PLEASE LOGIN TO KANNADANET.COM FOR REGULAR NEWS-UPDATES

  ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಬಿರುಸಿನ ಕಾರ್ಯಚಟುವಟಿಕೆಗಳು ಸಾಗುತ್ತಿವೆ. ಮಹಾರಥೋತ್ಸವ ಸಾಗಲಿಕ್ಕಾಗಿ ಮೈದಾನದ ಆವರಣ, ಶ್ರೀಗವಿಮಠದ ಹೊರ-ಒಳಾಂಗಣ ಶೃಂಗಾರಗೊಳ್ಳುತ್ತಲಿವೆ.  ಹಾಗೇ ಪ್ರಮುಖ ರಸ್ತೆಗಳು ದುರಸ್ತಿಗೊಳ್ಳುತ್ತಿವೆ.  ಒಟ್ಟು ಜಾತ್ರೆಗೆ ಕೊಪ್ಪಳವೇ ಶೃಂಗಾರಗೊಳ್ಳುತ್ತಿದೆ. ಪ್ರತಿ ವರ್ಷದಿಂದ ವರ್ಷಕ್ಕೆ ಶ್ರೀಗವಿಮಠದ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವದರಿಂದ ಭಕ್ತರಿಗೆ  ಯಾವುದೇ ಅಡೆತಡೆಗಳು, ಇಕ್ಕಟ್ಟು ಉಂಟಾಗಬಾರದೆಂದು ಈ ಸಾರೇ ಶ್ರೀ ಗವಿಮಠದ ಮುಂಭಾಗದಲ್ಲಿನ ಮೈದಾನದಲ್ಲಿ ಯಾವುದೇ ಅಂಗಡಿ-ಮುಂಗಟ್ಟುಗಳಿಗೆ ಅವಕಾಶ ನೀಡಿಲ್ಲ. ಇದರ ಬದಲಾಗಿ ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದನಿಲಯದ ಮುಂಭಾಗದ ವಿಶಾಲವಾದ ಆವರಣ ( ಎ.ಪಿ.ಎಂ.ಸಿ ಅಂಗಡಿಗಳ ಹಿಂದಿನ ಗೋಡೆಯ ಆವರಣ) ದಲ್ಲಿ ಅಂಗಡಿ ಮುಂಗಟ್ಟುಗಳಿಗೆ ಅವಕಾಶವನ್ನು ಪೂಜ್ಯ ಶ್ರೀಗಳು ಕಲ್ಪಿಸಿದ್ದಾರೆ . ಈಗಾಗಲೇ  ಆ ಹೊಸ ಆವರಣದಲ್ಲಿ ಅಂಗಡಿಗಳು ಬೀಡುಬಿಟ್ಟಿವೆ. ಮಕ್ಕಳ ಮನರಂಜನೆಯ  ಜೋಕಾಲಿ, ತೊಟ್ಟಿಲು, ಸಾಹಸ ಪ್ರದರ್ಶನ ಮಾಡುವ ಮೇಳಗಳು, ಮ್ಯಾಜಿಕ್ ಸೆಂಟರ್‌ಗಳು ಹಾಗೂ ಇತರೇ ಅಂಡಿಗಳು ಸಿದ್ಧತೆಗಳಲ್ಲಿ ತೊಡಗಿವೆ. ಇನ್ನೆರಡೂ- ಮೂರ‍್ನಾಲ್ಕು ದಿನಗಳಲ್ಲಿ ಪರಿಪೂರ್ಣವಾಗಿ ಅಂಗಡಿ ಮುಂಗಟ್ಟುಗಳು ಬಿಡಾರ ಹೂಡುತ್ತವೆ.   
ಕೊಪ್ಪಳ : ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಜರುಗುವ ಮಹಾದಾಸೋಹಕ್ಕಾಗಿ ಶ್ರೀಗವಿಮಠಕ್ಕೆ  ಭಕ್ತರಿಂದ ದವಸಧಾನ್ಯ ಹಾಗೂ ರೊಟ್ಟಿಯ ಕಾಣಿಕೆಗಳು ಅರ್ಪಿತವಾಗಿವೆ. ಇಂದು ಹಿಟ್ನಾಳ್ ಗ್ರಾಮದ ಭಕ್ತರಿಂದ ೫೦ ಚೀಲ ಭತ್ತ ಹಾಗೂ ೩೦೦ ರೊಟ್ಟಿ ಶ್ರೀಗವಿಮಠದ ಮಹಾದಾಸೋಹಕ್ಕೆ ಸಮರ್ಪಿತವಾದವು. ದಾನಿಗಳಿಗೆ ಪೂಜ್ಯ ಶ್ರೀಗವಿಸಿದ್ಧೇಶ್ವರ ಶ್ರೀಗಳು ಆಶಿರ್ವದಿಸಿದ್ದಾರೆ.

Advertisement

0 comments:

Post a Comment

 
Top