PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೦೫ (ಕ ವಾ) ಮಾನವನ ಆಹಾರದ ಮೂಲವಾಗಿರುವ ಮಣ್ಣಿನ ಆರೋಗ್ಯವನ್ನು ನಮ್ಮ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನವಲ್ಲಿ ಅವರು ಹೇಳಿದರು.
     ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಇಲಾಖೆ, ಕೊಪ್ಪಳ, ಕೃಷಿ ಸಂಶೋಧನಾ ಕೇಂದ್ರ, ಭಾ.ಕೃ.ಅ.ಪ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ, ವಿಶ್ವ ಮಣ್ಣು ದಿನಾಚರಣೆ ಮತ್ತು ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ನಮ್ಮ ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಆಧಾರದ ಮೇಲೆ ಮಾನವನ ಅಳಿವು, ಉಳಿವು ಅವಲಂಬಿಸಿರುತ್ತದೆ. ಕೃಷಿಯ ಮೂಲವಾದ ಮಣ್ಣು ಕೂಡಾ ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಅದರ ಆರೋಗ್ಯ, ಸಂರಕ್ಷಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರೈತರು ಕೃಷಿ ವಿಸ್ತರಣಾ ಕೇಂದ್ರದಿಂದ ಮಾಹಿತಿ ಹಾಗೂ ಸಲಹೆಗಳನ್ನು ಪಡೆದು ತಮ್ಮ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು.  ಈ ಮೂಲಕ ಮಣ್ಣಿನ ಸಂರಕ್ಷಣೆಗಾಗಿ ಸರ್ಕಾರ ಕೈಗೊಂಡಿರುವ ಯೋಜನೆಯಲ್ಲಿ ಕೈಜೋಡಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕರೆ ನೀಡಿದರು.
     ವಿಶೇಷ ಉಪನ್ಯಾಸಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಸವಳು ಮಣ್ಣು ಮತ್ತು ನೀರು ಯೋಜನೆ ಮುಖ್ಯಸ್ಥ ಡಾ||.ಜೆ. ವಿಶ್ವನಾಥ ಮಾತನಾಡಿ, ಸಮೀಪದ ತುಂಗಭದ್ರಾ ಜಲಾಶಯದಿಂದ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಸುಮಾರು ೩ ಲಕ್ಷ ೬೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಸಾಧ್ಯವಾಗಿದೆ. ಆದರೆ ಇದರಲ್ಲಿ ಸುಮಾರು ೯೦ ಸಾವಿರ ಹೆಕ್ಟರ್ ಪ್ರದೇಶದ ಭೂಮಿ ಜವಳಾಗಿದೆ. ಮುಂದಿನ ೫೦ ವರ್ಷಗಳಲ್ಲಿ ಜವುಗು ಪ್ರದೇಶದ ವ್ಯಾಪ್ತಿ ಇನ್ನೂ ಹೆಚ್ಚುವ ಆತಂಕವಿದೆ. ಮಿತಿಮೀರಿದ ಜನಸಂಖ್ಯೆ ಬೆಳವಣಿಗೆಯಿಂದ ಮುಂದಿನ ದಿನಮಾನಗಳಲ್ಲಿ, ಜನಸಂಖ್ಯೆ ಆಧಾರದಡಿ ದೇಶದ ಕೃಷಿಯಲ್ಲಿ ಶೇಕಡಾ ೬೦ ರಷ್ಟು ಹೆಚ್ಚಳ ಕಾಣಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮಣ್ಣು ದಿನಾಚರಣೆಯಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮಣ್ಣಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದೆ.  ಮಣ್ಣಿನಲ್ಲಿ ವಾಸಿಸುವ, ಬೆಳೆಗಳಿಗೆ ಪೂರಕವಾಗಿರುವ ಸೂಕ್ಷ್ಮ ಜೀವಿಗಳಿಗೆ ಇಂಗಾಲ ಅತ್ಯವಶ್ಯಕವಾಗಿದ್ದು, ಕೃಷಿಯಲ್ಲಿ ಉಪಯೋಗಿಸುವ ಯಾವುದೇ ರಾಸಾಯನಿಕಗಳ ಬಳಕೆಯಿಂದ  ಅಂತಹ ಸೂಕ್ಷ್ಮ ಜೀವಿಗಳು ಸಾಯುತ್ತವೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಇಳುವರಿ ಪ್ರದೇಶದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೇ, ಇಂಗಾಲ ಹೇರಳವಾಗಿರುವ ಸಾವಯುವದಲ್ಲಿಯೇ ಕೃಷಿಯನ್ನು ಅಳವಡಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ವೈಜ್ಞಾನಿಕ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
