PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-24-  ತಾಲೂಕಿನ ಹುಲಿಗಿಯಲ್ಲಿ ದಿನಾಂಕ ೨೩-೦೮-೨೦೧೫ ನೇ ಭಾನುವಾರ ಬೆಳಗ್ಗೆ ೧೦:೩೦ ಕ್ಕೆ ಮೇದಾರ ಸಮಾಜದ ನೂತನ ಕಟ್ಟಡದ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಕರ್ನಾಟಕ ಮೇದ ಮಹಾ ಸಂಘದ ರಾಜ್ಯಾಧ್ಯಕ್ಷ  ಹೆ.ಡಿ. ಬಸವರಾಜ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.  ಈ ಸಂಧರ್ಬದಲ್ಲಿ ಹುಲಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರೇಣುಕಾ ರಾಮಣ್ಣನವರ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಟಿ. ಜನಾರ್ಧನ ಹಾಗೂ ಗವಿಸಿದ್ದಪ್ಪ ಕರಡಿ, ರವಿ ಕುರಗೋಡ ಉಪಸ್ಥಿತರಿದ್ದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, ಮೇದಾರ ಸಮಾಜದ ಒಗ್ಗಟ್ಟು ಮತ್ತು ಸ್ವಂತ ಬಲದಮೇಲೆ ನಿರ್ಮಿಸಿದ ಕಟ್ಟದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಎಸ್.ಟಿ ಸಮುದಾಯಕ್ಕೆ ಸೇರ್ಪಡೆ ಯಾಗಿರುವ ಮೇದಾರ ಸಮಾಜಕ್ಕೆ ಸರ್ಕಾರದಿಂದ ಸಿಗುವಂತಹ ಸಕಲ ಸವಲತ್ತುಗಳನ್ನು ನೀಡುವುದಾಗಿ ಭರವಸೆ ನೀಡಿದರು. ನಂತರ ಕರ್ನಾಟಕ ಮೇದ ಮಹಾ ಸಂಘದ ರಾಜ್ಯಾಧ್ಯಕ್ಷರಾದ ಹೆ.ಡಿ. ಬಸವರಾಜ ಮಾತನಾಡಿ, ಮೇದಾರ ಸಮಾಜ ಇನ್ನು ಹೆಚ್ಚಿನ ರಿತಿಯಲ್ಲಿ ಬೆಳೆಯಬೇಕಾದರೆ ನಮಗೆಲ್ಲ ಒಗ್ಗಟ್ಟು, ಶಿಕ್ಷಣ, ಪರಿಶ್ರಮದ ಅವಶ್ಯಕತೆ ಇದ್ದು, ಅದರ ಬಗ್ಗೆ ಸಮಾಜದವರಿಗೆ ತಿಳುವಳಿಕೆಯ ಮಾತುಗಳನ್ನು ಹೇಳಿದರು.  ರವಿ ಕುರಗೋಡ ಮಾತನಾಡಿ, ಎಸ್.ಟಿ ಜನಾಂಗಕ್ಕೆ ಸೇರಿದ ಮೇದಾರ ಸಮಾಜವು ಆರ್ಥಿಕ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಗೂ ಮೇದಾರ ಕೇತೇಶ್ವರ ಜಯಂತಿಯನ್ನು ಮಾಡಲು ಶಾಸಕರಿಗೆ ಒತ್ತಾಯಿಸಿದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಕೆ ರಮೇಶ ದಾವಣಗೆರೆ ಮಾತನಾಡಿದರು. ಸಿ.ಬಿ ಸೋಮಶೇಕರ ನಿರೂಪಿಸಿದರು. ಹೆ.ಯು. ಗಿರಿಶ್ ವಂದಿಸಿದರು.

Advertisement

0 comments:

Post a Comment

 
Top