ಕೊಪ್ಪಳ,
ನ.೨೭ (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಎಲ್ಲಾ
೧೯ ವಾರ್ಡುಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡಿ ಕರಡು ಅಧಿಸೂಚನೆ
ಹೊರಡಿಸಲಾಗಿದ್ದು, ವಿಂಗಡಣೆಯನ್ನು ಅಂತಿಮಗೊಳಿಸಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು
ಆಹ್ವಾನಿಸಲಾಗಿದೆ.
ಭಾಗ್ಯನಗರ ಪಟ್ಟಣ ಪಂಚಾಯಿತಿಯನ್ನು ೨೦೧೧ ರ ಜನಗಣತಿ ಆಧಾರದ ಮೇರೆಗೆ ಕ್ಷೇತ್ರ ವಿಂಗಡಣೆ ಮಾಡಲಾಗಿದ್ದು, ವಿಂಗಡಣೆ ಮಾಡಲಾಗಿರುವ ವಿವರ ಈ ಕೆಳಗಿನಂತಿದೆ.
ವಾರ್ಡ್ ನಂ.೦೧ ರಲ್ಲಿ ಜನತಾ ಕಾಲೋನಿ ಹಾಗೂ ಕೀರ್ತಿ ಕಾಲೋನಿ, ವಾರ್ಡ್ ನಂ.೦೨ ರಲ್ಲಿ ಚಿತ್ರಗಾರ ಓಣಿ ಹಾಗೂ ಹರಿಜನ ಕಾಲೋನಿ, ವಾರ್ಡ್ ನಂ.೦೩ ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರದೇಶ ಹಾಗೂ ಮುಖ್ಯರಸ್ತೆ, ವಾರ್ಡ್ ನಂ.೦೪ ರಲ್ಲಿ ಶಾಸ್ತ್ರೀ ಕಾಲೋನಿ, ವಾರ್ಡ್ ನಂ.೦೫ ರಲ್ಲಿ ಎಮ್.ಹೆಚ್.ಪಿ.ಎಸ್ ಶಾಲೆ ಪ್ರದೇಶ ಹಾಗೂ ಬಜಾರ ರಸ್ತೆ, ವಾರ್ಡ್ ನಂ.೦೬ ರಲ್ಲಿ ಊರಮ್ಮನ ಗುಡಿ ಪ್ರದೇಶ, ವಾರ್ಡ್ ನಂ.೦೭ ರಲ್ಲಿ ಶ್ರೀರಾಮ ಕಾಲೋನಿ ಹಾಗೂ ಶಂಕರಾಚಾರ್ಯಮಠದ ದಕ್ಷಿಣ ಭಾಗ, ವಾರ್ಡ್ ನಂ.೦೮ರಲ್ಲಿ ಕೆ.ಹೆಚ್.ಡಿ.ಸಿ ಕಾಲೋನಿ, ವಾರ್ಡ್ ನಂ.೦೯ ರಲ್ಲಿ ಸ್ಮಶಾನ ರಸ್ತೆ ಪ್ರದೇಶಗಳನ್ನು ಸೇರಿಸಲಾಗಿದೆ.
ವಾರ್ಡ್ ನಂ.೧೦ ರಲ್ಲಿ ನವನಗರ ರಸ್ತೆ, ಕರ್ನಾಟಕ ಗೃಹ ಮಂಡಳಿ ಹಾಗೂ ನವನಗರ, ವಾರ್ಡ್ ನಂ.೧೧ ರಲ್ಲಿ ವಾಲ್ಮೀಕಿ ಸರ್ಕಲ್ ಪ್ರದೇಶ, ವಾರ್ಡ್ ನಂ.೧೨ ರಲ್ಲಿ ಕಿನ್ನಾಳ ಮುಖ್ಯರಸ್ತೆ ಹಾಗೂ ಕದಂಬನಗರ, ವಾರ್ಡ್ ನಂ.೧೩ ರಲ್ಲಿ ಹಿರೇಮಸೂತಿ ಪ್ರದೇಶ, ವಾರ್ಡ್ ನಂ.೧೪ ರಲ್ಲಿ ಮೋಚಿ ಓಣಿ, ವಾರ್ಡ್ ನಂ.೧೫ ರಲ್ಲಿ ಹಮಾಲರ ಸಂಘ ಹಾಗೂ ಮೋಚಿ ಓಣಿ, ವಾರ್ಡ್ ನಂ.೧೬ ರಲ್ಲಿ ಕೀರ್ತಿ ಕಾಲೋನಿ, ಪದ್ಮಾವತಿ ಕಾಲೋನಿ ಹಾಗೂ ಧನ್ವಂತರಿ ಕಾಲೋನಿ, ವಾರ್ಡ ನಂ.೧೭ ರಲ್ಲಿ ಧನ್ವಂತರಿ ಕಾಲೋನಿ ಗಣೇಶ ತೆಗ್ಗು, ವಾರ್ಡ್ ನಂ.೧೮ ರಲ್ಲಿ ಗಣೇಶ ತೆಗ್ಗು, ಪ್ರಗತಿ ನಗರ, ಪೊಲೀಸ್ ಕಾಲೋನಿ, ಕಿನ್ನಾಳ ಹಾಗೂ ಕುಷ್ಟಗಿ ರಸ್ತೆ, ವಾರ್ಡ್ ನಂ.೧೯ ರಲ್ಲಿ ಟೀಚರ್‍ಸ್ ಕಾಲೋನಿ, ದುರಗಮುರಗಿ ಕಾಲೋನಿ, ಎನ್.ಜಿ.ಒ ಕಾಲೋನಿ, ಅಂಬೇಡ್ಕರ್ ಕಾಲೋನಿ, ಬೇಂದ್ರೆ ನಗರ ಪ್ರದೇಶಗಳನ್ನು ಸೇರಿಸಿ, ಈ ರೀತಿಯಾಗಿ ಕ್ಷೇತ್ರ ವಿಂಗಡಗಣೆ ಮಾಡಲಾಗಿದೆ.
ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ, ಸಹಾಯಕ ಆಯುಕ್ತರ ಕಚೇರಿ ಕೊಪ್ಪಳ, ತಹಸಿಲ್ದಾರರ ಕಾರ್ಯಾಲಯ ಕೊಪ್ಪಳ ಹಾಗೂ ಪಟ್ಟಣ ಪಂಚಾಯಿತಿ ಭಾಗ್ಯನಗರ ಕಾರ್ಯಾಲಯದ ನೋಟಿಸ್ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ವಾರ್ಡುಗಳ ವಿಂಗಡಣೆ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರಲ್ಲಿ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆ, ಸೂಚನೆಗಳು ಇದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ ಲಿಖಿತ ರೂಪದಲ್ಲಿ ತಮ್ಮ ಪೂರ್ಣ ವಿಳಾಸದೊಂದಿಗೆ ಕೊಪ್ಪಳ ಉಪವಿಭಾಗಾಧಿಕಾರಿಗಳ ಕಛೇರಿಗೆ ಡಿಸೆಂಬರ್.೧೮ ರೊಳಗಾಗಿ ಸಲ್ಲಿಸಬಹುದಾಗಿದೆ. ನಂತರ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ತಿಳಿಸಿದ್ದಾರೆ.

0 comments:
Post a Comment