PLEASE LOGIN TO KANNADANET.COM FOR REGULAR NEWS-UPDATES


 ದಿನಾಂಕ : ೧೮-೦೧-೨೦೧೪ರಂದು ಜರುಗುವ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಮಹಾ ದಾಸೋಹ ಮಂಟಪವನ್ನು ಭವ್ಯವಾಗಿ ಸಿದ್ಧಗೊಳಿಸಲಾಗುತ್ತಿದೆ. ಗಂಜ್ ಸರ್ಕಲ್‌ದಿಂದ ಶ್ರೀ ಗವಿಮಠದ ವರೆಗೂ ರಸ್ತೆಯನ್ನು ಸ್ವಚ್ಛಗೊಳಿಸಿ ಸುಧಾರಣೆಯನ್ನು ಕೈಗೊಳ್ಳಲಾಗಿದೆ. ಈ ವರ್ಷದ ಜಾತ್ರೆಗೆ ಬರುವ ಅಂಗಡಿ ಮುಂಗಟ್ಟುಗಳಿಗೆ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯದ ಮುಂಬಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಾಗಯೇ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಮೈದಾನವನ್ನು ಈಗಾಗಲೇ ಸಂಪೂರ್ಣವಾಗಿ ಸಿದ್ಧಗೊಳಿಸಲಾಗಿದೆ. 

ದವಸ ಧಾನ್ಯಗಳ ಕಾಣಿಕೆ

ಸಂಸ್ಥಾನ ಶ್ರೀ ಗವಿಮಠದ ಜಾತ್ರೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ದಿನಾಂಕ : ೧೮-೦೧-೨೦೧೪ರ ಶನಿವಾರದಂದು ಜರುಗುವ ಮಹಾ ರಥೋತ್ಸವದಿಂದ ಪ್ರಾರಂಭವಾಗುವ ದಾಸೋಹ ಕಾರ್ಯಕ್ಕೆ ಜಿಲ್ಲೆಯ ಬೇರೆ-ಬೇರೆ ಗ್ರಾಮಗಳಿಂದ ಭಕ್ತರು ಗವಿಮಠಕ್ಕೆ ದವಸ-ಧಾನ್ಯಗಳನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ.

ಗಂಗಾವತಿ ತಾಲೂಕಿನ ಜೀರಾಳ ಕಲ್ಗೂಡಿ ಗ್ರಾಮದ ಭಕ್ತಾಧಿಗಳು ಇಂದು ೬೧ ಚೀಲ ಭತ್ತವನ್ನು ಮಹಾ ದಾಸೋಹಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಕಾಣಿಕೆ ನೀಡಿದ ಗ್ರಾಮದ ಸದ್ಭಕ್ತರನ್ನು ಶ್ರೀಗಳು ಆಶೀರ್ವದಿಸಿದ್ದಾರೆ. 

ರೊಟ್ಟಿಯ ಕಾಣಿಕೆ

ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಮಹಾ ದಾಸೋಹಕ್ಕೆ ಈಗಿನಿಂದಲೇ ಕಾಣಿಕೆಗಳು ಹರಿದು ಬರುತ್ತಿವೆ. ಇಂದು ಕೂಡ ಶ್ರೀಮಠದ ಭಕ್ತನಾದ ಹಗರಿಬೋಮ್ಮನಹಳ್ಳಿ ತಾಲೂಕಿನ               ಹೊಳೆ ಮುತಗೂರು ಗ್ರಾಮದ ಶಂಕ್ರಪ್ಪ ಹೋಟಲ್ ಇವರು ೬೦೦ ರೊಟ್ಟಿಯನ್ನು ಮಹಾ ದಾಸೋಹಕ್ಕೆ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಶಂಕ್ರಪ್ಪ ಅವರ ಭಕ್ತಿ ಸೇವೆಗೆ ಶ್ರೀಗಳು ಆಶೀರ್ವದಿಸಿದ್ದಾರೆ.   

Advertisement

0 comments:

Post a Comment

 
Top