ಕೊಪ್ಪಳ - 24 -
ಇತ್ತೀಚಿಗೆ ಕೊಪ್ಪಳ ನಗರಕ್ಕೆ ಆಗಮಿಸಿದ್ದ ಕಲಬುರ್ಗಿ ಅಪರ ಆಯುಕ್ತಾಲಯದ ನಿರ್ದೇಶಕರಾದ ಶ್ರೀ ಸಿ.ವಿ.ಹಿರೇಮಠ ಇವರನ್ನು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಜಿಲ್ಲಾ ಘಟಕದ ಪಧಾದೀಕಾರಿಗಳು ಬೇಟಿ ನೀಡಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸರಕಾರಿ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರ ಹಾಗೂ ತತ್ಸಮಾನ ಹುದ್ದೆಗಳಿಗೆ ಸಹ ಶಿಕ್ಷಕ ವೃಂದದಿಂದ ಭರ್ತಿ ನೀಡುವ ಪ್ರಕ್ರಿಯೆಯು ವಿಳಂಬವಾಗಿರುವುದನ್ನು ಸರಿಪಡಿಸಿ ಮುಂಬರುವ ಶಿಕ್ಷಕರ ದಿನಾಚರಣೆಯ ಒಳಗಾಗಿ ಅರ್ಹ ಸಹ ಶಿಕ್ಷಕರಿಗೆ ತುರ್ತಾಗಿ ಭರ್ತಿ ನೀಡಲು ಕೌನ್ಸಲಿಂಗ ದಿನಾಂಕ ನಿಗದಿಪಡಿಸಿ ಪ್ರಕ್ರಿಯೆಗೆ ಚಾಲನೆ ನೀಡಲು ಒತ್ತಾಯಿಸಿ ಮನವಿ ಪತ್ರ ನೀಡಲಾಯಿತು. ಮನವಿ ಸ್ವೀಕರಿಸಿದ ನಿರ್ದೇಶಕರು ಒಂದು ವಾರದ ಒಳಗಾಗಿ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು ಈ ನಿಯೋಗದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷರಾದ ವೆಂಕಟೇಶಗೌಡರ ಪ್ರಧಾನ, ಕಾರ್ಯದರ್ಶಿಗಳಾದ ಎಸ್.ಬಿ ಕುರಿ, ಮಾರ್ತಾಂಡರಾವ ದೇಸಾಯಿ, ಬಸವರಾಜ ಪಾಟೀಲ್, ವಿ.ಎಸ್.ಬೆಣಕಲ್, ನಾಗಭೂಷಣ, ಸುರೇಂದ್ರ ಗೌಡ, ಶರಣಬಸನಗೌಡ, ನಿಂಗಪ್ಪ ಚಕ್ರಸಾಲಿ, ಮಲ್ಲಪ್ಪ ಜುಮ್ಮಣ್ಣನವರ, ಇತರೆ ಪದಾಧಿಕಾರಿಗಳು ಹಾಗೂ ಸೇವಾ ಹಿರಿತನ ಹೊಂದಿದ ಶಿಕ್ಷಕರು ಉಪಸ್ಥಿತರಿದ್ದರು.

0 comments:
Post a Comment