PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೦೫ (ಕ ವಾ) ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಉಪಕರಣಗಳಿಗೆ ಸಹಾಯಧನ ಮಂಜೂರಾತಿಗಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ.
     ತೋಟಗಾರಿಕೆಯಲ್ಲಿ ಯಂತ್ರೋಪಕರಣಗಳ ಬಳಕೆಯು ತೋಟಗಾರಿಕೆ ಕಾರ್ಮಿಕರ ಕೊರತೆಗೆ ಉತ್ತಮ ಪರಿಹಾರೋಪಯವಾಗಿದೆ.  ಇದು ಬೇಸಾಯ ವೆಚ್ಚವನ್ನು ತಗ್ಗಿಸುವುದಲ್ಲದೆ, ಮಾನವನ ದೈಹಿಕ ಶ್ರಮವನ್ನು ಕಡಿಮೆಗೊಳಿಸಿ, ಹೆಚ್ಚು ತೋಟಗಾರಿಕೆ ಬೆಳೆಗಳ ಉತ್ಪಾದನೆ ಮತ್ತು ಇಳುವರಿ ವೃದ್ದಿಸುವಲ್ಲಿ ಸಹಕಾರಿಯಾಗಿದೆ.  ಈ ನಿಟ್ಟಿನಲ್ಲಿ ಇಲಾಖೆಯು ಯಂತ್ರೋಪಕರಣ ಖರೀದಿಸುವ ರೈತರನ್ನು ಪ್ರೊತ್ಸಾಹಿಸಲು ಸಹಾಯಧನ ನೀಡುತ್ತಿದೆ.  ೨೦೧೫-೧೬ ನೇ ಸಾಲಿನಲ್ಲಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಉಪಕರಣ ದರದ  ಶೇ.೪೦ ರಂತೆ ಗರಿಷ್ಠ ರೂ.೫೦,೦೦೦ ಗಳ ಸಹಾಯಧನ.  ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹಾಗೂ ಮಹಿಳಾ ರೈತರಿಗೆ ಶೇ.೫೦ ರಂತೆ ಗರಿಷ್ಠ ರೂ.೬೨,೫೦೦ ಸಹಾಯಧನ ನೀಡಲಾಗುವುದು.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.೯೦ ರಂತೆ (ಶೇ.೫೦- ಆರ್.ಕೆ.ವಿ.ವೈ ಮತ್ತು ಶೇ.೪೦ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ) ಗರಿಷ್ಠ ರೂ. ೧,೧೨,೫೦೦ ಗಳ ಸಹಾಯಧನ ನೀಡಲಾಗುವುದು.
    ಅರ್ಜಿ ಸಲ್ಲಿಸಬಯಸುವ ರೈತರ ಹೆಸರಿನಲ್ಲಿ ಜಮೀನು ಇರಬೇಕು. ಜಂಟಿ ಖಾತೆಯಾಗಿದ್ದಲ್ಲಿ  ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು. ಫಲಾನುಭವಿಗಳು ತೋಟಗಾರಿಕೆ ಬೆಳೆಗಳನ್ನು ಬೆಳೆದಿರಬೇಕು.  ಪಹಣಿಯಲ್ಲಿ ಬೆಳೆ ಮತ್ತು ವಿಸ್ತೀರ್ಣ ನಮೂದಿಸಿರಬೇಕು. ಆಸಕ್ತಿಯುಳ್ಳ ರೈತರು ಅರ್ಜಿಯನ್ನು  ನಿಗದಿತ ನಮೂನೆಯಲ್ಲಿ  ಭರ್ತಿಮಾಡಿ ಪಹಣಿ,  ಗಣಕೀಕೃತ ಬೆಳೆ ದೃಢೀಕರಣ, ಆಧಾರ್ ಕಾರ್ಡ ಮತ್ತು ಎಪಿಕ್ ಕಾರ್ಡ ಝೆರಾಕ್ಸ್ ಪ್ರತಿಯೊಂದಿಗೆ ಆಯಾ ತಾಲ್ಲೂಕ ತೋಟಗಾರಿಕೆ ಇಲಾಖೆಯ ಕಛೇರಿಯಲ್ಲಿ ಸಲ್ಲಿಸಬೇಕು.  ಅರ್ಜಿಯನ್ನು ಸಲ್ಲಿಸಲು ಡಿ. ೩೧ ಕೊನೆಯ ದಿನಾಂಕವಾಗಿರುತ್ತದೆ.  ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕ ತೋಟಗಾರಿಕೆ ಕಛೇರಿಗಳನ್ನು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತೊಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top