PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,- ಅಂತರ್ಜಾಲ ವ್ಯವಸ್ಥೆಯಲ್ಲಿ ಆನ್‌ಲೈನ್ ಮಾರುಕಟ್ಟೆ ಮೂಲಕ ನ್ಯೂನ್ಯೆತೆಯುಳ್ಳ ಮೊಬೈಲ್ ಹ್ಯಾಂಡ್‌ಸೆಟ್‌ನ್ನು ಗ್ರಾಹಕರಿಗೆ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ,
ebay India Private Limited, ಎಂಬ ಕಂಪನಿಗೆ ವ್ಯಾಪಾರದ ಅನುಚಿತ ವರ್ತನೆ ಹಾಗೂ ಸೇವಾ ನ್ಯೂನತೆಯನ್ನು ಪರಿಗಣಿಸಿ, ಕಂಪನಿಯು ಮೊಬೈಲ್ ಮೊತ್ತ ಹಾಗೂ ಪರಿಹಾರವನ್ನು ನೀಡಬೇಕು ಎಂದು ಕೊಪ್ಪಳ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ. ಕೊಪ್ಪಳ ನಗರದ ನಿವಾಸಿ ಮಂಜುನಾಥ ಹೂಗಾರ ಎಂಬುವವರು ಆನ್‌ಲೈನ್‌ನಲ್ಲಿ ಜಾಹಿರಾತಿನಿಂದ ಆಕರ್ಷಿತರಾಗಿ.
ebay India Private Limited, Goregoan, (east) Mumbai. ಇವರಲ್ಲಿ ಬ್ರಾಂಡ್ ನ್ಯೂ ಸೋನಿ ಎಕ್ಸ್‌ಪೀರಿಯಾ ಝಡ್, ೧೬ಜಿಬಿ, ಬ್ಲ್ಯಾಕ್ ಕಲರ್ ಮೊಬೈಲ್ ಸೆಟ್‌ನ್ನು ೧೮,೯೯೦ ರೂ.ಗಳಿಗೆ ೨೦೧೪ ನವೆಂಬರ್ ೦೪ ರಂದು ಬುಕ್ ಮಾಡಿದ್ದರು. ಆದರೆ, ಇವರಿಗೆ ಮೊಬೈಲ್ ತಲುಪಿದಾಗ ಅದು ಹೊಸದಾಗಿರದೇ, ಉಪಯೋಗಿಸಿರುವುದಾಗಿದ್ದು, ಅದರಲ್ಲಿ ಕೆಲವೊಂದು ನ್ಯೂನ್ಯತೆಗಳು ಕಂಡು ಬಂದಿದ್ದವು. ಜಾಹಿರಾತಿನಲ್ಲಿ ತಿಳಿಸಿದಂತೆ ಮೊಬೈಲ್ ಫೋನಿನಲ್ಲಿ ೧೩ ಮೆಗಾಪಿಕ್ಸೆಲ್ ಕ್ಯಾಮರಾ ಇರದೇ, ಕಡಿಮೆ ಮೆಗಾಪಿಕ್ಸೆಲ್ ಕ್ಯಾಮರಾ ಇದ್ದು, ಫೋಟೋಗಳು ಸರಿಯಾಗಿ ಮೂಡುಬರುತ್ತಿರಲಿಲ್ಲ. ಅಲ್ಲದೇ ಹಲವು ರೀತಿಯ ನ್ಯೂನ್ಯತೆಗಳು ಮೊಬೈಲ್ ಫೋನ್‌ನಲ್ಲಿ ಕಂಡುಬಂದ ಕಾರಣ ಫಿರ್ಯಾದಿದಾರರು ಮೊಬೈಲ್ ಕಂಪನಿಗೆ ಇ-ಮೇಲ್ ಮುಖಾಂತರ ದೂರು ನೀಡಿದ್ದರು. ಇದಕ್ಕೆ ಕಂಪನಿಯು ಮರು ಉತ್ತರ ನೀಡಿ, ಸ್ವಲ್ಪ ದಿನಗಳವರೆಗೆ ಕಾಯುವಂತೆ ತಿಳಿಸಿತು. ಹಾಗೂ ಗ್ರಾಹಕರು ಮೊಬೈಲ್ ಸೆಟ್ ಹಿಂದಿರುಗಿಸಲು ಇಚ್ಛಿಸಿದಲ್ಲಿ,  ಪಾವತಿಸಿದ ಮೊತ್ತದಲ್ಲಿ ೧,೫೦೦ ರೂಗಳನ್ನು ಕಡಿತಗೊಳಿಸಿ ಹಣವನ್ನು ಹಿಂದಿರುಗಿಸಲಾಗುವುದು ಎಂದು ಕಂಪನಿಯು ತಿಳಿಸಿತು.  