ಕೊಪ್ಪಳ ನ. ೨೭ (ಕ ವಾ)ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಕ್ಕಳ ಸಂರಕ್ಷಣಾ ಚಟುವಟಿಕೆ ಮತ್ತು ಕಾರ್ಯಕ್ರಮಗಳು ಮಕ್ಕಳ ರಕ್ಷಣಾ ವ್ಯವಸ್ಥೆಯ ಕ್ರಮಕ್ಕೆ ಉತ್ತಮ ಮಾದರಿಯಾಗಿದೆ ಎಂದು, ಯುನಿಸೆಫ್ ನವದೆಹಲಿಯ ಪ್ರತಿನಿಧಿ ಫಾರುಖ್ ರವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾದ ಬಾಲಿಕಾ ಸಂಘಗಳ ಜಿಲ್ಲಾ ಮಟ್ಟದ ಸಮಾವೇಶ ಮತ್ತು ಮಕ್ಕಳ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಿಶೋರಿಯರ ಸಬಲೀಕರಣವು ಅಭಿವೃದ್ಧಿಗೆ ಪೂರಕವಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳಿಗೆ ಕಿಶೋರಿಯರು ಬಲಿಯಾಗದೇ ತಮ್ಮನ್ನು ತಾವೇ ರಕ್ಷಣೆ ಮಾಡಲು ಬಾಲಿಕಾ ಸಂಘಗಳು ನೆರವಾಗುತ್ತವೆ. ಪೋಷಕರೂ ಕೂಡ ಕಿಶೋರಿಯರ ಭಾವನೆಗಳನ್ನು ಅರಿತು ಅವರ ಪ್ರತಿಭೇಗಳಿಗೆ ಪ್ರೋತ್ಸಾಹಿಸಬೇಕು ಎಂದು ಯುನಿಸೆಫ್‌ನ ದೆಹಲಿಯ ಪ್ರತಿನಿಧಿ ಫಾರುಖ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುನಿಸೆಫ್- ಹೈದರಾಬಾದ್‌ನ ರೂತ್‌ಲಿಯಾನೋ ರವರು ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಯುನಿಸೆಫ್ ಮತ್ತು ಕರ್ನಾಟಕ ಸರಕಾರ, ಜಿಲ್ಲಾಡಳಿತದ ಮೂಲಕ
ಯುನಿಸೆಫ್‌ನ ಮಕ್ಕಳ ರಕ್ಷಣಾ ಪರಿಣಿತರಾದ ಸೋನಿಕುಟ್ಟಿ ಜಾರ್ಜ್, ಸಂಯೋಜಕ ಹರೀಶ್ ಜೋಗಿ, ರಾಘವೇಂದ್ರ ಭಟ್, ಸೋಮಶೇಖರ್, ಶಿವರಾಮ್ ಮೊದಲಾದವರು ಭಾಗವಹಿಸಿದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಕಿಶೋರಿಯರು ಆಗಮಿಸಿದ್ದರು. ಶ್ರೀಮತಿ ವಾಣಿ ಪೆರಿಯೋಡಿ ಮತ್ತು ಅವರ ತಂಡದವರು ಕಿಶೋರಿಯರಿಗೆ ವಿವಿಧ ಚಟಿವಟಿಕೆಗಳ ಮುಖಾಂತರ ಜೀವನ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು.
ತಂಡವು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರೊಂದಿಗೆ ಸಮಾಲೋಚನೆ ನಡೆಸಿ ನಂತರ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ತೆರೆದಮೆನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲದೆ ಓಜನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯತ್ನಟ್ಟಿಯಲ್ಲಿ ಮಕ್ಕಳ ಗ್ರಾಮಸಭೆ, ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದರು. ಸಾಮೂಹಿಕ ವಿವಾಹ ಆಯೋಜಕರೊಂದಿಗೆ ಚರ್ಚೆ ನಡೆಸಿದರು.
ಅನುಷ್ಠಾನಗೊಳಿಸುತ್ತಿರುವ ಮಕ್ಕಳ ರಕ್ಷಣಾ ಯೋಜನೆಯಡಿ ಮುಖಾಂತರ ಹಲವಾರು ಪ್ರಾಯೋಗಿಕ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು.ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾದ ಬಾಲಿಕಾ ಸಂಘಗಳ ಜಿಲ್ಲಾ ಮಟ್ಟದ ಸಮಾವೇಶ ಮತ್ತು ಮಕ್ಕಳ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಿಶೋರಿಯರ ಸಬಲೀಕರಣವು ಅಭಿವೃದ್ಧಿಗೆ ಪೂರಕವಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳಿಗೆ ಕಿಶೋರಿಯರು ಬಲಿಯಾಗದೇ ತಮ್ಮನ್ನು ತಾವೇ ರಕ್ಷಣೆ ಮಾಡಲು ಬಾಲಿಕಾ ಸಂಘಗಳು ನೆರವಾಗುತ್ತವೆ. ಪೋಷಕರೂ ಕೂಡ ಕಿಶೋರಿಯರ ಭಾವನೆಗಳನ್ನು ಅರಿತು ಅವರ ಪ್ರತಿಭೇಗಳಿಗೆ ಪ್ರೋತ್ಸಾಹಿಸಬೇಕು ಎಂದು ಯುನಿಸೆಫ್‌ನ ದೆಹಲಿಯ ಪ್ರತಿನಿಧಿ ಫಾರುಖ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುನಿಸೆಫ್- ಹೈದರಾಬಾದ್‌ನ ರೂತ್‌ಲಿಯಾನೋ ರವರು ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಯುನಿಸೆಫ್ ಮತ್ತು ಕರ್ನಾಟಕ ಸರಕಾರ, ಜಿಲ್ಲಾಡಳಿತದ ಮೂಲಕ
ಯುನಿಸೆಫ್‌ನ ಮಕ್ಕಳ ರಕ್ಷಣಾ ಪರಿಣಿತರಾದ ಸೋನಿಕುಟ್ಟಿ ಜಾರ್ಜ್, ಸಂಯೋಜಕ ಹರೀಶ್ ಜೋಗಿ, ರಾಘವೇಂದ್ರ ಭಟ್, ಸೋಮಶೇಖರ್, ಶಿವರಾಮ್ ಮೊದಲಾದವರು ಭಾಗವಹಿಸಿದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಕಿಶೋರಿಯರು ಆಗಮಿಸಿದ್ದರು. ಶ್ರೀಮತಿ ವಾಣಿ ಪೆರಿಯೋಡಿ ಮತ್ತು ಅವರ ತಂಡದವರು ಕಿಶೋರಿಯರಿಗೆ ವಿವಿಧ ಚಟಿವಟಿಕೆಗಳ ಮುಖಾಂತರ ಜೀವನ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು.
ತಂಡವು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರೊಂದಿಗೆ ಸಮಾಲೋಚನೆ ನಡೆಸಿ ನಂತರ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ತೆರೆದಮೆನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲದೆ ಓಜನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯತ್ನಟ್ಟಿಯಲ್ಲಿ ಮಕ್ಕಳ ಗ್ರಾಮಸಭೆ, ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದರು. ಸಾಮೂಹಿಕ ವಿವಾಹ ಆಯೋಜಕರೊಂದಿಗೆ ಚರ್ಚೆ ನಡೆಸಿದರು.
0 comments:
Post a Comment