PLEASE LOGIN TO KANNADANET.COM FOR REGULAR NEWS-UPDATES

ಸಮಾಜದಲ್ಲಿ ಮುಗ್ದರಿಗೆ ಬೆಲೆ ಇಲ್ಲ. ರಾಜಕೀಯ ಪ್ರಾತಿನಿಧ್ಯವು ಇಲ್ಲದ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಪ್ರಸ್ತುತಪಡಿಸುವ ವಾಸ್ತವ ಕಾದಂಬರಿಯೇ ಮತದಾನ  
ಕೊಪ್ಪಳ: ಡಾ.ಶಿವಪ್ಪ ಎಂ.ಬಿ.ಬಿ.ಎಸ್ ಕಲಿತು ವೈದ್ಯ ವೃತ್ತಿಯನ್ನು ಮಾಡುತ್ತಾ, ಹಳ್ಳಿ ಹಳ್ಳಿಗಳಿಗೆ ಸೈಕಲ್ ಮೇಲೆ ಸುತ್ತಾಡಿ ರೋಗಿಗಳಿಗೆ ಉಪಚಾರ ಮಾಡುತ್ತಾ ಜನಪ್ರಿಯನಾಗಿದ್ದನು. ಇಂತಹ ವೈದ್ಯ ವೃತ್ತಿಯನ್ನು ಮಾಡಿ ಬದುಕು ಸಾಗಿಸುತ್ತಿರುವ ಡಾ.ಶಿವಪ್ಪನು ಸಾಗರಹೊಳಿ ಮತ್ತು ನಾಗರಹೊಳಿ ಎಂಬ ಎರಡು ಕುಟುಂಬದವರ ಹೆಣ್ಣನ್ನು ಮದುವೆ ಮಾಡಿಕೊಳ್ಳಲು  ನಿರಾಕರಿಸಿದಾಗ  ಸಾಗರಹೊಳಿ ಕುಟುಂಬದವದು ಡಾ.ಶಿವಪ್ಪನ ಮೇಲೆ ದ್ವೇಷ ಸಾಧಿಸುತ್ತಾರೆ. ನಾಗರಹೊಳಿ  ಕುಟುಂಬದವರಲ್ಲಿ ಈಗಾಗಲೇ ಅಪ್ಪಾಜಿ ಎಂಬವರ ಮಂತ್ರಿಯಾಗಿದ್ದರು.  ಈಗ ಅವರ ವಿರುದ್ಧ ಚುನಾವಣೆಗೆ ನಿಲ್ಲುವಂತೆ  ಡಾ.ಶಿವಪ್ಪನನ್ನು  ಜನರು ಪ್ರಚೋದಿಸುತ್ತಾರೆ.  ಡಾ.ಶಿವಪ್ಪ ಜನರ ಪ್ರಚೋದನೆಯ ಮೇರೆಗೆ ಆ ಚುನಾವಣೆಯಲ್ಲಿ ಸ್ಪರ್ಧಿಸಿ ಸಾಗರಹೊಳಿ ಕುಟುಂಬದ ಪ್ರಕಾಶ ಎಂಬುವರ ವಿದುದ್ಧ ಹೀನಾಯವಾಗಿ  ಸೋಲುತ್ತಾರೆಂದು ಡಾ.ವಿ.ಬಿ.ರಡ್ಡೇರ ನುಡಿದರು. ಅವರು ಕೊಪ್ಪಳ ಬನ್ನಿಕಟ್ಟಿಯ ವಿಜಯನಗರ ಪ್ರೌಡ ಶಾಲೆಯಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್. ಬೈರಪ್ಪನವರ ಕುರಿತು ನಡೆದ ವಿಚಾರ ಸಂಕಿರಣದಲ್ಲಿ  ಮತದಾನ ಕಾದಂಬರಿ ಕುರಿತು ಮಾತನಾಡಿದರು. ಪರಸ್ಪರರಲ್ಲಿನ ದ್ವೇಷ, ಅಸೂಯೆಗಳು, ರಾಜಕೀಯ ಪೂರ್ವಾಗ್ರಹ ಪೀಡಿತ ಕಲ್ಪನೆಗಳು, ಮತದಾನ ಸಂದರ್ಭದಲ್ಲಿನ ಜಾತಿಯ ಲೆಖ್ಖಾಚಾರ, ಹಣ-ಹೆಂಡ ಹಂಚುವಿಕೆ, ಮೋಸ, ವಂಚನೆ, ರಾಜಕೀಯ ತಂತ್ರಗಾರಿಕೆ ಮುಗ್ದ ಜನಪ್ರಿಯ ವೈದ್ಯ ಡಾ.