ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆ ಕೊಪ್ಪಳ ಇದರ ೨೦೧೫-೧೬ ನೇ ಸಾಲಿನ ಶಾಲಾ ಸಂಸತ್ತ್ ಉದ್ಘಾಟನಾ ಕಾರ್ಯಕ್ರಮವುಅರ್ಥ ಪೂರ್ಣವಾಗಿ ಜರುಗಿತು. ಶಾಲಾ ಸಂಸತ್ತಿನ ಉದ್ಘಾಟಕರಾಗಿ ಆಗಮಿಸಿದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಪ್ರಕಾಶ ಕೆ ಬಡಿಗೇರ ರವರು ಸಂಸತ್ತಿನ ಪ್ರಾರಂಭ ಅದು ನಡೆದು ಬಂದ ದಾರಿ ತಿಳಿಸಿದರು, ಮಕ್ಕಳ ಭಾವಿ ಪ್ರಜೆಗಳಾಗುವರು ನಾಯಕತ್ವಗಳನ್ನು ಬಳಸಿಕೊಳ್ಳಬೇಕು ಮತ್ತು ಚೆನ್ನಾಗಿ ಅಭ್ಯಾಸಮಾಡಬೇಕೆಂದು ಹಿತ ನುಡಿದರು ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೇಲುಕು ಹಾಕಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಎನ್, ಎಚ್.ಪಾಟೀರು ವಿದ್ಯಾರ್ಥಿಗಳ ಒಳ್ಳೆಯ-ನಡೆ-ನುಡಿಗಳನ್ನು ಬೆಳೆಸಿಕೊಳ್ಳಬೇಕು, ಸತತ ಪರಿಶ್ರಮ ಪಡಬೇಕು ಅದರಿಂದ ಒಳ್ಳೆಯ ಪ್ರತಿಫಲ ಸಿಗುತ್ತದೆಂದು ಹಿತನುಡಿಗಳನ್ನು ಹೇಳುವುದರೊಂದಿಗೆ ಸಂಸತ್ತಿನ ಪಧಾದಿಕಾರಿಗಳೊಂದಿಗೆ ಪ್ರಮಾಣವಚನ ಬೋಧಿಸದರು,ಪ್ರಾರಂಭಿಕವಾಗಿ ಪ್ರಜಾ ಸರ್ಕಾರದ ರಚನೆ ಮತ್ತು ಸಂವಿಧಾನದ ಅಂಗಗಳು ಮತ್ತು ಶಾಲಾ ಸಂಸತ್ತಿನ ರಚನೆ ಕುರಿತು, ಶಾಲೆಯ ಶಿಕ್ಷಕರಾದ ಶ್ರೀ ಎಂ,ಎನ್, ಕಮ್ಮಾರ ಗುರುಗಳು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದರು, ಶಿಕ್ಷಕರಾದ ಶ್ರೀ ಎಮ್, ಎನ್,ಶೆಟ್ಟರ್ ವಂದಾನಾರ್ಪಣೆ ಮಾಡಿದರು ಅಚ್ಯಕಟ್ಟಾದ ನಿರೂಪಣೆಯನ್ನು ಶಿಕ್ಷಕೀಯರಾದ ಶ್ರೀಮತಿ ಬಸವರಾಜೇಶ್ವರಿ ಹಿರೇಮಠ ಇವರು ನೇರವೇರಿಸಿದರು.
Subscribe to:
Post Comments (Atom)
0 comments:
Post a Comment