PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ- ಪಟ್ಟಣದಲ್ಲಿ ಕುಡಿಯುವ ಸೀಹಿ ನೀರಿಗಾಗಿ ಸರಕಾರದ ಸಾಕಷ್ಟು ಕೋಟ್ಯಾನು ಕೋಟಿ ಅನುದಾನ  ಹಣ ಬಿಡುಗಡೆಯಾಗುತ್ತಿದ್ದರು  ಕುಡಿಯುವ ಸೀಹಿ ನೀರು ಬಿಡುಗಡೆಯಾಗುತ್ತಿಲ್ಲದಿರುವುದು  ಪಟ್ಟಣ ಪಂಚಾಯಿತಿಗೆ ಕಳಂಕ ತರುವ ವಿಷಯವಾಗಿದೆ , ಹಿಗಿದ್ದರು  ಸಾರ್ವಜನಿಕರು ಸತತವಾಗಿ ಐದು ವರ್ಷಗಳಿಂದ ಸಮಸ್ಯೆಯಿಂದ ತಾಳ್ಮೆಯಿಂದ ಇದ್ದು ಈಗ ನೊಂದು,ಬೆಂದು ರೋಷಿ ಹೋಗಿದ್ದಾರೆ.ಕೋಟಿ,ಕೋಟಿ ಹಣವಿದ್ದರು ನೀರು ಬೀಡುವಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ವರ್ಗದವರು, ಮುಖ್ಯಾಧಿಕಾರಿಗಳು ಇಲ್ಲಾ,ಜೈ ಇಲ್ಲಾ ವೆಂದು  ಕುಂಟು ನೆಪ ಹೇಳುತ್ತಿದ್ದಾರೆ. ಸತತವಾಗಿಮೌಖಿಕವಾಗಿ, ಲಿಖಿತವಾಗಿ.ಹಲವಾರು ಪ್ರತಿಭಟನೆ ಮಾಡಿದರು ಕೂಡ ನೀರು ಬರಲಿಲ್ಲ.ಜನಪ್ರೀಯ ಶಾಸಕರು,ಜನಪ್ರತಿನಿಧಿಗಳು ಏಲ್ಲಿ ಅಡಗಿಕೊಂಡಿದ್ದಿರಿ ನಮಗೆ ಕುಡಿಯುವ ನೀರು ಕೊಡಿ ಎಂದು ಜೀಲ್ಲಾ ಜನಪರ ಹೋರಾಟ ಸಮೀತಿ ಧುರೀಣ ಎಸ್,ಕೆ,ದಾನಕೈ ಒತ್ತಾಹಿಸಿದ್ದಾರೆ ಇತರ ವಾರ್ಡಗಳಲ್ಲಿ ಕುಡಿಯುವ ನೀರು ನಿರಂತರವಾಗಿ ಚೇನ್ನಾಗಿ ಸರಬರಾಜುವಾಗುತ್ತಿದೆ ಅದಕ್ಕೆ ತಮಗೆ ಧನ್ಯವಾದಗಳು ಅದರಂತೆ ೬ ನೇ ವಾರ್ಡಿನ ದ್ಯಾಮಮ್ಮ ದೇವಸ್ಥಾನದ ಮುಂದೆ,೭ ನೇ ವಾರ್ಡಿನ ಸಿದ್ದರಾಮೇಶ್ವರ ಹವ್ಯಾಸಿ ಕಲಾ ಮಂದಿರ ಮುಂದೆ,೮ ನೇ ವಾರ್ಡಿನ ಅಂಗನವಾಡಿ ಕೇಂದ್ರದ ಮುಂದೆ ನಿರಂತರವಾಗಿ ಕುಡಿಯುವ ನೀರು ಸರಬರಾಜು ವಾಗುವಂತೆ ಕ್ರಮ ತಗೆದುಕೊಂಡರೆ ,೩-೪ ಸಾವಿರ ಸಾರ್ವಜನಿಕರ ನೀರಿನ ಸಮಸ್ಯೆ  ನಿವಾರಣೆಯಾಗುತ್ತದೆಂದು ಜೀಲ್ಲಾಜನಪರ ಹೋರಾಟ ಸಮೀತಿ ಧುರೀಣ ಎಸ್.ಕೆ.ದಾನಕೈ  ಪತ್ರಿಕಾ ಮಾಧ್ಯಮಕ್ಕೆ ತಮ್ಮ ಅಳಲನ್ನು ವ್ಯಕ್ತ ಪಡಿಸಿದ್ದಾರೆ.
ಇನ್ನೂ ಮುಂದೆ ಕುಡಿಯುವ ನೀರು ಬಿಡದಿದ್ದರೆ ಯಲಬುರ್ಗಾ ಸಂಪೂರ್ಣ ಬಂದ್ ಕಾರ್ಯಕ್ರಮ ನಂತರ ಸಾರ್ವಜನಿಕರೊಂದಿಗೆ  ಜಿಲ್ಲಾಧಿಕಾರಿಗಳ ಮುಂದೆ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಅಂದಿನ ಕಾರ್ಯಕ್ರಮದಲ್ಲಿ ರೈತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ತಿಳಿಸಿದ್ದಾರೆ.

Advertisement

0 comments:

Post a Comment

 
Top