PLEASE LOGIN TO KANNADANET.COM FOR REGULAR NEWS-UPDATES

 

ಕೇಂದ್ರ ಸರಕಾರವು ಮತ್ತೊಮ್ಮೆ ಅಡುಗೆ ಅನಿಲ ಹಾಗೂ ಆಟೋಗಳಿಗೆ ವಿತರಿಸುವ ಅನಿಲ ಬೆಲೆಯನ್ನು ಏರಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಈಗಾಗಲೇ ಹಲವು ಬಾರಿ ಅನಿಲಬೆಲೆ ಏರಿಸಿದ ಕೇಂದ್ರ ಸರಕಾರ ಈಗ ಮತ್ತೊಮ್ಮೆ ಬೆಲೆಗಳನ್ನು ಏರಿಸಿ ಬಡ ಹಾಗೂ ಮಧ್ಯಮ ವರ್ಗದವರ ಬದುಕನ್ನು ಬರ್ಬರವಾಗಿಸಿದೆ ಇದನ್ನು  ಉಗ್ರವಾಗಿ ಖಂಡಿಸಿ ಕೊಪ್ಪಳ ಜಿಲ್ಲಾ ಮಹಿಳಾ ಮೋರ್ಚ ಘಟಕದಿಂದ ಕೇಂದ್ರ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಗಾಗಿತ್ತು.
     ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಲತಾ ನಾಯಕ್ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಮಹಿಳಾ ಮೋರ್ಚಾದ ಬೃಹತ್ ಪ್ರತಿಭಟನೆಯು ಬಿಜೆಪಿ ಕಾರ್ಯಾಲಯದಿಂದ ಹೊರಟು ಅಶೋಕ ವೃತ್ತಕ್ಕೆ ಆಗಮಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೇಂದ್ರ ಸರಕಾರದ ಅಸಮರ್ಪಕ ಆರ್ಥಿಕ ನೀತಿ ಹಾಗೂ ನಿರಂತರವಾಗಿ ಏರಿಸಿದ ಡೀಜಲ್ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ದಿನನಿತ್ಯದ ವಸ್ತುಗಳ ಬೆಲೆಗಳು ಏರಿಕೆಯಾಗಿದ್ದು ಈಗ ಮತ್ತೊಮ್ಮೆ ಅನಿಲಬೆಲೆ ಏರಿಸಿ ಕೇಂದ್ರ ಸರಕಾರ ಮಧ್ಯಮ ವರ್ಗದವರ ಮೇಲೆ ಮತ್ತೊಮ್ಮೆ ಗದಾ ಪ್ರಹಾರ ಮಾಡಿದೆ. ಬೆಲೆ ಏರಿಸಿಸುವುದನ್ನೆ ಚಾಳಿ ಮಾಡಿಕೊಂಡಿರುವ ಕೇಂದ್ರ ಸರಕಾರ ಬಡ,ಮಧ್ಯಮ ವರ್ಗದ ಜೀವನವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೇಂದ್ರ ಸರಕಾರದ ಈ ಕ್ರಮದಿಂದ ಸಾಮಾನ್ಯ ಜನರು ಜೀವನ ನಡೆಸುವುದೇ ದುರ್ಬಲವಾಗಿದೆ. ಈ ಹಿಂದೆ ಸಬ್ಸಿಡಿ ಸಿಲೆಂಡರ್‌ಗಳನ್ನು ೯ಕ್ಕೆ ಸೀಮಿತಗೊಳಿಸಿದ ಕಾರಣದಿಂದ ಮಧ್ಯಮ ವರ್ಗದ ಕುಟುಂಬದ ಜೀವನ ನಿರ್ವಹಣೆ ದುಸ್ತರವಾಗಿದ್ದು. ಇದಲ್ಲದೇ ಸಿಲೆಂಡರ್‌ಗಳ ಸಂಪರ್ಕ ಪಡೆಯುವುದು ಹೆಚ್ಚುವರಿ ಸಿಲೆಂಡರ್‌ಗಾಗಿ ಪರದಾಡುವುದು ಸಾಮಾನ್ಯ ಸಂಗತಿಯಾಗಿತ್ತು ಆದರೆ ಇದಾವುದನ್ನು ತಲೆಕೆಡಸಿಕೊಳ್ಳದ ಕೇಂದ್ರ ಸರಕಾರ ಸಿಲೆಂಡರ್ ಬೆಲೆ ಏರಿಕೆಗೆ ಪ್ರಕ್ರಿಯೆಯನ್ನು ಮಾತ್ರ ನಿರಂತರ ಮಾಡುತ್ತಿರುವುದು ಖಂಡನೀಯವೆಂದು  ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.
   ದೇಶದಲ್ಲಿ ಅನೇಕ ಬಡ ಕುಟುಂಬಗಳು ಆಟೋಗಳನ್ನು ಓಡಿಸಿ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿವೆ. ಪ್ರಸ್ತುತ ಕೇಂದ್ರ ಸರಕಾರ ಈ ಆಟೋಗಳಿಗೆ ಬಳಸುವ ಅನಿಲ ಬೆಲೆಯನ್ನು ಏರಿಸಿದ್ದರಿಂದ   ಆಟೋರಿಕ್ಷಾ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ ಈಗಾಗಲೇ ಆಟೋಗಳ ಮೂಲಬೆಲೆ ಬಿಡಿಭಾಗಗಳ ಬೆಲೆಗಳಿಂದ ತತ್ತರಿಸಿಹೋಗಿದ್ದು ಈಗ ಅನಿಲಬೆಲೆ ಏರಿಕೆ ಮಾಡಿರುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಏರಿಸಿರುವ ಅನಿಲ ಬೆಲೆಯನ್ನು ಇಳಸಬೇಕೆಂದು ಒತ್ತಾಯಿಸಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸಾಮಾನ್ಯ ಜನರ ಸಂಕಷ್ಟದ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಪತ್ರವನ್ನು ಅರ್ಪಿಸಿ ಕೇಂದ್ರ ಸರಕಾರ ಅನಿಲಬೆಲೆ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಮಹಿಳಾವು ಘಟಕವು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.
