ಕೊಪ್ಪಳ - ಸ್ಚಚ್ಛ ಭಾರತ, ನೈರ್ಮಲ್ಯಜಿಲ್ಲೆ ಕಟ್ಟಲು ಸರ್ಕಾರ ಒಂದೆಡೆ ಪ್ರಯತ್ನಿಸುತ್ತಿದ್ದರೆ. ಇನ್ನೊಂದೆಡೆ ಇದೇ ಸರಕಾರದ ಪಿ.ಡಬ್ಲು.ಡಿ ಇಲಾಖೆಯು ಹಾಲಿ ಇರುವ ಚರಂಡಿಯನ್ನು ನಾಶಪಡಿಸಿ, ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ ರೋಗ-ರುಜಿನಗಳನ್ನು ಹರಡಲು ಆಸ್ಪದ ನೀಡುತ್ತಿರುವ ಬೆಳವಣಿಗೆ ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿ ನಡೆಯುತ್ತಿದೆ. ಕಲ್ಯಾಣ ನಗರ, ಮುಸ್ಲಿಂ ಖಬ್ರಸ್ಥಾನ್, ಪ್ರಗತಿನಗರ ಮೊದಲಾದ ಹೊಸ ಬಡಾವಣೆಗಳಲ್ಲಿ ಚರಂಡಿ,ಕುಡಿಯುವ ನೀರಿನ ಸಮರ್ಪಕ ಸೌಲಭ್ಯಗಳು ಇಲ್ಲ. ೨೦೦೯ರಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ, ಇಲ್ಲಿನ ನಾಗರಿಕರು ಚುನಾಯಿತ ಪ್ರತಿನಿಧಿಗಳನ್ನು ಒತ್ತಾಯಿಸಿ ಪ್ರಗತಿ ನಗರದಿಂದ ಸಮೀಪದ ಹಳ್ಳಕ್ಕೆ ಸಂಪರ್ಕ ಕಲ್ಪಿಸುವ ಸಣ್ಣ ಚರಂಡಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಈ ಭಾಗದ ಹಲವಾರು ಮನೆಗಳು ಇದೇ ಚರಂಡಿಯನ್ನು ಅವಲಂಬಿಸಿವೆ. ಇದೀಗ ಲೋಕೋಪಯೋಗಿ ಇಲಾಖೆಯು ಕಲ್ಯಾಣ ನಗರ ಮೊದಲ ಕ್ರಾಸ್ ನಿಂದ ಭಾರತೀಯ ಆಹಾರ ನಿಗಮದ ಗೋದಾಮಿನವರೆಗೆ ಕೇವಲ ೭೫೦ ಮೀಟರ್ ಉದ್ದದ ರಸ್ತೆ ಸುಧಾರಣೆಗೆ ಕೈ ಹಾಕಿದೆ. ಆದರೆ ರಸ್ತೆಗೆ ಹೊಂದಿಕೊಂಡತೆ ರಸ್ತೆ ನಿರ್ಮಿಸಲು ಇದರಲ್ಲಿ ಮಂಜೂರಾತಿ ಒದಗಿಸಿಲ್ಲ. ಅಷ್ಟೇ ಅಲ್ಲ ಹಾಲಿ ಇರುವ ಚರಂಡಿಯನ್ನು ಸಹ ನಾಶಪಡಿಸಿ ನಾಗರಿಕರನ್ನು ಸಾಂಕ್ರಾಮಿಕ ರೋಗಗಳಿಗೆ ತಳ್ಳುವ ಅವೈ
ಜ್ಞಾನಿಕ ಕಾಮಗಾರಿಯನ್ನು ಪಿ.ಡಬ್ಲು.ಡಿ ಮಾಡುತ್ತಿದೆ. ಚರಂಡಿ ನಿರ್ಮಾಣದೊಂದಿಗೆಯೇ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ಇಲ್ಲದೇ ಹಾಲಿ ಇರುವ ಚರಂಡಿಗೆ ಧಕ್ಕೆ ಉಂಡು ಮಾಡದೇ ರಸ್ತೆ ನಿರ್ಮಿಸಬೇಕು ಎಂದು ಈ ಭಾಗದ ನೂರಾರು ನಾಗರಿಕರು ಒತ್ತಾಯಿಸಿ ಈಗಾಗಲೇ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಚರಂಡಿ ನಾಶಪಡಿಸಿದರೆ ಬಳಸಿದ ನೀರು ಶೌಚಾಲಯದ ತ್ಯಾಜ್ಯ,ವಿಲೇವಾರಿಗೆ ತೊಂದರೆ ಉಂಟಾಗಿ. ಡೆಂಗ್ಯೂ-ಚಿಕೂನ್ ಗುನ್ಯಾ, ಮಲೇರಿಯಾ, ಕಾಲರಾ ಹರಡುವ ಭೀತಿ ಇರುವುದರಿಂದ ಸದ್ಯ ಇರುವ ಚರಂಡಿ ನಾಶಪಡಿಸದೇ ರಸ್ತೆ ನಿರ್ಮಿಸಬೇಕು. ಇಲ್ಲವೇ ಚರಂಡಿ ಸಹಿತವಾಗಿಯೇ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ನಿಜವಾದ ಸ್ವಚ್ಛ ಭಾರತ ನಿರ್ಮಿಸಬೇಕು ಎಂದು ಸಚಿವರು,ಸಂಸದರು,ಶಾಸಕರು ಹಾಗೂ ಜಿಲ್ಲಾಧಿಕಾರಿಗಳನ್ನು ಪ್ರಗತಿ ನಗರದ ನಿವಾಸಿಗಳಾದ ಡಿ.ಎನ್.ಡೊಳ್ಳಿನ, ಕಾಗಲಕರ್ ಜ್ಯುವೆಲರ್‍ಸ್,ಚಂದ್ರು ಬೆಟಗೇರಿ,ಸಿದ್ಧಯ್ಯ ಹಿರೇಮಠ, ಈರಮ್ಮ ಕೊಳ್ಳಿ, ಸಲೀಂ ಮಂಗಳಾಪುರ, ನೀಲಪ್ಪ ಪಡತಪ್ಪನವರ, ಅಮರೇಶ,ದೇವಿಕಾ ದಂಡಿನ್ ಮತ್ತಿತರರು ಒತ್ತಾಯಿಸಿದ್ದಾರೆ.

0 comments:
Post a Comment