗಳ ಸಂಖ್ಯಾ ವಿವರ ಇಂತಿದೆ. ನಿಲೋಗಲ್ಲ  ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೧೭೨, ಮಹಿಳೆ ೩೦೨೮ ಸೇರಿದಂತೆ ಒಟ್ಟು ೬೨೦೦ ಮತದಾರರಿದ್ದಾರೆ. ತುಗ್ಗಲದೋಣಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೩೭೧೪, ಮಹಿಳೆ-೩೬೨೦ ಸೇರಿದಂತೆ ಒಟ್ಟು೭೩೩೪ ಮತದಾರರಿದ್ದಾರೆ.  ಹನಮನಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೮೬೫, ಮಹಿಳೆ-೩೬೭೦ ಸೇರಿದಂತೆ ಒಟ್ಟು ೭೫೩೫ ಮತದಾರರಿದ್ದಾರೆ. ಮಾಲಗಿತ್ತಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೬ ಮತಗಟ್ಟೆಗಳಿದ್ದು, ಪುರುಷ-೩೦೪೯, ಮಹಿಳೆ-೨೮೭೬  ಸೇರಿದಂತೆ ಒಟ್ಟು ೫೯೨೫ ಮತದಾರರಿದ್ದಾರೆ.  ಹನಮಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೪ ಮತಗಟ್ಟೆಗಳಿದ್ದು, ಪುರುಷ-೫೮೫೧, ಮಹಿಳೆ-೬೦೯೬ ಸೇರಿದಂತೆ ಒಟ್ಟು ೧೧೯೪೭ ಮತದಾರರಿದ್ದಾರೆ.   ಕಬ್ಬರಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೨೯೦೪, ಮಹಿಳೆ-೨೭೯೧ ಸೇರಿದಂತೆ ಒಟ್ಟು ೫೬೯೫ ಮತದಾರರಿದ್ದಾರೆ.   ಕಾಟಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೦೧೦, ಮಹಿಳೆ-೨೮೨೨  ಸೇರಿದಂತೆ ಒಟ್ಟು ೫೮೩೨ ಮತದಾರರಿದ್ದಾರೆ.   ಹೂಲಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೦೧೦, ಮಹಿಳೆ-೩೧೨೫ ಸೇರಿದಂತೆ ಒಟ್ಟು ೬೧೩೫ ಮತದಾರರಿದ್ದಾರೆ.    ಕುಂಭಳಾವತಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೪೦೭೫, ಮಹಿಳೆ-೩೮೩೯ ಸೇರಿದಂತೆ ಒಟ್ಟು ೭೯೧೪ ಮತದಾರರಿದ್ದಾರೆ.   ಬೆನಕನಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೦ ಮತಗಟ್ಟೆಗಳಿದ್ದು, ಪುರುಷ-೪೦೨೨, ಮಹಿಳೆ-೩೮೪೯ ಸೇರಿದಂತೆ ಒಟ್ಟು ೭೮೭೧ ಮತದಾರರಿದ್ದಾರೆ.  ಯರಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೪೦೭೪, ಮಹಿಳೆ-೩೮೧೫ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೭೮೯೦ ಮತದಾರರಿದ್ದಾರೆ.   ಅಡವಿಭಾವಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೩೩೨, ಮಹಿಳೆ-೩೨೦೪ ಹಾಗೂ ಇತರೆ-೦೧  ಸೇರಿದಂತೆ ಒಟ್ಟು ೬೫೩೭ ಮತದಾರರಿದ್ದಾರೆ.   ಚಳಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೪೦೫೯, ಮಹಿಳೆ-೩೯೪೧ ಸೇರಿದಂತೆ ಒಟ್ಟು ೮೦೦೦ ಮತದಾರರಿದ್ದಾರೆ.   ಕ್ಯಾದಿಗುಪ್ಪ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೪೩೧೬, ಮಹಿಳೆ-೪೧೯೨ ಸೇರಿದಂತೆ ಒಟ್ಟು ೮೫೦೮ ಮತದಾರರಿದ್ದಾರೆ.   ಬಿಜಕಲ್ಲ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೦ ಮತಗಟ್ಟೆಗಳಿದ್ದು, ಪುರುಷ-೪೪೭೭, ಮಹಿಳೆ-೪೩೩೮ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೮೮೧೬ ಮತದಾರರಿದ್ದಾರೆ.   ಕಂದಕೂರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೫೮೭, ಮಹಿಳೆ-೩೩೯೬ ಸೇರಿದಂತೆ ಒಟ್ಟು ೬೯೮೩ ಮತದಾರರಿದ್ದಾರೆ. ತಳುವಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೧೬೭, ಮಹಿಳೆ-೩೦೧೩ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೬೧೮೧ ಮತದಾರರಿದ್ದಾರೆ.   ಕೊರಡಕೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೩೫೦೩, ಮಹಿಳೆ-೩೨೮೦ ಸೇರಿದಂತೆ ಒಟ್ಟು ೬೭೮೩  ಮತದಾರರಿದ್ದಾರೆ. ಹಿರೇಮನ್ನಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೪೦೧೭, ಮಹಿಳೆ-೪೦೪೪ ಹಾಗೂ ಇತರೆ-೦೧ ಸೇರಿದಂತೆ ಒಟ್ಟು  ೮೦೬೨ ಮತದಾರರಿದ್ದಾರೆ. ಮುದೇನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೦ ಮತಗಟ್ಟೆಗಳಿದ್ದು, ಪುರುಷ-೩೮೪೪, ಮಹಿಳೆ-೩೯೧೫ ಸೇರಿದಂತೆ ಒಟ್ಟು ೭೭೫೯ ಮತದಾರರಿದ್ದಾರೆ.   ದೋಟಿಹಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೦ ಮತಗಟ್ಟೆಗಳಿದ್ದು, ಪುರುಷ-೪೪೪೪, ಮಹಿಳೆ-೪೩೧೯ ಸೇರಿದಂತೆ ಒಟ್ಟು ೮೭೬೩ ಮತದಾರರಿದ್ದಾರೆ. ಜುಮ್ಲಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೧ ಮತಗಟ್ಟೆಗಳಿದ್ದು, ಪುರುಷ-೩೬೨೧, ಮಹಿಳೆ-೩೬೬೪ ಹಾಗೂ ಇತರೆ-೦೧ ಸೇರಿದಂತೆ ಒಟ್ಟು  ೭೨೮೬ ಮತದಾರರಿದ್ದಾರೆ. ಹುಲಿಯಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೩೭೮, ಮಹಿಳೆ-೩೩೩೭ ಸೇರಿದಂತೆ ಒಟ್ಟು ೬೭೧೫ ಮತದಾರರಿದ್ದಾರೆ. ಕಳ್ಳಮಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೪೦೩, ಮಹಿಳೆ-೩೩೧೩ ಸೇರಿದಂತೆ ಒಟ್ಟು ೬೭೧೬ ಮತದಾರರಿದ್ದಾರೆ. ಮಣೇದಾಳ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೩೬೪೪, ಮಹಿಳೆ-೩೬೧೮ ಸೇರಿದಂತೆ ಒಟ್ಟು ೭೨೬೨ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

Advertisement

0 comments:

Post a Comment

 
Top