ಕೊಪ್ಪಳ,
ಆ.೨೭ (ಕ ವಾ) ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ
ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕಿನ ಬಿ.ಹೊಸಳ್ಳಿ ಗ್ರಾಮದ ಸರಕಾರಿ ಪ್ರೌಢ
ಶಾಲೆಯಲ್ಲಿ ಆ.೨೬ ರಂದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಶಾಲಾ ಮಕ್ಕಳ
ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದ ಮಕ್ಕಳ ವಿಶೇಷ ಪೋಲಿಸ್ ಘಟಕದ ಬಸಪ್ಪ ಹಾದಿಮನಿ ಮಾತನಾಡಿ, ಮಕ್ಕಳ ಮೇಲೆ
ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಮಕ್ಕಳ ಮೇಲಿನ
ಲೈಗಿಂಕ ದೌರ್ಜನ್ಯ ತಡೆ ಕಾಯ್ದೆ-೨೦೧೨ ನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿ ೧೮
ವರ್ಷದೊಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಸಂಜ್ಞೆ, ಶಾಬ್ಧಿಕವಾಗಿ ಕಿರುಕುಳನ್ನು
ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಿ ಪ್ರಕರಣ ದಾಖಲಿಸಬಹುದಾಗಿದೆ. ಈ ಕಾಯ್ದೆಯಡಿ
ಪ್ರಕರಣ ದಾಖಲಾದಲ್ಲಿ ಅದು ವಿಚಾರಣಾರ್ಹ ಮತ್ತು ಜಾಮೀನುರಹಿತ ಪ್ರಕರಣ ಎಂದು
ಪರಿಗಣಿಸಲಾಗುತ್ತದೆ. ಅಲ್ಲದೇ ೧೮ ವರ್ಷದೂಳಗಿನ ಬಾಲಕಿಯು ತಾನೇ ಸ್ವತಃ ಸ್ವ-ಇಚ್ಛೆಯಿಂದ
ಯುವಕನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದರೂ ಸಹ ಈ ಕಾಯ್ದೆಯಡಿ ಆ ಯುವಕನದೆ ಅಪರಾಧ ಎಂದು
ಪರಿಗಣಿಸಿ ಪ್ರಕರಣ ದಾಖಲಿಸಲಾಗುತ್ತದೆ. ಇಂತಹ ಅಪರಾಧಗಳಿಗೆ ೭ ವರ್ಷ ಜೀವಾವಧಿ ಕಠಿಣ
ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಇಂದಿನ ಯುವಕ, ಯುವತಿಯರು ಪ್ರೀತಿ, ಪ್ರೇಮ ಎಂದು
ತಮ್ಮ ಜೀವನವನ್ನು ಹಾಳುಮಾಡಿಕೊಳ್ಳದೇ, ವಿದ್ಯಾಭ್ಯಾಸದ ಕಡೆ ಗಮನ ಹರಿಸಿ, ಜೀವನದಲ್ಲಿ
ಯಶಸ್ಸು ಕಾಣಬೇಕು ಎಂದು ಕಿವಿಮಾತು ಹೇಳಿದ ಅವರು, ಎಲ್ಲರೂ ಮಕ್ಕಳ ಹಕ್ಕುಗಳನ್ನು
ಗೌರವಿಸೋ
ಣ ಎಂದು ಕರೆ ನೀಡಿದರು.
ಮಕ್ಕಳ ಸಹಾಯವಾಣಿಯ ಲತಾ ವಿ.ಜೆ ಮಾತನಾಡಿ
ಸಂಕಷ್ಠದಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲೆಯಲ್ಲಿ
ಮಕ್ಕಳ ಸಹಾಯವಾಣಿ ೧೦೯೮ ನ್ನು ಆರಂಭಿಸಲಾಗಿದ್ದು, ಸಂಕಷ್ಠದಲ್ಲಿರುವ ಮಕ್ಕಳು
ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆಮಾಡಬಹುದಾಗಿದೆ. ನೀವು ಕರೆ ಮಾಡಿದ ೬೦
ನಿಮಿಷದೊಳಗಾಗಿ ಸದರಿ ಮಗುವನ್ನು ರಕ್ಷಿಸಿ, ಅಗತ್ಯ ಪುನರ್ವಸತಿ ಕಲ್ಪಿಸಲಾಗುವುದು
ಎಂದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಜಗದೀಶ್ವರಯ್ಯ ಹಿರೇಮಠ, ಜಿಲ್ಲಾ ಮಕ್ಕಳ
ರಕ್ಷಣಾ ಘಟಕದ ರವಿಕುಮಾರ ಪವಾರ ಮಾತನಾಡಿದರು. ಬಿ.ಹೊಸಳ್ಳಿಯ ಸರ್ಕಾರಿ ಪ್ರೌಢಶಾಲೆ
ಮುಖ್ಯ ಶಿಕ್ಷಕಿ ಮಂಗಳಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರವಿ ಬಡಿಗೇರ
ನಿರೂಪಿಸಿದರು. ಸಿದ್ದು ಪೂಜಾರ ವಂದಿಸಿದರು.
0 comments:
Post a Comment