PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೦೮ (ಕ ವಾ) ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ  ಇಲಾಖೆಯು ಕೊಪ್ಪಳ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಜನವರಿ ತಿಂಗಳಿಗಾಗಿ ಆಹಾರಧಾನ್ಯ, ಸಕ್ಕರೆ, ಸೀಮೆಎಣ್ಣೆ, ತಾಳೆಎಣ್ಣೆ ಮತ್ತು ಆಯೋಡಿನ್‌ಯುಕ್ತ ಉಪ್ಪು ಬಿಡುಗಡೆ ಮಾಡಿದೆ.ಕೊಪ್ಪಳ ಜಿಲ್ಲೆಯ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ೨೯ ಕೆ.ಜಿ ಅಕ್ಕಿ, ೬ ಕೆ.ಜಿ ಗೋಧಿ, ಕೆ.ಜಿ ಗೆ ೧೩.೫೦ ರೂ.ಗಳಂತೆ ೦೧ ಕೆ.ಜಿ ಸಕ್ಕರೆ, ಲೀಟರ್‌ಗೆ ೨೫ ರೂ.ಗಳಂತೆ ೦೧ ಲೀ ತಾಳೆ ಎಣ್ಣೆ ಹಾಗೂ ಕೆ.ಜಿ ಗೆ ೦೨ ರೂ.ಗಳಂತೆ ೦೧.ಕೆ.ಜಿ ಉಪ್ಪು ಬಿಡುಗಡೆ ಮಾಡಲಾಗಿದೆ. ಬಿಪಿಎಲ್ ಪಡಿತರದಾರರಿಗೆ ಯಾವುದೇ ಪರಿಮಿತಿಯಿಲ್ಲದೇ ಪ್ರತಿ ಸದಸ್ಯರಿಗೆ ಉಚಿತವಾಗಿ ೦೩ ಕೆ.ಜಿ ಅಕ್ಕಿ, ೨ ಕೆ.ಜಿ ಗೋಧಿ, ಕೆ.ಜಿ ಗೆ ೧೩.೫೦ ರೂ.ಗಳಂತೆ ೦೧ ಕೆ.ಜಿ ಸಕ್ಕರೆ, ಲೀಟರ್‌ಗೆ ೨೫ ರೂ.ಗಳಂತೆ ೦೧.ಲೀ ತಾಳೆ ಎಣ್ಣೆ ಹಾಗೂ ಕೆ.ಜಿ ಗೆ ೦೨ ರೂ.ಗಳಂತೆ ೦೧ ಕೆ.ಜಿ ಉಪ್ಪು ಬಿಡುಗಡೆ ಮಾಡಲಾಗಿದೆ. ಎಪಿಎಲ್ ಪಡಿತರ ಚೀಟಿದಾರರಿಗೆ ಕೆ.ಜಿ ಗೆ ೧೫ ರೂ.ನಂತೆ ಏಕ ಸದಸ್ಯರಿಗೆ ೦೩, ದ್ವಿ ಮತ್ತು ಹೆಚ್ಚಿನ ಸದಸ್ಯರಿಗೆ ೦೫ ಕೆ.ಜಿ  ಅಕ್ಕಿ, ಕೆ.ಜಿ.ಗೆ ೧೦.ರೂ.ನಂತೆ ಏಕ ಸದಸ್ಯರಿಗೆ ೦೨, ದ್ವಿ ಮತ್ತು ಹೆಚ್ಚಿನ ಸದಸ್ಯರಿಗೆ ೦೫ ಕೆ.ಜಿ ಗೋಧಿ ಬಿಡುಗಡೆ ಮಾಡಲಾಗಿದೆ.ಅಂತ್ಯೋದಯ ಪಡಿತರ ಚೀಟಿದಾರರಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  ೧ ಮತ್ತು ೨ ಸದಸ್ಯರಿಗೆ ೩ ಲೀ. ಸೀಮೆ ಎಣ್ಣೆ, ೩ ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ ೦೫ ಲೀಟರ್. ಬಿಪಿಎಲ್ ಕುಟುಂಬಗಳಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  ೧ ಮತ್ತು ೨ ಜನ ಸದಸ್ಯರಿದ್ದಲ್ಲಿ ೩ ಲೀಟರ್ ಹಾಗೂ ೩ ಮತ್ತು ಮೇಲ್ಪಟ್ಟ ಸದಸ್ಯರಿದ್ದಲ್ಲಿ ೦೫ ಲೀ. ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶದ ಅನಿಲ ರಹಿತ ಎ.ಪಿ.ಎಲ್ ಪಡಿತರದಾರರಿಗೆ ೦೨ ಲೀ. ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ. ಸೀಮೆಎಣ್ಣೆ ಪ್ರತಿ ಲೀಟರ್‌ಗೆ ರೂ.೧೮ ರಂತೆ ದರ ನಿಗದಿಪಡಿಸಲಾಗಿದೆ.ಕುಷ್ಟಗಿ ತಾಲೂಕಿನಲ್ಲಿ ೨೨೦ ಲುಂಗಿಗಳು, ಯಲಬುರ್ಗಾ ತಾಲೂಕಿನಲ್ಲಿ ೧೫೦ ಧೋತಿಗಳು ಹಾಗೂ ೧೭೭ ಲುಂಗಿಗಳಿದ್ದು, ಅವುಗಳನ್ನು ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಬಿಡುಗಡೆ ಮಾಡಲಾಗುವುದು. ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ : ಎಂ.