   ಇಂದು ನಡೆದ ಪ್ರತಿಭಟನೆಯ ನೇತೃತ್ವವನ್ನು   ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಹೇಮಲತಾ ನಾಯಕ ವಹಿಸಿದ್ದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುರಾ ಕರುಣಂ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಾಮಲಾ ಕೋನಾಪುರ್,  ವಾಣೀಶ್ರೀ ಮಠದ, ಹೇಮಕ್ಕ ಮಂಗಳೂರ, ವಿಜಯಲಕ್ಷ್ಮೀ ಜಾಲಗಾರ, ಮಲ್ಲಮ್ಮ ಕನಕಗಿರಿ, ಭುವನೇಶ್ವರಿ, ಹುಲಿಗೆಮ್ಮ ಗಂಗಾವತಿ, ನಗರಸಭೆ ಸದಸ್ಯರಾದ ಸುವರ್ಣ ನಿರಲಗಿ, ನಿರ್ಮಲ ಕಾರಟಗಿ, ಸರೋಜಾ ಬಾಕಳೆ, ಬಸಮ್ಮ ಪಲ್ಲೇದ, ಯಂಕಮ್ಮ ಮಂಗಳೂರ, ಲಕ್ಷ್ಮಕ್ಕ ಕಲ್ಲಾರಿ, ನಾಗಮ್ಮ ಕುದರಿಮೋತಿ, ಶರಣಮ್ಮ ಪಾಟೀಲ್, ಶೋಭಾ ಹುಬ್ಬಳ್ಳಿ, ಶಾರದಾ ಹುಳೇನೂರು, ಲಕ್ಷ್ಮೀ ಕಾರಟಗಿ, ಶಂಕರಮ್ಮ ಹಾಲಳ್ಳಿ, ದೀಪಾ ಕಲ್ಲಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಗಣ್ಣ ಕರಡಿ, ಸಂಸದ ಕೆ.ಶಿವರಾಮೇಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಜಿಲ್ಲಾ ಬಿಜೆಪಿ ಉಸ್ತುವರಿ ಅನ್ವರ ಪಾನ್ಪಡೆ, ಮನೋಹರ ಹೇರೂರ್, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಿರೇಮಠ, ಚಾಲಕರ ಸಂಘದ ಅಧ್ಯಕ್ಷ ಗುರುರಾಜ್ ನಾಯಕ,  ಚಂದ್ರಶೇಖರ ಕವಲೂರ, ಅಪ್ಪಣ್ಣ ಪದಕಿ, ಡಾ|| ಕೊಟ್ರೇಶ್ ಶೇಡ್ಮಿ, ಶಂಕರಪ್ಪ ಪಲೂಟಗಿ, ನರಸಿಂಗರಾವ್ ಕುಲಕರ್ಣಿ, ರಾಜು ಬಾಕಳೆ, ಪೀರಾ ಹುಸೇನ್ ಹೊಸಳ್ಳಿ, ಅಬ್ದುಲ್ ರಶೀದ್‌ಸಾಬ್ ಮಿಠಾಯಿ, ಮಾರುತಿ ಕಾರಟಗಿ, ಬಸವರಾಜ ನಿರಲಗಿ,ಬಸವರಾಜ್ ಉಳ್ಳಾಗಡ್ಡಿ,  ಮಂಜುನಾಥ ಪಾಟೀಲ್, ಚಂದ್ರಶೇಖರ್ ಮುಸಾಲಿ, ಶರಭಯ್ಯ ಹಿರೇಮಠ, ಚನ್ನಪ್ಪ ಬೆಲ್ಲದ, ಶರಣು ಕುರ್ನಾಳ, ಮಹೇಂದ್ರ ಕುರುಡಗಿ, ಉಮೇಶ ಕೊಪ್ಪಳ, ಆದಪ್ಪ ಮೇಟಿ, ಪ್ರಾಣೇಶ ಮಹೆಂದ್ರಕರ್,ಸಲಿಮ್‌ಸಾಬ್, ಗವಿಸಿದ್ದಪ್ಪ ಚಿನ್ನೂರ, ಮಲ್ಲಪ್ಪ ಬೆಲೇರಿ, ಮಾರೇಶ ಮುಷ್ಟೂರ್, ಮಾರುತ್ತೆಪ್ಪ ಹಲಗೇರಿ ಗಿಣಿಗೇರಾ, ಮಹದೇವಪ್ಪ ಜವಳಿ, ಉಮೇಶ ಕರುಡೇಕರ್, ನಾಗರಾಜ್ ಚಿತ್ರಗಾರ, ತೋಟಪ್ಪ ಕಾಮನೂರ, ಪರಮಾನಂದ ಯಾಳಗಿ, ನಾಗರಾಜ ಚಲವಾದಿ, ಸೋಮಶೇಖರ ಪಲ್ಲೇದ, ದೇವರಾಜ ಹಾಲಸಮುದ್ರ, ಅಂಬರೀಶ ಹಲವಾಗಲಿ, ದೇವಪ್ಪ ಗುಡ್ಲಾನೂರ, ಸಿದ್ದಣ್ಣ ವಾರದ, ಶಿವಪ್ಪ ಗುಡ್ಲಾನೂರ ಜಿಲ್ಲಾ ಬಿಜೆಪಿ ವಕ್ತಾರ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ. ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು   

Advertisement

0 comments:

Post a Comment

 
Top