ಶಿಕ್ಷಣದ ವ್ಯಾಪಾರೀಕರಣ, ಕೇಂದ್ರಿಕರಣ, ಕೇಸರೀಕರಣ ಹಾಗೂ ಕೇಂದ್ರ ರಾಜ್ಯ ಸರಕಾರಗಳ ಶಿಕ್ಷಣ ನೀತಿ ವಿರೋಧಿಸಿ ಎಸ್.ಎಫ್.ಐ ನಿಂದ ಸೆಪ್ಟಂಬರ್ ೨, ೨೦೧೫ ರಂದು ರಾಷ್ಟ್ರವ್ಯಾಪಿ ಶೈಕ್ಷಣಿಕ ಬಂದ್ ಗೆ ಕರೆ ನೀಡಲಾಗಿದೆ ಎಂದು ಎಸ್.ಎಫ್.ಐ ರಾಜ್ಯಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದರು. ನಗರದಲ್ಲಿಂದು ಎಸ್,ಎಫ್.ಐ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಮುಂದುವರೆದು, ಸ್ವಾತಂತ್ರ್ಯ ಬಂದು ೬೭ ವರ್ಷ ಕಳೆದರೂ ಶಿಕ್ಷಣ ಎಲ್ಲರ ಹಕ್ಕಿಗಾಗಿರದೆ ಕೇವಲ ಹಣವುಳ್ಳವರ ಹಕ್ಕಾಗಿದೆ. ಅಭಿವೃದ್ದಿಯ ಹೆಸರನಲ್ಲಿ ರಾಜಕೀಯ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳಿಂದಾಗಿ ಅಸಂಖ್ಯಾತ ವಿದ್ಯಾರ್ಥಿ ಸಮುದಾಯ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕುಟುಂಬ-ಸಮಾಜ-ದೇಶಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕಿದ್ದ ವಿದ್ಯಾರ್ಥಿ ಸಮುದಾ
ಯವು ಸರ್ಕಾರಗಳ ವ್ಯಾಪಾರೀಕರಣ-ಕೇಸರಿಕರಣಗಳ ಮುಖವಾಡಕ್ಕೆ ಬಲಿಯಾಗಿ ದೇಶ ಸೇವೆಗಿಂತ ವೈಯಕ್ತಿತಿಕ ಬದುಕಿನಡೆಗೆ ನಡೆಯುವಂತೆ ಮಾಡುತ್ತಿದೆ. ರಾಜ್ಯ ಸರಕಾರದ ಭಾಗ್ಯಗಳಿಲ್ಲದ ಹಾಗೂ ಕೇಂದ್ರ ಸರಕಾರದ ಒಳ್ಳೆಯ ದಿನಗಳ ಯೋಜನೆ ಇಲ್ಲದ ಪರೀಣಾಮ ವಿದ್ಯಾರ್ಥಿ ಸಮುದಾಯ ಬೀದಿಪಾಲಾಗುತ್ತಿದೆ ಎಂದರು. ಜಿಲ್ಲಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ ಸರಕಾರಿ ಶಾಲಾ, ಕಾಲೇಜುಗಳಲ್ಲಿ ಮೂಲಸೌಲಭ್ಯ ಮತ್ತು ಬೋಧಕರಿಲ್ಲದ ಪರಿಣಾಮ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಕವಾಗಿ ಹಣವನ್ನು ಲೂಟಿ ಮಾಡುತ್ತಿವೆ. ಹಾಸ್ಟೆಲ್ ವಿದ್ಯಾರ್ಥಿಗಳು ಗುಣ ಮಟ್ಟದ ಊಟ, ಪಠ್ಯಪುಸ್ತಕಗಳು ಸಿಗದೆ ಪರದಾಡುತ್ತಿದ್ದಾರೆ. ಸಧ್ಯ ಅವರಿಗೆ ೧೨೦೦ರೂ ಆಹಾರ ಭತ್ಯೆ ನೀಡುತ್ತಿದ್ದು ಅದನ್ನು ೩೫೦೦ ರೂ ಗೆ ಹೆಚ್ಚಿಸಲು ಇದೇ ವೇಳೆ ಒತ್ತಾಯಿಸಲಾಗುವುದೆಂದರು. ಜಿಲ್ಲಾಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಅಮರೇಶ್ ಕುರಿ, ಉಮೇಶ್ ರಾಠೋಡ್, ರವಿ, ನೀಲಪ್ಪ, ಕೃಷ್ಣ, ಸಂತೋ ಸೇರಿದಂತೆ ಅನೇಕರಿದ್ದರು.
Home
»
Koppal News
»
koppal organisations
»
news
» ಶಿಕ್ಷಣದ ವ್ಯಾಪಾರೀಕರಣ, ಕೇಂದ್ರಿಕರಣ, ವಿರೋಧಿಸಿ ಸೆಪ್ಟಂಬರ್ ೨ ರಂದು ಎಸ್.ಎಫ್.ಐ ನಿಂದ ಶೈಕ್ಷಣಿಕ ಬಂದ್.
Subscribe to:
Post Comments (Atom)
0 comments:
Post a Comment