ಗ್ರಾಹಕ ಮಂಜುನಾಥ್, ಮೊಬೈಲ್ ಮಾರುಕಟ್ಟೆಗಾರರ ವಿವರ ಹಾಗೂ ವಿಳಾಸ ನೀಡುವಂತೆ ವಿನಂತಿಸಿದಾಗ ಕಂಪನಿಯು ಯಾವುದೇ ರೀತಿ ಪ್ರತಿಕ್ರಿಯೆ ನೀಡಲಿಲ್ಲ.  ಕೆಲವು ದಿನಗಳ ನಂತರ ಮಂಜುನಾಥ್, ತಮ್ಮ ವಕೀಲರ ಮೂಲಕ ಕಂಪನಿ ವಿರುದ್ಧ ನೋಟೀಸ್ ಜಾರಿಗೊಳಿಸಿದರೂ, ಯಾವುದೇ ಉತ್ತರ ಬರಲಿಲ್ಲ.  ತಮಗೆ ನ್ಯಾಯ ದೊರಕಿಸಬೇಕು, ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದಕ್ಕೆ ಹಾಗೂ ನ್ಯೂನ್ಯತೆ ಪರಿಹಾರವನ್ನು ಕಂಪನಿಯಿಂದ ಒದಗಿಸುವಂತೆ ಮಂಜುನಾಥ್ ಗ್ರಾಹಕರ ವೇದಿಕೆಯ ಮೊರೆ ಹೋದರು. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ. ಹಾಗೂ ಸದಸ್ಯರುಗಳಾದ ರವಿರಾಜ್ ಕುಲಕರ್ಣಿ, ಸುಜಾತ ಅಕ್ಕಸಾಲಿ ಅವರು, ಕಂಪನಿಗೆ ಸಮನ್ಸ್ ಜಾರಿಗೊಳಿಸಿದರೂ, ಕಂಪನಿಯ ಯಾರೂ ವೇದಿಕೆಗೆ ಹಾಜರಾಗದಿದ್ದರಿಂದ, ಗ್ರಾಹಕರ ವೇದಿಕೆಯು ಏಕಪಕ್ಷೀಯ ಪ್ರಕರಣವೆಂದು ಪರಿಗಣಿಸಿತು.  ಕಂಪನಿಯು ಫಿರ್ಯಾದುದಾರರಿಗೆ ದೋಷಪೂರಿತ ಮೊಬೈಲ್ ಸೆಟ್‌ನ್ನು ಪೂರೈಸಿ ವ್ಯಾಪಾರದ ಅನುಚಿತ ವರ್ತನೆ ಹಾಗೂ ಸೇವಾ ನ್ಯೂನ್ಯತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿತು. ಗ್ರಾಹಕ ಮಂಜುನಾಥ ಹೂಗಾರ ಇವರಿಗೆ ಮೊಬೈಲ್‌ನ ಮೊತ್ತ ೧೮,೯೯೦ ರೂ.ಗಳಲ್ಲಿ ನಿಯಮದಂತೆ ೧,೫೦೦ ರೂ.ಗಳನ್ನು ಕಡಿತಗೊಳಿಸಿ, ಬಾಕಿ ೧೭,೪೯೦ ರೂ. ಮತ್ತು ೫,೦೦೦ ರೂ.ಗಳನ್ನು ವ್ಯಾಪಾರದ ಅನುಚಿತ ವರ್ತನೆ ಹಾಗೂ ಸೇವಾ ನ್ಯೂನ್ಯತೆಗೆ ಪರಿಹಾರ.  ಅಲ್ಲದೆ ಪ್ರಕರಣದ ಖರ್ಚು ೨,೦೦೦ ರೂ.ಗಳನ್ನು ಆದೇಶದ ಪ್ರತಿ ತಲುಪಿದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಕೊಪ್ಪಳದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.

Advertisement

0 comments:

Post a Comment

 
Top