PLEASE LOGIN TO KANNADANET.COM FOR REGULAR NEWS-UPDATES

ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಪದಾಧಿಕಾರಿಗಳ ಆಯ್ಕೆ   ದಿನಾಂಕ ೦೮/೦೧/೨೦೧೪ ರಂದು ನಡೆದ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಅಧ್ಯಕ್ಷರು ಅಕ್ಬರ್‌ಅಲಿ ಉಡುಪಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಹುಸೇನ್ ಇವರ ಸಮ್ಮುಖದಲ್ಲಿ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಆದಿಲ್ ಪಟೇಲ್ ಮರು ನೇಮಕ ಮಾಡಲಾಯಿತು, ಜಿಲ್ಲಾ ಸಂಘಟನಾ ಪ್ರಧಾನಕಾರ್ಯದರ್ಶಿಯಾಗಿ ಮಹಮ್ಮದ್ ಅಲೀಮುದ್ದಿನ ಕೊಪ್ಪಳ, ಕಾರ್ಯದರ್ಶಿರಾಗಿ ಗೇಸುದರಾಸ್ ಹನಮಸಾಗರ, ಉಪಾಧ್ಯಕ್ಷರನ್ನಾಗಿ ಕೆ ಮೋಹನರಾವ್ ಕೊಪ್ಪಳ, ಮತ್ತು ಪ್ರಶಾಂತ ದೋಟಿಹಾಳ ಗಂಗಾವತಿ, ಆಯ್ಕೇಯಾಗಿದ್ದಾರೆ. ಜಿಲ್ಲಾ ಕಾರ್ಮಿಕ ಅಧ್ಯಕ್ಷರು ಶಬ್ಬೀರ್ ಗೊಳೆಕಾರ ಕೊಪ್ಪಳ, ಕೋಶಾಧ್ಯಕ್ಷರು ನಜೀರ್ ಮುದಗಲ್  ಕೊಪ್ಪಳ, ಕೊಪ್ಪಳ ತಾಲೂಕ ಘಟಕಧ್ಯಕ್ಷರು ರಾಮಪ್ಪ ಹನುಮಪ್ಪ ಬಿಸರಳ್ಳಿ ತಿಗರಿ, ಗಂಗಾವತಿ ತಾಲೂಕಾಧ್ಯಕ್ಷರು ಮಹಮ್ಮದ್ ಅತೀಕ ಆಲಮ್, ಕುಷ್ಟಗಿ ತಾಲೂಕ ಅಧ್ಯಕ್ಷರು ಸೈಯದ್ ಮಹೆಬೂಬಸಾಬ ಹಾಗೂ ಕೊಪ್ಪಳ ನಗರ ಯುವ ಘಟಕಧ್ಯಕ್ಷಕರು ಯೂಸುಫ್ ಮಾಳೆಕೋಪ್ಪ ಆಯ್ಕೇ

ಮಾಡಲಾಗಿದೆ.

Advertisement

0 comments:

Post a Comment

 
Top