PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿ ೨೦.೧೧.೨೦೧೩ ರಂದು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತಿದೆ. ಗುಲ್ಬರ್ಗಾದಲ್ಲಿ ಸಮಾರು ೪೦ ಕ್ಕೂ ಹೆಚ್ಚು ಜನ ಜಗದ್ಗುರು ಸ್ವಾಮಿಗಳು ಮತ್ತು ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಸಹ ಅಡ್ಡಪಲ್ಲಕ್ಕಿ ಮಾಡುತ್ತಿರುವುದು.ವಿಷಾದನೀಯ ಎಂದು ವಿಶ್ವಗುರು ಬಸವೇಶ್ವರ ಟ್ರಸ್ಟ್ ಬಸವ ಸಮಿತಿ, ಮತ್ತು ಶ್ರೀ ಬಸವೇಶ್ವರ ಯುವಕ ಸಂಘ, ಲಿಂಗಾಯತ ಪ್ರಗತಿಶೀಲ ಸಂಘ ಕೊಪ್ಪಳ ಸಂಘಟನೆಗಳು ಖಂಡಿಸಿವೆ.
ಸಮಾನೆತೆಯನ್ನು ಸಾರಿ ಜನರಿಗೆ ತಿಳಿಹೇಳುವ ಸ್ಥಾನದಲ್ಲಿರುವ ಜಗದ್ಗುರುಗಳಾದ ಪಂಚಾಚಾರ್ಯರು ಅಸಮಾನತೆಯನ್ನು ಬಿಂಬಿಸುವ ಅಡ್ಡಪಲ್ಲಕ್ಕಿ ಉತ್ಸವ ಮಾಡಿಕೊಳ್ಳುವುದು ದುರದೃಷ್ಟಕರವಾದ ಸಂಗತಿಯಾಗಿದೆ. ಗುಲಾಮಗಿರಿ ಪದ್ಧತಿಯನ್ನು ನೆನಪಿಸುವ ಪಲ್ಲಕ್ಕಿ ಉತ್ಸವ ಮಾಡಿಕೊಳ್ಳುವುದನ್ನು ಬಿಟ್ಟು ಸಮಾಜಕ್ಕೆ ಮಾದರಿಯಾಗಬೇಕಾದ ಪಂಚಾಚಾರ್ಯರು, ಅಡ್ಡಪಲ್ಲಕ್ಕಿ ಮಾಡಿಕೊಳ್ಳುವುದು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವುದು ಗೋಚರವಾಗುತ್ತದೆ.
ಗುರು - ಜಗದ್ಗುರುಗಳಾದವರು ಸರಳತೆಯನ್ನು ತಾವು ರೂಢಿಸಿಕೊಂಡು ಜನರನ್ನು ಆ ದಾರಿಗೆ ತರುವ ಕಾರ್ಯ ಮಾಡಬೇಕು. ಜಗದ್ಗುರುವಾದವರಿಗೆ ಒಂದು ತತ್ವ ಸಿದ್ದಾಂತ ಇರಬೇಕು. ಆ ತತ್ವ ಸಿದ್ದಾಂತ ಎಲ್ಲರೂ ಮೆಚ್ಚುವಂತಹದಿರಬೇಕು. ಅಡ್ಡಪಲ್ಲಕ್ಕಿಯಲ್ಲಿ ಕೂರುವದು, ಜರದಾರಿ, ರೇಷ್ಮೆವಸ್ರ್ತ ಧರಿಸುವುದು ತತ್ವ ಸಿದ್ದಾಂತ ಅಲ್ಲ. ಕೆಳಗೆ ಬಿದ್ದವರನ್ನು ಮೇಲಕ್ಕೆ ಎತ್ತುವುದು ಧರ್ಮ. ಆದರೆ ಜನರ ಮೇಲೆ ಸವಾರಿ ಮಾಡುವುದು ಎಷ್ಟು ಸರಿ? ಇನ್ನು ಮುಂದೆಯಾದರು ತಮ್ಮ ಮನೋಭಾವ ಬದಲಾಯಿಸಿಕೊಂಡು ಜನರ ಮನೋಭಾವನೆಗಳನ್ನು ಬದಲಾಯಿಸುತ್ತಾರೆಂದು ನಂಬಿದ್ದೇವೆ. ಅಡ್ಡಪಲ್ಲಕ್ಕಿ ಉತ್ಸವದಿಂದ ಜನರಿಗೆ ಸಮಾಜಕ್ಕೆ ಆಗುವ ಲಾಭವಾದರೂ ಏನು ಎಂದು ಪಂಚಾಚಾರ್ಯರು ತಿಳಿಸಲಿ. ಎಂದು ವಿಶ್ವಗುರು ಬಸವೇಶ್ವರ ಟ್ರೆಸ್ಟ್‌ನ ಅಧ್ಯಕ್ಷರಾದ ಎಮ್. ಬಸವರಾಜಪ್ಪ ಗೌರವಾಧ್ಯಾಕ್ಷ ಪಂಪಾಪತಿ ಹೊನ್ನಳ್ಳಿ, ನೀಲಕಂಠಪ್ಪ ಎಮ್ ಎಸ್, ಬಸವಯ್ಯ ಸಸಿಮಠ, ಹನುಮೇಶ ಕಲ್ಮಂಗಿ, ನಿಂಗನಗೌಡ್ರು ಎಚ್ ಪಾಟೀಲ್.  
ಬಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಮಹೇಶ ಬೆಳವಣಿಕೆ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಪ್ಪ ಶೆಟ್ಟರ. ಬಸವೇಶ್ವರ ಯುವಕ ಸಂಘದ ರೇವಣ್ಣ ಬೂತಣ್ಣ ನವರ, ವಿಶ್ವನಾಥ ಮುದುಗಲ್, ರಾಜೇಶ್ ಸಸಿಮಠ, ಶಿವಕುಮಾರ ಕುಕನೂರ, ಗವಿಸಿದ್ದಪ್ಪ ಪಲ್ಲೇದ, ಬಸವರಾಜ ಸಜ್ಜನ ತಿಳಿಸಿದ್ದಾರೆ. 

Advertisement

0 comments:

Post a Comment

 
Top