PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಎಲ್ಲಾ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಫೆ.೦೧ ರಿಂದ ಅನ್ವಯವಾಗುವಂತೆ ಕಡ್ಡಾಯವಾಗಿ ಶಿರಸ್ತ್ರಾಣ (ಹೆಲ್ಮೆಟ್) ವನ್ನು ಧರಿಸಿ ವಾಹನ ಚಲಾಯಿಸುವಂತೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಅಹ್ಮದ್ ಪಾಶಾ ಸೂಚನೆ ನೀಡಿದ್ದಾರೆ.
       ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ
SARIE 80 SAEPA 2015, Bengalore Dated: 31-12-2015 ೩೧-೧೨-೨೦೧೫ ರಲ್ಲಿ ಮೋಟಾರ ವಾಹನ ಕಾಯ್ದೆ ೧೯೮೮ ರ ಅಧಿನಿಯಮ ೧೩೮, ೧೨೯, ೨೧೨ ರಲ್ಲಿನ ಪ್ರದವತ್ತಾದ ಅಧಿಕಾರದ ಮೇರೆಗೆ ಕರ್ನಾಟಕ ಮೋಟಾರ ವಾಹನ ನಿಯಮಾವಳಿ ೨೩೦(೧) ರಲ್ಲಿ ದ್ವಿಚಕ್ರ ಮೋಟಾರ ಸೈಕಲ್ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಶಿರಸ್ತ್ರಾಣ (ಹೆಲ್ಮೆಟ್) ಧರಿಸುವಂತೆ ಆದೇಶ ಹೊರಡಿಸಲಾಗಿದೆ.
      ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪ್ರದೇಶಗಳ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಫೆ.೦೧ ರಿಂದ ಅನ್ವಯವಾಗುವಂತೆ ಕಡ್ಡಾಯವಾಗಿ ಹೆಲ್ಮೆಟ್‌ನ್ನು ಧರಿಸಿ ವಾಹನ ಚಲಾಯಿಸಬೇಕು. ಇಲ್ಲವಾದಲ್ಲಿ ಕಾನೂನುರಿತ್ಯಾ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

0 comments:

Post a Comment

 
Top