PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ. ೦೩ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರದಂದು ಒಟ್ಟು ೩೩ ನಾಮಪತ್ರಗಳು ಹಾಗೂ ತಾಲೂಕಾ ಪಂಚಾಯತಿಗೆ ಸಂಬಂಧಿಸಿದಂತೆ ೪೧ ನಾಮಪತ್ರಗಳು ಸಲ್ಲಿಕೆಯಾಗಿವೆ. 
ಜಿಲ್ಲಾ ಪಂಚಾಯತಿ : ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬುಧವಾರದಂದು ಕಾಂಗ್ರೆಸ್-೧೧, ಬಿಜೆಪಿ-೦೯, ಜೆಡಿಎಸ್-೦೬, ಪಕ್ಷೇತರ-೦೭ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟು ೨೯ ಕ್ಷೇತ್ರಗಳ ಪೈಕಿ ೧೪ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
      ಕುಷ್ಟಗಿ ತಾಲೂಕಿನಲ್ಲಿ ಜಿ.ಪಂ.ನ ಒಟ್ಟು ೦೭ ಕ್ಷೇತ್ರಗಳಿದ್ದು, ೧೬ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕಾಂಗ್ರೆಸ್-೫, ಬಿಜೆಪಿ-೫, ಜೆಡಿಎಸ್-೪, ಪಕ್ಷೇತರ-೦೨ ನಾಮಪತ್ರಗಳು ಸಲ್ಲಿಕೆಯಾಗಿದ್ದು, ೦೨ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಕೊಪ್ಪಳ ತಾಲೂಕಿನಲ್ಲಿ ಜಿ.ಪಂ.ನ ಒಟ್ಟು ೦೮ ಕ್ಷೇತ್ರಗಳಿದ್ದು ೦೫ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕಾಂಗ್ರೆಸ್-೦೩, ಜೆಡಿಎಸ್-೦೧, ಪಕ್ಷೇತರ-೦೧ ನಾಮಪತ್ರ ಸಲ್ಲಿಕೆಯಾಗಿದ್ದು, ೦೪ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಗಂಗಾವತಿ ತಾಲೂಕಿನಲ್ಲಿ ಒಟ್ಟು ೦೮ ಕ್ಷೇತ್ರಗಳಿದ್ದು, ೦೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೦೧, ಬಿಜೆಪಿ-೦೩, ಜೆಡಿಎಸ್-೦೧, ಪಕ್ಷೇತರ-೦೩ ನಾಮಪತ್ರ ಸಲ್ಲಿಕೆಯಾಗಿದ್ದು, ೦೫ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಯಲಬುರ್ಗಾ ತಾಲೂಕಿನಲ್ಲಿ ಒಟ್ಟು ೬ ಕ್ಷೇತ್ರಗಳಿದ್ದು, ೦೪ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕಾಂಗ್ರೆಸ್-೦೨, ಬಿಜೆಪಿ-೦೧, ಪಕ್ಷೇತರ-೦೧ ನಾಮಪತ್ರ ಸಲ್ಲಿಕೆಯಾಗಿದ್ದು, ೦೩ ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ತಾಲೂಕಾ ಪಂಚಾಯತಿ : ತಾಲೂಕಾ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಬುಧವಾರದಂದು ಒಟ್ಟು ೪೧ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕಾಂಗ್ರೆಸ್-೧೪, ಬಿಜೆಪಿ-೧೮, ಜೆಡಿಎಸ್-೦೧, ಪಕ್ಷೇತರ-೦೮ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟು ೧೦೯ ಕ್ಷೇತ್ರಗಳ ಪೈಕಿ ೮೬ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಕುಷ್ಟಗಿ ತಾಲೂಕಿನಲ್ಲಿ ಒಟ್ಟು ೨೫ ಕ್ಷೇತ್ರಗಳಿದ್ದು, ೧೬ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕಾಂಗ್ರೆಸ್-೦೬, ಬಿಜೆಪಿ-೦೭, ಜೆಡಿಎಸ್-೦೧.  ೧೮ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಕೊಪ್ಪಳ ತಾಲೂಕಿನಲ್ಲಿ ಒಟ್ಟು ೨೯ ಕ್ಷೇತ್ರಗಳಿದ್ದು ೦೧ (ಬಿಜೆಪಿ) ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ.  ೨೮ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಗಂಗಾವತಿ ತಾಲೂಕಿನಲ್ಲಿ ಒಟ್ಟು ೩೧ ಕ್ಷೇತ್ರಗಳಿದ್ದು, ೧೫ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕಾಂಗ್ರೆಸ್-೦೪, ಬಿಜೆಪಿ-೦೫, ಪಕ್ಷೇತರ-೦೬.  ಇಲ್ಲಿನ ೨೪ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಯಲಬುರ್ಗಾ ತಾಲೂಕಿನಲ್ಲಿ ಒಟ್ಟು ೨೪ ಕ್ಷೇತ್ರಗಳಿದ್ದು, ೧೧ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕಾಂಗ್ರೆಸ್-೦೪, ಬಿಜೆಪಿ-೦೫, ಪಕ್ಷೇತರ-೦೨.  ಇಲ್ಲಿನ ೧೬ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಗಂಗಾವತಿ ಅಡುಗೆ ಅನಿಲ ಸಂಪರ್ಕಪಡೆಯಲು ಅರ್ಜಿ ಆಹ್ವಾನ.