ಕನಗವಲ್ಲಿಕೊಪ್ಪಳ, ಜ.೦೮ (ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆಯಲ್ಲಿ ಬಂಡವಾಳ ಹೂಡಿಕೆ, ಹೊಟೆಲ್ ಉದ್ದಿಮೆ ಸೇರಿದಂತೆ ಉದ್ಯೋಗ ಸೃಷ್ಠಿಸುವಂತಹ ವಿಫುಲ ಅವಕಾಶಗಳಿದ್ದು, ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವ ಜನತೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕರೆ ನೀಡಿದರು.ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಕಮಲಾಪುರದ ಪ್ರವಾಸೋದ್ಯಮ ಇಲಾಖೆ, ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಮಾರ್ಗದರ್ಶಿಗಳ ತರಬೇತಿ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರವು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಪ್ರವಾಸಿ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಧನ ಸಹಾಯ, ಪ್ರವಾಸಿ ಮಾರ್ಗದರ್ಶಿಗಳ ತರಬೇತಿ, ಹೊಟೆಲ್ ಉದ್ದಿಮೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ  ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲೆಯ ಯುವ ಜನತೆ ಈ ಯೋಜನೆಗಳ ಸದುಪಯೋಗ ಪಡೆದುಕೊಂಡು, ಉತ್ತಮ ನಾಗರೀಕರಾಗಿ ಬದುಕು ರೂಪಿಸಿಕೊಳ್ಳಬೇಕು. ಮಾರ್ಗದರ್ಶಿಗಳ ತರಬೇತಿ ಪಡೆದಿರುವ ಅಭ್ಯರ್ಥಿಗಳು ಪ್ರವಾಸಿಗರೊಂದಿಗೆ ಸಭ್ಯತೆಯಿಂದ ನಡೆದುಕೊಂಡು, ಅವರ ವಿಶ್ವಾಸ ಗಳಿಕೆಯಲ್ಲಿ ಯಶಸ್ಸು ಸಾಧಿಸಿ, ಈ ಭಾಗದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ ತಾಳಕೇರಿ ಅವರು ಹೊಸದಾಗಿ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪ್ರವಾಸೋದ್ಯಮ ನೀತಿಯ ರೂಪರೇಷೆಗಳು, ಪ್ರವಾಸೋದ್ಯಮ ವೈವಿದ್ಯಗಳು ಮತ್ತು ಸೇವೆಗಳು, ಪರಿಸರ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಆರೋಗ್ಯಪಾಲನಾ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ನಗರ ಪ್ರವಾಸೋದ್ಯಮ, ಪ್ರವಾಸಿ ತಾಣಕ್ಕೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆಗಳು, ಯಾತ್ರಿ ನಿವಾಸಗಳು ಸೇರಿದಂತೆ ಪ್ರವಾಸೋದ್ಯಮದ ಬಹಳಷ್ಟು ಸೇವೆಗಳ ಕುರಿತು ಮಾಹಿತಿ ನೀಡಿದರು.ಸಮಾರಂಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ನಿವೇದಿತಾ ಜಿ.ತೆಗ್ಗಿನಮಠ, ಸರ್ವೋದಯ ಸಂಸ್ಥೆಯ ನಾಗರಾಜ ದೇಸಾಯಿ ಹಾಗೂ ತರಬೇತಿ ಪಡೆದಿರುವ ಎಲ್ಲ ಪ್ರವಾಸಿ ಮಾರ್ಗದರ್ಶಿಗಳು ಉಪಸ್ಥಿತರಿದ್ದರು.

08 Jan 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top