PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ನ.೨೭ (ಕರ್ನಾಟಕ ವಾರ್ತೆ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನ.೩೦ ರಿಂದ ಡಿ.೦೨ ರವರೆಗೆ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳದ ಸಾಹಿತ್ಯಭವನದಲ್ಲಿ ನ.೨೫ ರಂದು ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ, ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ಮಾತ್ರ ಈ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ. ಭಾಗವಹಿಸುವ ಸ್ಪರ್ಧಾಳುಗಳು ನ.೩೦ ರಂದು ಬೆಳಿಗ್ಗೆ ೦೮.೦೦ ಗಂಟೆಗೆ ಸಂಘಟಕರಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ, ಉದ್ಘಾಟನಾ ಸಮಾರಂಭದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಅದಕ್ಕೂ ಮುನ್ನ ಜಿಲ್ಲೆಯ ಸ್ಪರ್ಧಾಳುಗಳು ಕೊಪ್ಪಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಪ್ರವೇಶ ಅರ್ಜಿಯ ನಿಗದಿತ ನಮೂನೆಯನ್ನು ಪಡೆದು, ಭರ್ತಿ ಮಾಡಿ, ಸಹಾಯಕ ನಿರ್ದೇಶಕರಿಂದ ರುಜು ಪಡೆದು ತೆಗೆದುಕೊಂಡು ಹೋಗತಕ್ಕದ್ದು. ಅಲ್ಲದೆ, ಇಲಾಖೆಯ ಎಲ್ಲ ಷರತ್ತುಗಳಿಗೆ ಬದ್ಧರಿರಬೇಕು.
     ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಊಟೋಪಹಾರದ ಹಾಗೂ ವಸತಿ ವ್ಯವಸ್ಥೆಯನ್ನು ಸಂಘಟಕರು ಮಾಡಿರುತ್ತಾರೆ. ಚಿಕ್ಕಮಗಳೂರಿನಲ್ಲಿ ಚಳಿ ಹೆಚ್ಚಾಗಿರುವುದರಿಂದ ಸ್ಪರ್ಧಾಳುಗಳು ಬೆಚ್ಚನೆಯ ಉಡುಪು, ಲಘು ಹಾಸಿಗೆ, ಹೊದಿಕೆ ಬೀಗ ಮತ್ತು ಬೀಗದ ಕೈಗಳನ್ನು ತಮ್ಮೊಂದಿಗೆ ತೆಗೆಂದುಕೊಂಡು ಹೋಗಬೇಕು. ಜಿಲ್ಲೆಯ ಸ್ಪರ್ಧಾಳುಗಳಿಗೆ ಜಿಲ್ಲಾ ಕೇಂದ್ರ ಸ್ಥಾನದಿಂದ ಚಿಕ್ಕಮಗಳೂರು ಜಿಲ್ಲೆಯವರೆಗೆ ಸಾಮಾನ್ಯ ಬಸ್ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ನ್ನು ಸಂಪರ್ಕಿಸುವಂತೆ ಕೊಪ್ಪಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆ ಫಲಿತಾಂಶ ಪ್ರಕಟ.
ಕೊಪ್ಪಳ, ನ.೨೭ (ಕರ್ನಾಟಕ ವಾರ್ತೆ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ನ.೨೫ ರಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ವಿಜೇತರಾಗಿ, ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಾಳುಗಳ ವಿವರ :
     ಶಾಸ್ತ್ರೀಯ ಸಂಗೀತ : ಸಂಜಯ ಗಂಗಾವತಿ-ಪ್ರಥಮ, ಶಕುಂತಲಾ ಬೆನ್ನಾಳ-ದ್ವಿತೀಯ. ಕೊಳಲು : ನಾಗರಾಜ್ ಶ್ಯಾವಿ-ಪ್ರಥಮ, ಗಂಗಾಧರ ನವಲಿ-ದ್ವಿತೀಯ. ವೀಣಾ ಸೋಲೋ : ಸುಲೋಚನಾ ಗಂಗಾವತಿ-ಪ್ರಥಮ. ತಬಲಾ ಸೋಲೊ : ಭರಮಪ್ಪ ಭಜಂತ್ರಿ ಕುಷ್ಟಗಿ-ಪ್ರಥಮ. ಭರತನಾಟ್ಯ : ಗುರುರಾಜ್ ಗಂಗಾವತಿ-ಪ್ರಥಮ, ಅಲ್ತಾಫ್ ಭಾಗ್ಯನಗರ-ದ್ವಿತೀಯ. ಆಶು ಭಾಷಣ : ದ್ಯಾಮಣ್ಣ ಗೊಂದಿ-ಪ್ರಥಮ, ಶಂಕರ ಸುಂಕದ-ದ್ವಿತೀಯ. ಜನಪದ ಗೀತೆ : ತಾಯಮ್ಮ ಭಜನಾ ಮಂಡಳಿ ಕಾತರಕಿ-ಪ್ರಥಮ, ಮದರ ತೆರೆಸಾ ಯುವತಿಯರ ಮಂಡಳಿ ದೋಟಿಹಾಳ-ದ್ವಿತೀಯ, ಜನಪದ ನೃತ್ಯ : ಗೌರಿ ಶಂಕರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಭಾಗ್ಯನಗರ-ಪ್ರಥಮ, ಹಾರ್ಮೋನಿಯಂ : ಗುರಪ್ಪ ತೋಪಲಕಟ್ಟಿ-ಪ್ರಥಮ, ಲಲಿತಮ್ಮ ಹಿರೇಮಠ ಕುಷ್ಟಗಿ-ದ್ವಿತೀಯ, ಸಿತಾರ್ ಸೋಲೊ : ಪ್ರತಿಮಾ ಗಂಗಾವತಿ-ಪ್ರಥಮ, ಪವಿತ್ರಾ ಹೊಸಮನಿ-ದ್ವಿತೀಯ. ಮಣಿಪುರಿ ಓಡಿಸ್ಸಿ ಕಥಕ್ : ಗುರುರಾಜ್ ಗಂಗಾವತಿ-ಪ್ರಥಮ, ವಿಮಲಾ ಜೋಷಿ-ದ್ವಿತೀಯ. ಕುಚುಪುಡಿ ನೃತ್ಯ : ಗುರುರಾಜ್ ಗಂಗಾವತಿ-ಪ್ರಥಮ, ವಿಮಲಾ ಗಂಗಾವತಿ-ದ್ವಿತೀಯ. ನಾಟಕ (ಹಿಂದಿ ಅಥವಾ ಇಂಗ್ಲೀಷ್) : ಹಕ್ಕಬುಕ್ಕ ನಾಯಕ ಸಾಂಸ್ಕೃತಿಕ ಪರಿಷತ್ ಕೊಪ್ಪಳ-ಪ್ರಥಮ ಸ್ಥಾನವನ್ನು ಪಡೆದು ನ.೩೦ ರಿಂದ ಡಿ.೦೨ ರವರೆಗೆ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೊಪ್ಪಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Advertisement

0 comments:

Post a Comment

 
Top