ಶಿವಪ್ಪನವರನ್ನು ಸೋಲಿಸುತ್ತವೆ. ಸಮಾಜದಲ್ಲಿ ಮುಗ್ದರಿಗೆ ಬೆಲೆ ಇಲ್ಲ. ರಾಜಕೀಯ ಪ್ರಾತಿನಿಧ್ಯವು ಇಲ್ಲದಾಗಿದೆಯೆನ್ನುವ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಪ್ರಸ್ತುತಪಡಿಸುವ ವಾಸ್ತವ ಕಾದಂಬರಿ ಇದಾಗಿದೆ ಎಂದರು. ಆರಂಭದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆಯ ನಗರ ಘಟಕ ಕೊಪ್ಪಳದ  ಅಧ್ಯಕ್ಷರಾದ ಮಂಜುನಾಥ ಬನ್ನಿಕೊಪ್ಪ ಉದ್ಘಾಟಿಸಿ  ಇಂತಹ ಕಾರ್ಯಕ್ರಮಗಳು ಕನ್ನಡಿಗರಲ್ಲಿ ಜಾಗೃತಿಯನ್ನು ಮೂಡಿಸುತ್ತವೆ ಎಂದರು. ಶಾಲಾ ಮುಖ್ಯೋಪಾಧ್ಯಾಯನಿಯರಾದ ಶೀಲಾ ಎಂ.ಹಲಗೇರಿ ಇವರಿಂದ ಭುವನೇಶ್ವರಿ ಭಾವಚಿತ್ರಕ್ಕೆ  ಪೂಜೆ ಜರುಗಿತು.  ಅತಿಥಿಗಳಾಗಿ  ಡಾ.ಪ್ರಕಾಶ ಬಳ್ಳಾರಿ, ಎಸ್.ಎ.ಗಫಾರ್, ಕಿಶನ್ ಗೋಪಾಲ ಜಾಜು, ಶಿವಾನಂದ ಹೊದ್ಲುರು, ಶ್ರೀಕಾಂತ ಬಡಿಗೇರ, ಹನುಮಂತಪ್ಪ ಅಂಡಗಿ,  ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವೀರಣ್ಣ ನಿಂಗೋಜಿ ವಹಿಸಿ ಕನ್ನಡ ಸಾಹಿತ್ಯದಲ್ಲಿ  ಎಸ್.ಎಲ್. ಬೈರಪ್ಪನವರ ಹಾಗೂ ಅವರ ಕಾದಂಬರಿಗಳ ಕುರಿತು ಚಿಂತನ ಮಂಥನಗಳ ಕಾರ್ಯಕ್ರಮ ನಡೆಯಬೇಕೆಂದರು. ನಿರೂಪಣೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಗೌರವ ಕಾರ್ಯದರ್ಶಿ ಹುಸೇನ್‌ಪಾಶಾ, ಸ್ವಾಗತ  ಶಿಕ್ಷಕ ಹನುಮಂತಪ್ಪ ಪಚ್ಚಿ, ವಂದನಾರ್ಪಣೆ ಆನಂದ ಹಳ್ಳುಗುಡಿ ನೆರವೇರಿಸಿದರು.

Advertisement

0 comments:

Post a Comment

 
Top