ನಗರದ ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ನಡೆದ ೨೦೧೩-೧೪ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಕ್ರಮಬದ್ಧವಾದ ರಾಷ್ಟ್ರದ್ವಜಾರೋಹಣ ಮಾಡುವ ಬಗ್ಗೆ ತರಬೇತಿ ನೀಡಲಾಯಿತು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಅವರು ಶಿಬಿರಾರ್ಥಿಗಳಿಗೆ ರಾಷ್ಟ್ರದ್ವಜ ಕಟ್ಟುವ ಬಗ್ಗೆ ಮಾಹಿತಿಯನ್ನು ನೀಡುತ್ತಾ ಇದರ ಬಗ್ಗೆ ಕೆಲವೊಬ್ಬರಿಗೆ ಸರಿಯಾದ ತಿಳುವಳಿಕೆಯಿಲ್ಲದೆ ರಾಷ್ಟ್ರದ್ವಜ ತಲೆಕೆಳಗಾಗಿ, ಇಲ್ಲವೇ ಅರ್ಧಕ್ಕೆ ಆರೋಹಣ ಅಥವಾ ಗಂಟುಬೀಳುವ ಅವಗಡಗಳು ಸಂಭವಿಸಿ ರಾಷ್ಟ್ರದ್ವಜಕ್ಕೆ ಅಪಮಾನವಾಗುವ ಸಂಭವಗಳು ಹೆಚ್ಚು. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಇಂತಹ ತರಬೇತಿಗಳನ್ನು ಮೇಲಿಂದ ಮೇಲೆ ಏರ್ಪಡಿಸುವುದರಿಂದ ರಾಷ್ಟ್ರದ್ವಜ ಕಟ್ಟುವ ಕಲೆ ಕರಗತವಾಗುತ್ತದೆ. ಈ ನಿಟ್ಟಿನಲ್ಲಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರದ್ವಜ ಕಟ್ಟುವ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸುಮಾರು ೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.
0 comments:
Post a Comment