PLEASE LOGIN TO KANNADANET.COM FOR REGULAR NEWS-UPDATES

 ನಗರದ ಲಯನ್ಸ್ ಕ್ಲಬ್ ಬುದ್ದಿಮಾಂದ್ಯ ಶಾಲೆಯ ಮಕ್ಕಳಿಗೆ ಪುಸ್ತಕ, ಆಟಿಕೆಗಳು ಸಿಹಿಯನ್ನು ಹಂಚುವುದರ ಮೂಲಕ ಎಸ್.ಕೆ.ಎನ್.ಜಿ. ಕಾಲೇಜ್‌ನ ವಿದ್ಯಾರ್ಥಿಗಳ ಸ್ನೇಹಬಳಗ ಹೊಸ ವರ್ಷದ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮು.ಗು. ವಿಜಯಲಕ್ಷ್ಮೀ ಕಲಾಲ್ ಮಾತನಾಡಿ ಈ ತರಹದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರು ಶ್ರಮಿಸ ಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಭಾರದ್ವಾಜ್ ಮಾತನಾಡಿ ಸರ್ಕಾರ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡು ಅಂತಹ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಕಾರ್ಯಕ್ರಮದ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು, ಎಸ್.ಕೆ.ಎನ್.ಜಿ. ಕಾಲೇಜ್‌ನ ಪ್ರಾಚಾರ್ಯರಾದ ಹಸನ್‌ಮಿಯಾ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕ ಕಳಕಳಿಯನ್ನು ರೂಢಿಸಿಕೊಂಡಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು, ಜೊತೆಗೆ ಸಹ ಪ್ರಾಧ್ಯಾಪಕರಾದ ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿ ವಿದ್ಯಾರ್ಥಿಗಳ ಈ ಕಾರ್ಯವನ್ನು ಮೆಚ್ಚಿಕೊಂಡರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಇರ್ಫಾನಾ ಉಪನ್ಯಾಸಕರು, ಜೆ. ಶಾಂತಕುಮಾರಿ ಪ್ರಗತಿಪರ ಮಹಿಳಾ ಸಂಘ, ಬಸನಗೌಡ ಸುಳೇಕಲ್, ಕೆ. ಚಂದ್ರಶೇಖರ್ ಐಸಾ ಉಪಸ್ಥಿತರಿದ್ದರು, ಮೇಘನಾ ಪರಗಿ, ಸುನಿಲ್‌ಕುಮಾರ್, ಲಕ್ಷ್ಮೀಪತಿ, ಭಾರ್ಗವ, ಮಾರುತ್ಪಿ ಹೂಗಾರ, ಶರಣಪ ಮತ್ತಿತರ ಸ್ನೆಹ ಬಳಗದ ಗೆಳಯರಿದ್ದರು.
ಶ್ರೀದೇವಿ ತಟ್ಟಿ ಸ್ವಾಗತಿಸಿ, ಶ್ರೀಮತಿ ವಾಣಿಶ್ರೀ ಸಂಜೀವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ವಿ.ವಿ.ಹಿರೇಮಠ ನಿರೂಪಿಸಿದರು.

Advertisement

0 comments:

Post a Comment

 
Top