ಕ್ರಿಸ್ ಮಸ್ ಸಂಭ್ರಮಕ್ಕೆ ಈಗಾಗಲೇ
ದೇಶಾದ್ಯಂತ ಕ್ರಿಶ್ಚಿಯನ್ನರು ಸಜ್ಜಾಗಿದ್ದಾರೆ. ಅದಕ್ಕಾಗಿ ಚರ್ಚ್ ಗಳು
ಮದುವಣಗಿತ್ತಿಯಂತೆ ಸಜ್ಜಾಗಿವೆ. ಅಲ್ಲದೆ ವಿವಿಧ ಬಗೆಯ ಕೇಕ್ ಗಳು, ಗ್ರೀಟಿಂಗ್ ಕಾರ್ಡ್
ಗಳು ಕಲರ್ ಫುಲ್ ಆಗಿ ಶುಭಾಶಯ ಕೋರುತ್ತಿವೆ. ಸಂತಾ ಕ್ಲಾಸ್ ನ ವೇಷ ತೊಟ್ಟು ಮಕ್ಕಳನ್ನು
ಸಂತೋಷ ಪಡಿಸುವುದು ಸೇರಿದಂತೆ ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಚರ್ಚ್ ನಲ್ಲಿ
ನಡೆಯುತ್ತವೆ. ಏಸು ಕ್ರಿಸ್ತನ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಕ್ರಿಶ್ಚಿಯನ್ನರು
ಒಳಿತಿಗಾಗಿ ಬೇಡಿಕೊಳ್ಳುತ್ತಾರೆ. ಡಿಸೆಂಬರ್ ಕೊನೆಯಲ್ಲಿ ಬರುವ ಕ್ರಿಸ್ ಮಸ್
ಕ್ರಿಶ್ಚಿಯನ್ನರಿಗೆ ಎಲ್ಲಿಲ್ಲದ ಸಂಭ್ರಮ ತರುವ ಹಬ್ಬ. ಇದಕ್ಕಾಗಿ ಸುಮಾರು 15 ದಿನಗಳ
ಹಿಂದೆಯೇ ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಬಟ್ಟೆ ಖರೀದಿಯಿಂದ ಹಿಡಿದು
ಉಡುಗೊರೆಗಳನ್ನು ಆರಿಸುವುದು, ಸಿಹಿ ತಿನಿಸುಗಳನ್ನು ತಯಾರಿಸುವುದು ಹೀಗೆ ಎಲ್ಲಾ ಒಂದೆಡೆ
ಸೇರುವ ಖುಷಿ ಹಬ್ಬವನ್ನು ಸಂಭ್ರಮದಿಂದ ಸ್ವಾಗತಿಸಲು ಕಾತುರರಾಗಿರುತ್ತಾರೆ. ಅಲ್ಲದೆ
ಕ್ರಿಸ್ ಮಸ್ ನಲ್ಲಿ ಕುಟುಂಬದ ಎಲ್ಲರೂ ಒಂದಾಗಿ ಸಡಗರದಿಂದ ಆಚರಿಸಿ ಸಿಹಿ ಹಂಚಿ
ಸಂಭ್ರಮಿಸುತ್ತಾರೆ.
Subscribe to:
Post Comments (Atom)
0 comments:
Post a Comment