     ಮತ್ತೋರ್ವ ಉಪನ್ಯಾಸಕರಾಗಿ ಭಾಗವಹಿಸಿದ್ದ ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ||ಬಿ.ಜಿ. ಮಸ್ತಾನರೆಡ್ಡಿ ಮಾತನಾಡಿ, ಏಷ್ಯಾ ಖಂಡದ ಶೇಕಡಾ ೯೦ ರಷ್ಟು ಭಾಗದಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಅಲ್ಲದೇ ಭತ್ತದ ಬಳಕೆದಾರರು ಇಲ್ಲಿ ಹೆಚ್ಚಾಗಿದ್ದಾರೆ. ಭಾರತ ಕೂಡಾ ಭತ್ತದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ದೇಶದ ಅರ್ಧದಷ್ಟು ಹಸಿವನ್ನು ಅನ್ನವೇ ನೀಗಿಸುತ್ತಿದೆ. ಎಲ್ಲ ಮೂಲಗಳ ಮೇಲೂ ಪರಿಣಾಮ ಬೀರುತ್ತಿರುವ ಜಾಗತಿಕ ತಾಪಮಾನದ ಹೆಚ್ಚಳವು, ಭತ್ತದ ಮೇಲೆ ನೇರ ಪರಿಣಾಮ ಬೀರಿ, ಇಳುವರಿಯನ್ನು ಕುಂಠಿತಗೊಳಿಸಿದೆ. ಮೀಥೇನ್ ಅನಿಲವು ವಾತಾವರಣದ ತಾಪಮಾನ ಏರಿಕೆಗೆ ಕಾರಣವಾಗಿದ್ದು, ಇದರಲ್ಲಿ ವಾಹನಗಳ, ಕಾರ್ಖಾನೆಗಳ   ಕಾಣಿಕೆಯೇ ಹೆಚ್ಚಾಗಿದೆ. ೨೦೫೦ ವೇಳೆಗೆ ದೇಶದ ಅಕ್ಕಿ ಬೇಡಿಕೆ ಪ್ರಮಾಣ ಸುಮಾರು ೧೮೦ ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದ್ದು, ಈ ಬೇಡಿಕೆಯನ್ನು ಪೂರೈಸಲು ದೇಶದ ಭತ್ತದ ಇಳುವರಿಯಲ್ಲಿ ಮಾರ್ಪಾಡು ಮಾಡುವು
     ಬಳಿಕ ಜಿಲ್ಲೆಯ ಆಗೋಲಿ, ಹುಣಸಿಹಾಳ, ಯಲಬುರ್ಗಾ ಗಂಗಾವತಿ, ಕೊಪ್ಪಳ ಸೇರಿದಂತೆ ವಿವಿಧ ಹಳ್ಳಿಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರಿಗೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿದರು. ಕಾರ್ಯಕ್ರಮದ ಅಂಗವಾಗಿ ರೈತರು, ವಿದ್ಯಾರ್ಥಿಗಳು, ಆಸಕ್ತರಿಗಾಗಿ ಕೃಷಿಗೆ ಸಂಬಂಧಪಟ್ಟ ವಸ್ತುಗಳ, ಮಣ್ಣು ಪರೀಕ್ಷಾ ಉಪಕರಣಗಳ  ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಭತ್ತದ ಬೆಳೆ ಕ್ಷೇತ್ರೋತ್ಸವದಲ್ಲಿ ಆಯೋಜಿಸಲಾಯಿತು. ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ||ಎಸ್.ಕೆ. ಮೇಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
     ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಎ.ರಾಮದಾಸ್, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಡಾ||.ಎಸ್.ಎನ್.ಭಟ್, ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಡಾ||ಎಂ.ಬಿ.ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.

ದು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೈತರೂ ಮಣ್ಣು ಸಂರಕ್ಷಣೆ ಬಗ್ಗೆ ಸರಿಯದ ಮಾಹಿತಿ ಪಡೆದು ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳುವಂತೆ ಅವರು ತಿಳಿಸಿದರು.   

Advertisement

0 comments:

Post a Comment

 
Top