PLEASE LOGIN TO KANNADANET.COM FOR REGULAR NEWS-UPDATES

  ಶ್ರೀ ಗವಿಸಿದ್ದೇಶ್ವರ ಕಲಾ,ವಿಜ್ಞಾನ,ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದಂತಹ ಹಳೆಯ ವಿದ್ಯಾರ್ಥಿಗಳ ಸಂಘ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡುವ ಉದ್ಧೇಶದಿಂದ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವ ದಿನದಿಂದ ಹಿಡಿದು ಅಮವಾಸ್ಯೆಯ ದಿನದವರೆಗೆ  ಶ್ರೀಗವಿಸಿದ್ದೇಶ್ವರ ಟ್ರಸ್ಟ ಆಫೀಸ್ ಎದುರುಗಡೆ ಇರುವ ಬನ್ನಿಗಿಡದ ಕೆಳಗಡೆ  ಹಿಂದೆ ಅಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯತ್ವ ಪಡೆಯುವ ಸಲುವಾಗಿ  ಕೌಂಟರನ್ನು  ಸ್ಥಾಪಿಸಲಾಗುತ್ತದೆ. ಕಾರಣ ಜಾತ್ರೆಗೆ ಆಗಮಿಸುವ ಎಲ್ಲ ಹಳೆಯ  ವಿದ್ಯಾರ್ಥಿಗಳು  ಈ   ಸದಸ್ಯತ್ವ ಪಡೆಯಬೇಕೆಂದು ಅಧ್ಯಕ್ಷರಾದ  ಚಂದ್ರಶೇಖರ ಗೌಡ ಹಲಗೇರಿ ಹಾಗೂ ಉಪಾಧ್ಯಕ್ಷರಾದ  ಉಮೇಶ ಚಕ್ಕಿ ಮನವಿಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೬೬೩೨೪೬೬೬೯, ೯೯೦೧೫೦೧೩೯೯ ಸಂಪರ್ಕಿಸಬಹುದು. 

Advertisement

0 comments:

Post a Comment

 
Top