PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೨೫ (ಕವಾ) ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸದ್ಯ ಅನಲಾಗ್ ಮೋಡ್‌ನಲ್ಲಿರುವ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ೨೦೧೫ ರ ಡಿಸೆಂಬರ್ ೩೧ ರೊಳಗಾಗಿ ಸೆಟ್‌ಟಾಪ್ ಬಾಕ್ಸ್ ಅಳವಡಿಸುವ ಮೂಲಕ ಕಡ್ಡಾಯವಾಗಿ ಡಿಜಿಟೈಜೇಶನ್‌ಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಕೇಬಲ್ ಆಪರೇಟರ್‍ಸ್‌ಗಳಿಗೆ ಸೂಚನೆ ನೀಡಿದ್ದಾರೆ.
     ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಆದೇಶದನ್ವಯ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೆಟ್‌ಟಾಪ್ ಬಾಕ್ಸ್ ಅಳವಡಿಸುವ ಮೂಲಕ ಡಿಜಿಟೈಜೇಶನ್‌ಗೊಳಿಸಬೇಕು.  ಈಗಾಗಲೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದೆ.  ಇದರ ಅನ್ವಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಕೇಬಲ್ ಟಿ.ವಿ. ವೀಕ್ಷಕರು ಸದ್ಯ ಅನಲಾಗ್ ಮೋಡ್‌ನಲ್ಲಿರುವ ಪ್ರಸಾರ ವ್ಯವಸ್ಥೆಯನ್ನು ೨೦೧೫ ರ ಡಿಸೆಂಬರ್ ೩೧ ರ ಒಳಗಾಗಿ ಸೆಟ್‌ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವ ಮೂಲಕ ಡಿಜಿಟೈಜೇಶನ್‌ಗೆ ಪರಿವರ್ತನೆ ಮಾಡಿಕೊಳ್ಳಬೇಕು.  ಅದೇ ರೀತಿ ಗ್ರಾಮೀಣ ಪ್ರದೇಶದ ಕೇಬಲ್ ಟಿ.ವಿ. ವೀಕ್ಷಕರು ೨೦೧೬ ರ ಡಿಸೆಂಬರ್ ೩೧ ರ ಒಳಗಾಗಿ ಡಿಜಿಟೈಜೇಶನ್‌ಗೊಳಿಸಬೇಕು.  ಈ ವ್ಯವಸ್ಥೆಯನ್ನು ಸಂಬಂಧಪಟ್ಟ ಕೇಬಲ್ ಆಪರೇಟರ್‍ಸ್‌ಗಳು ಹಾಗೂ ಮಲ್ಟಿ ಸಿಸ್ಟಂ ಆಪರೇಟರ್‍ಸ್‌ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಅಳವಡಿಸಿಕೊಳ್ಳಬೇಕು. ಕೇಬಲ್ ಗ್ರಾಹಕರಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟು, ಅನುಷ್ಠಾನಗೊಳಿಸಲೇಬೇಕಿದೆ.  ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲು ಕಾಲಾವಕಾಶ ಕಡಿಮೆ ಇದೆ.  ಸೆಟ್‌ಟಾಪ್ ಬಾಕ್ಸ್ ಅಳವಡಿಕೆಯಿಂದ ಕೇಬಲ್ ಟಿ.ವಿ. ಗ್ರಾಹಕರಿಗೆ ಆಗುವ ಅನುಕೂಲಗಳ ಬಗ್ಗೆ ತಿಳುವಳಿಕೆ ಮೂಡಿಸಿ, ಅವರ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು.  ಡಿಸೆಂಬರ್ ೩೧ ರ ನಂತರ ಅನಲಾಗ್ ವ್ಯವಸ್ಥೆಯಲ್ಲಿ ಕೇಬಲ್ ಟಿ.ವಿ. ಪ್ರಸಾರ ಕೈಗೊಳ್ಳುವ ಕೇಬಲ್ ಸಂಸ್ಥೆಗಳ ಉಪಕರಣವನ್ನು ಜಪ್ತಿ ಮಾಡಲಾಗುವುದು.   ಇದಕ್ಕೆ ಅವಕಾಶ ನೀಡದಂತೆ, ಕೇಬಲ್ ಆಪರೇಟರ್‍ಸ್‌ಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಡಿಸೆಂಬರ್ ೩೧ ರ ಒಳಗಾಗಿ ಸೆಟ್‌ಟಾಪ್ ಬಾಕ್ ಅಳವಡಿಸುವ ಮೂಲಕ ಕಡ್ಡಾಯವಾಗಿ ಡಿಜಿಟೈಜೇಶನ್ ಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top