ಕೊಪ್ಪಳ, ಫೆ.೦೩ (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ಶೇಕಡಾ ೨೪.೧೦ ರ ಯೋಜನೆಯ ಸಿ.ಎಫ್.ಸಿ ಅನುದಾನದಡಿ ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ ಹಾಗೂ ಶೇಕಡಾ ೭.೨೫ ಯೋಜನೆ ಅಡಿಯಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
      ಯೋಜನೆಯಡಿ ಗಂಗಾವತಿ ನಗರ ಪ್ರದೇಶದ ನಿವಾಸಿಯಾಗಿರುವ ಎಸ್.ಸಿ ವರ್ಗದ ೭೦, ಎಸ್.ಟಿ ವರ್ಗದ ೩೦ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ೬೫ ಜನರಿಗೆ ಮಾತ್ರ ಈ ಸೌಲಭ್ಯವನ್ನು ಒದಗಿಸಲಾಗುವುದು. ಅರ್ಜಿ ಸಲ್ಲಿಸಲಿಚ್ಛಿಸುವವರು ಭರ್ತಿ ಮಾಡಿದ ಅರ್ಜಿಯೊಂದಿಗೆ ರೇಷನ್ ಕಾರ್ಡ್, ಐ.ಡಿ ಕಾರ್ಡ್, ಆಧಾರ ಕಾರ್ಡ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ ಫೆ.೨೦ ರೊಳಗಾಗಿ ಗಂಗಾವತಿ ನಗರಸಭೆ ಕಛೇರಿಗೆ ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ನಗರಸಭೆ ಕಾರ್ಯಾಲಯದಿಂದ ಪಡೆಯಬಹುದು ಎಂದು ನಗರಸಭೆ ಪೌರಾಯುಕ್ತ ಸಿ.ಆರ್.ರಂಗಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಬೈಲಾ ತಿದ್ದುಪಡಿ ಮಾಡಿಕೊಳ್ಳಲು ಸಹಕಾರ ಸಂಘಗಳಿಗೆ ಸೂಚನೆ
ಕೊಪ್ಪಳ, ಫೆ.೦೩ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಸಹಕಾರ ಸಂಘ ಮತ್ತು ಸೌಹಾರ್ದ ಸಹಕಾರಿಗಳು, ತಿದ್ದುಪಡಿಗೊಂಡಿರುವ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಿಗೆ ಅನುಗುಣವಾಗಿ ತಮ್ಮ ಬೈಲಾ ತಿದ್ದುಪಡಿ ಮಾಡಿಕೊಳ್ಳುವಂತೆ ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಡಾ|| ಉಮೇಶ.ಜಿ ಅವರು ಸೂಚನೆ ನೀಡಿದ್ದಾರೆ.
      ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಮತ್ತು ನಿಯಮಗಳು ೧೯೬೦ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, ೧೯೯೭ ಮತ್ತು ನಿಯಮಗಳು ೨೦೦೪ ಗಳಿಗೆ ತಿದ್ದುಪಡಿಯಾಗಿದ್ದು, ತಿದ್ದುಪಡಿಗೆ ಅನುಗುಣವಾಗಿ ಇದುವರೆಗೂ ಬೈಲಾ ತಿದ್ದುಪಡಿ ಮಾಡಿಕೊಳ್ಳದ ಕೊಪ್ಪಳ ಜಿಲ್ಲೆಯಲ್ಲಿನ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು ಕೂಡಲೆ ಬೈಲಾ ತಿದ್ದುಪಡಿ ಮಾಡಿಕೊಳ್ಳಲು ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಡಾ||ಉಮೇಶ.ಜಿ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top