ಕೊಪ್ಪಳ-30- ನಾಡಿನ ಹೆಸರಾಂತ ವಿಚಾರವಾದಿ ಹಾಗೂ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯು ಖಂಡನಾರ್ಹ. ವಿಚಾರವಾದವನ್ನು ಸಹಿಸಿಕೊಳ್ಳದ ಸಾಮಾಜಿಕ ಅಗೋಚರ ಶಕ್ತಿಯೊಂದು ಇಂತಹ ಹೇಯ ಕೃತ್ಯವನ್ನು ಎಸಗಿದೆಯೆಂದು ಹಿರಿಯ ಸಾಹಿತಿ ಎಚ್.ಎಸ್ ಪಾಟೀಲ ಅಭಿಪ್ರಾಯ ವ್ಯಕ್ತಪಡಿದರು. ಕೊಪ್ಪಳ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಲಾಗಿದ್ದ ಖಂಡನಾ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಕಲಬುರ್ಗಿಯವರ ಕುರಿತು ಅವರೊಬ್ಬ ಮೌಢ್ಯತೆಯನ್ನು ಧಿಕ್ಕರಿಸಿ ಮನುಷ್ಯ
ಪ್ರೀತಿಯನ್ನು ಅಪ್ಪಿಕೊಂಡು ಬದುಕಿದ್ದರಲ್ಲದೇ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ
ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದರೆಂದರು.
ಇದೇ ಸಂದರ್ಭದಲ್ಲಿ ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ ಕಲಬುರ್ಗಿಯವರ ಹತ್ಯೆಯಿಂದ ವಿಚಾರವಾದಿಗಳು ಭಯಪಡುವ ಅಗತ್ಯವಿಲ್ಲ. ಮತ್ತು ಎದೆಗಾರಿಕೆಯಿಂದ ಕಲಬುಗಿಯವರಂತೆ ಬದುಕಿಬಾಳಬೇಕೆಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಅಕ್ಬರ ಸಿ ಕಾಲಿಮಿರ್ಚಿ , ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೈಲಾರಗೌಡ ಹೊಸಮನಿ, ಶಿಕ್ಷಕ ಚನ್ನಬಸಪ್ಪ ಬೆಲ್ಲದ ಹಾಗೂ ಕವಿ ಶಿವಪ್ರಸಾದ ಹಾದಿಮನಿ ಮಾತನಾಡಿದರು.
ಸಭೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿ.ಕಾ ಬಡಿಗೇರ, ಶಿಕ್ಷಕ ವೀರನಗೌಡ ಪಾಟೀಲ, ಶಿಕ್ಷಕ ವಾಸುದೇವ ಕುಲಕರ್ಣಿ, ಗವಿಸಿದ್ಧಪ್ಪ ಕರ್ಕಿಹಳ್ಳಿ ಹಾಗೂ ವಿಶ್ವನಾಥ ಬೆಲ್ಲದ ಉಪಸ್ಥಿತರಿದ್ದರು. ನಿರೂಪಣೆ ಡಾ.ಪ್ರಕಾಶ ಬಳ್ಳಾರಿ , ವಂದನಾರ್ಪಣೆ ಶಿ.ಕಾ ಬಡಿಗೇರ ನಿರ್ವಹಿದಸಿರು.

0 comments:
Post a Comment