PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-30- ತಾಲೂಕಿನ ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮಗಾಂಧೀಜಿಯವರ ಪುಣ್ಯತಿಥಿ ಪ್ರಯುಕ್ತ ಹುತಾತ್ಮರ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎರಡು ನಿಮೀಷ ಮೌನಾಚರಣೆಯನ್ನು ಮಾಡಲಾಯಿತು.
    ಮುಖ್ಯೋಪಾಧ್ಯಾಯರಾದ ಫಕೀರಪ್ಪ ಎನ್ ಅಜ್ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಹಾತ್ಮಗಾಂಧೀಜಿ ಯವರು ಸತ್ಯ, ಶಾಂತಿ, ಅಹಿಂಸೆ ಯಿಂದ ಭಾರತವನ್ನಲ್ಲದ ಇಡೀ ವಿಶ್ವವನ್ನೆ ಗೆದ್ದರು ಹಾಗಾಗಿ ಭಾರತದ ಒಬ್ಬ ವ್ಯಕ್ತಿಯಲ್ಲ ದೇಶದ ಮಹಾನ್ ಶಕ್ತಿಯಾಗಿದ್ದರು ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದರು. ಇವರ ಪುಣ್ಯದಿನವನ್ನು ದೇಶಕ್ಕಾಗಿ, ಸ್ವಾತಂತ್ರ್ಯಕ್ಕ್ಕಾಗಿ ಪ್ರಾಣ ತೆತ್ತ ಹುತ್ಮಾತ್ಮರಾದವರ ಸ್ಮರಣಾರ್ಥವಾಗಿ ಹುತಾತ್ಮರ  ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.
    ಕಾರ್ಯಕ್ರಮದ ಸಂಸ್ಥೆಯ ಅಧ್ಯಕ್ಷರಾದ ಈಶಪ್ಪ ಸೊಂಪೂರ, ಕಾರ್ಯದರ್ಶಿ ಈರಮ್ಮ ಸೊಂಪೂರ, ಛಾಯಗ್ರಾಹಕ ಬಸವರಾಜ ಸಬರದ, ಹುಲಿಗೇಶ ಬೋವಿ, ಬಸವರಾಜ ಕುರುಬರ, ಕೊಟ್ರೇಶ ಮುತ್ತಾಳ ಇತರರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಮರಿಯಮ್ಮ ಹರಿಜನ ಸ್ವಾಗತಿಸಿದರು. ಫಕೀರಮ್ಮ ತಳವಾರ ನಿರೂಪಿಸಿದರು. ಕೊನೆಯಲ್ಲಿ ರುಕ್ಮಿಣಿ ವಾಯ್.ಜೆ. ವಂದಿಸಿದರು.

Advertisement

0 comments:

Post a Comment

 
Top