PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ.೧೦ ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಯೋಜನೆಯಡಿ ಎಮ್/ಎಸ್ ಎಸಿಸಿಪಿಎಲ್ ಸಂಸ್ಥೆ ವತಿಯಿಂದ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಎಮ್/ಎಸ್ ಎಸಿಸಿಪಿಎಲ್ ಸಂಸ್ಥೆ ವತಿಯಿಂದ ಕಂಪ್ಯೂಟರ್ ಕೋರ್ಸ್‌ಗಳಾದ ಬಿಪಿಒ ನಾನ್ ವಾಯ್ಸ್ ಬಿಸಿನೆಸ್ ಆಂಡ್ ಕಂಪ್ಯೂಟರ್ ಫಂಡಮೆಂಟಲ್ ಎಮ್‌ಎಸ್ ಆಫೀಸ್, ಬಿಪಿಒ ವಾಯ್ಸ್ ಬಿಸಿನೆಸ್ ಆಂಡ್ ಕಂಪ್ಯೂಟರ್ ಫಂಡಮೆಂಟಲ್ ಎಮ್‌ಎಸ್ ಆಫೀಸ್, ಕಂಪ್ಯೂಟರ್ ಫಂಡಮೆಂಟಲ್ ಎಮ್‌ಎಸ್ ಆಫೀಸ್, ಇಂಟರ್‌ನೆಟ್, ಟ್ಯಾಲಿ ಆಂಡ್ ಸಾಫ್ಟ್ ಸ್ಕಿಲ್ಸ್, ಕಂಪ್ಯೂಟರ್ ಫಂಡಮೆಂಟಲ್ ಎಮ್‌ಎಸ್ ಆಫೀಸ್, ಇಂಟರ್‌ನೆಟ್, ೨ಡಿ ಪ್ರಿ ಪ್ರೊಡಕ್ಷನ್ ಆನಿಮೇಷನ್ ಆಂಡ್ ಸಾಫ್ಟ್ ಸ್ಕಿಲ್ಸ್, ಕಂಪ್ಯೂಟರ್ ಹಾರ್ಡ್‌ವೇರ್ ಆಂಡ್ ಕಂಪ್ಯೂಟರ್ ನೆಟ್‌ವರ್ಕಿಂಗ್ ಆಂಡ್ ಸಾಫ್ಟ್ ಸ್ಕಿಲ್ಸ್, ರಿಟೇಲ್ ಆಪರೇಷನ್ ಆಂಡ್ ಟ್ಯಾಲಿ ಆಂಡ್ ಸಾಫ್ಟ್ ಸ್ಕಿಲ್ಸ್, ಹಾಸ್ಪಿಟ್ಯಾಲಿಟಿ ಅಸ್ಸಿಸ್‌ಟೆಂಟ್ ಆಂಡ್ ಟ್ಯಾಲಿ ಆಂಡ್ ಸಾಫ್ಟ್ ಸ್ಕಿಲ್ಸ್, ಡೆಸ್ಕ್‌ಟಾಪ್ ಪಬ್ಲಿಷಿಂಗ್ ಆಂಡ್ ವೆಬ್ ಡಿಸೈನಿಂಗ್ ಆಂಡ್ ಸಾಫ್ಟ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್ ಆಂಡ್ ಕಮ್ಯುನಿಕೇಷನ್ ಸ್ಕಿಲ್, ಅಸಿಸ್‌ಟೆಂಟ್ ಫೈರ್ ಆಪರೇಟರ್, ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವಿಸ್ ಟ್ರೇನಿಂಗ್, ಅಡ್ವಾನ್ಸ್‌ಡ್ ಡಿಪ್ಲೋಮಾ ಇನ್ ಸಾಫ್ಟ್‌ವೇರ್ ಎಂಜನೀಯರಿಂಗ್, ಬೇಸಿಕ್ ಎಲೆಕ್ಟ್ರಾನಿಕ್ಸ್, ಬೇಸಿಕ್ ರೆಫ್ರಿಜಿರೇಷನ್ ಆಂಡ್ ಏರ್ ಕಂಡಿಷನಿಂಗ್ ಆಂಡ್ ರಿಪೇರ್ ಆಂಡ್ ಮೆಂಟೆನೆನ್ಸ್ ಆಫ್ ಏರ್‌ಪ್ಲಸ್ ಸಾಫ್ಟ್ ಸ್ಕಿಲ್ಸ್, ಬೇಸಿಕ್ ಆಫ್ ಸೋಲಾರ್ ಎಲೆಕ್ಟ್ರಿಸಿಟಿ ಆಂಡ್ ಸೋಲಾರ್ ಹಾಟ್ ವಾಟರ್ ಟ್ಯಾಂಕ್ ಟೆಕ್ನಿಷಿಯನ್, ಬೇಸಿಕ್ ಆಫ್ ಸೋಲಾರ್ ಎಲೆಕ್ಟ್ರಿಸಿಟಿ ಆಂಡ್ ಸೋಲಾರ್ ಲೈಟಿಂಗ್ ಸಿಸ್ಟ್‌ಮ್, ಬೇಸಿಕ್ ಆಫ್ ಸೋಲಾರ್ ಎಲೆಕ್ಟ್ರಿಸಿಟಿ ಆಂಡ್ ಸೋಲಾರ್ ಎಲೆಕ್ಟ್ರಿಕ್ ಸಿಸ್ಟಮ್ ಇನ್‌ಸ್ಟಾಲರ್ ಆಂಡ್ ಸರ್ವಿಸ್ ಪ್ರೋವೈಡರ್, ಬೇಸಿಕ್ ಆಫ್ ಸೋಲಾರ್ ಎಲೆಕ್ಟ್ರಿಸಿಟಿ ಆಂಡ್ ಸೋಲಾರ್ ಹಾಟ್ ವಾಟರ್ ಸಿಸ್ಟ್‌ಮ್ ಇನ್ಸ್ಟಾಲರ್ ಇನ್‌ಕ್ಲೂಡಿಂಗ್ ಸರ್ವಿಸಿಂಗ್ ತರಬೇತಿಗಳಿಗೆ ಎಸ್.ಎಸ್.ಎಲ್.ಸಿ, ಐ.ಟಿ.ಐ, ಬಿ.ಎಸ್.ಸಿ, ಬಿ.ಸಿ.ಎ, ಎಮ್.ಸಿ.ಎ, ಬಿ.ಇ ವಿದ್ಯಾರ್ಹತೆ  ಹೊಂದಿರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
     ಈ ಯೋಜನೆಯು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಅಭ್ಯರ್ಥಿಯು ೧೮ ರಿಂದ ೪೦ ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಅಭ್ಯರ್ಥಿಯು ನಿರುದ್ಯೋಗಿ, ವಿದ್ಯಾರ್ಥಿ ಅಥವಾ ಅಲ್ಪಸಂಖ್ಯಾತರ ನಿಲಯಾರ್ಥಿಯಾಗಿರಬೇಕು.  ತರಬೇತಿಯು ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ನಗರದ ಎ.ಸಿ.ಸಿ.ಪಿ.ಎಲ್ ತರಬೇತಿ ಕೇಂದ್ರಗಳಲ್ಲಿ ಜರುಗಲಿದೆ. ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಕಂಪ್ಯೂಟರ್ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ವಿದ್ಯಾರ್ಹತೆಯ ಧೃಢೀಕೃತ ಪ್ರಮಾಣ ಪತ್ರ, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಬಗ್ಗೆ ತಹಶೀಲ್ದಾರರಿಂದ ಪಡೆದ ಜಾತಿ, ಆದಾಯ ಪ್ರಮಾಣ ಧೃಢೀಕೃತ ಪ್ರತಿ ಲಗತ್ತಿಸಿ, ಆಯಾ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಿಗೆ ಆ.೨೦ ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ಅಥವಾ ಆಯಾ ತಾಲೂಕಿನ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದೆ.

Advertisement

0 comments:

Post a Comment

 
Top