ಕೊಪ್ಪಳ : ರಾಜ್ಯದಲ್ಲಿ ಕೈಮಗ್ಗ ನೇಕಾರರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಲು ಮತ್ತು ಅಳಿವಿನ ಅಂಚಿನಲ್ಲಿರುವ ಕೈಮಗ್ಗ ನೇಕಾರಿಕೆಯನ್ನು ಉಳಿಸಿಕೊಳ್ಳಲು ಹೆಗ್ಗೋಡಿನ ಚರಕ ಸಂಸ್ಥೆಯ ಸಂಸ್ಥಾಪಕರು ಮತ್ತು ಪ್ರಸಿದ್ಧ ರಂಗಕರ್ಮಿಗಳಾದ ಪ್ರಸನ್ನ ಅವರು ಇದೇ ಜನವರಿ ೧೫ ರಂದು ಗಜೇಂದ್ರಗಡದಿಂದ ಪಾದಯಾತ್ರೆ ಪ್ರಾರಂಭಿಸಿ ಜಿಲ್ಲೆಯ ಹನುಮಸಾಗರ ಮತ್ತು ಗುಡೂರು, ಕಮತಗಿ, ಅಮೀನಗಡಾ, ಸೂಳೆಭಾವಿ ಮೂಲಕ ನಡೆಸುವರಲ್ಲದೆ. ಆಮರಣ ಉಪವಾಸ ನಡೆಸಲಿದ್ದಾರೆ.
ಈ ಕುರಿತಂತೆ ಜಿಲ್ಲೆಯ ನೇಕಾರರನ್ನು ಸಂಘಟಿಸಿ ಜಾಥಾಕ್ಕೆ ಆಗಮಿಸಲು ಸಿದ್ಧತೆ ಮಾಡಲು ಇಂದು ಜ. ೮ ರಂದು ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕರಾದ ಎಸ್. ಸಿ. ದೇವರ ಮನೆಯವರು ಭಾಗ್ಯನಗರಕ್ಕೆ ಭೇಟಿನೀಡಿ ನೇಕಾರರ ಮುಖಂಡರಾದ ವಿಠ್ಠಪ್ಪ ಗೊರಂಟ್ಲಿ ಮತ್ತು ಈಗಾಗಲೇ ಸ್ವಯಂ ಸ್ಪೂರ್ತಿಯಿಂದ ಜಾಥಾಕ್ಕೆ ನೇಕಾರರ ಸಹಿ ಸಂಗ್ರಹಣೆಯಲ್ಲಿ ತೊಡಗಿರುವ ದೇವೇಂದ್ರಪ್ಪ ಹಿಟ್ನಾಳ ಇವರನ್ನು ಸಂಪರ್ಕಿಸಿ ೭೭೯೫೩೮೭೮೩,
ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಜಾಥಾದಲ್ಲಿ ಪಾಲ್ಗೊಳ್ಳಲು ವಿಠಪ್ಪ ಗೊರಂಟ್ಲಿ ಕರೆ ನೀಡಿದರು.
0 comments:
Post a Comment