PLEASE LOGIN TO KANNADANET.COM FOR REGULAR NEWS-UPDATES

ಕುಷ್ಟಗಿ ತಾಲೂಕು ಪುರ ಗ್ರಾಮದ ಕೆರೆಯ ಹಿಂಗಾರು ಹಂಗಾಮಿಗೆ ಬಲದಂಡೆ ಕಾಲುವೆಗೆ ನೀರು ಹರಿಸುವುದಕ್ಕಾಗಿ ದಿನಾಂಕ: ೧೪/೦೧/೨೦೧೧ ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಪುರ-ಕರಡೋಣಿ ರಸ್ತೆಯ ಮೇಲ್ಬಾಗದ ಜಮೀನುಗಳಿಗೆ ನೀರು ಸರಬರಾಜು ಅನುಕೂಲ ಮಾಡಿಕೊಟ್ಟಿರುತ್ತೀರಿ ಆದರೆ ಪುರ-ಕರಡೋಣಿ ರಸ್ತೆ ಕೆಳಭಾಗದ ಜಮೀನುಗಳಿಗೆ ಅಂದರೆ ಕರಡೋಣಿ, ಮಲ್ಲಾಪುರ, ಬುನ್ನಟ್ಟಿ, ಇಚನಾ, ಉದ್ಯಾಳ ಗ್ರಾಮದ ರೈತರ ಜಮೀನುಗಳಿಗೆ ಈ ಮೊದಲು ನೀರು ಸರಬರಾಜು ಮಾಡಿದ್ದು, ಆ ಸಂಧರ್ಭದಲ್ಲಿ ಬೀಜ ಬಿತ್ತನೆ ಮಾಡಿದ್ದು, ಬೆಳೆ ಚೆನ್ನಾಗಿ ಬೆಳೆಯುವ ಸಂದರ್ಭದಲ್ಲಿ ನೀರಿನ ಪೂರೈಕೆ ನಿಲ್ಲಿಸಿದ್ದರಿಂದ ಎಲ್ಲಾ ಬೆಳೆಗಳು ಒಣಗಿರುತ್ತವೆ. ಹೀಗಾಗಿ ರೈತರ ಜಮೀನುಗಳು ಸಾಕಷ್ಟು ಫಸಲು ಬರದೆ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಪುರದ ಕೆರೆಯ ನೀರು ಕೆಳಗಿನ ಗ್ರಾಮಗಳ ಭೂಮಿಯ ಬೆಳಗೆ ನೀರು ಕೊಡದ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷತೆಯನ್ನು ಖಂಡಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಎ.ಡಿ.ಸಿ, ಸಣ್ಣ ನೀರಾವರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಾಳೆ ದಿನಾಂಕ ೨೮/೦೭/೨೦೧೫ ರಂದು ಬೆಳಿಗ್ಗೆ ೦೭:೦೦ ಗಂಟೆಗೆ ಮೊದಲಿನ ಆದೇಶದಂತೆ ನೀರು ಹರಿಸಲು ಸ್ಥಳದಲ್ಲಿದ್ದ ಜೂನಿಯರ್ ಇಂಜಿನಿಯರ್ ಒಪ್ಪಿಕೊಂಡರು. ಆಕ್ರೋಶಗೊಂಡ ರೈತರು ಹದಿನೈದು ದಿನಗಳಿಂದ ಕೆಳ ಭಾಗಕ್ಕೆ  ನೀರು ಕೊಡದ ಕಾರಣ ಬೆಳಗಳು ಒಣಗಿ ಹೋಗಿವೆ. ಇದರ ನಷ್ಟವನ್ನು ಸರ್ಕಾರವೇ sರಿಸಬೇಕಾಗಿದೆ. ಒಂದು ವೇಳೆ ನಾಳೆ ನೀರು ಬರದಿದ್ದರೆ ಪುನ ಹೋರಾಟ ರೂಪಿಸುವುದಾಗಿ ರೈತರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತರನ್ನುದ್ದೇಶಿಸಿ  ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಕಾಂ|| ಡಿ.ಎಚ್.ಪೂಜಾರ್ ಮಾತನಾಡಿದರು, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷರಾದ ಮಂಜುನಾಥ.ಚಕ್ರಸಾಲಿ, ಬೆಳಗಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಕನಕಪ್ಪ.ಎಚ್.ಮಳಗಾವ, ವಿವಿಧ ಗ್ರಾಮಗಳ ರೈತ ಮುಖಂಡರುಗಳಾದ ಅಮಾಜೆಪ್ಪ,  ನಾಗಪ್ಪ.ಕುರುಬರ, ಅಮರಪ್ಪ.ಬುಡಕುಂಟಿ, ದೇವೇಂದ್ರಪ್ಪ ಪತ್ತಾರ, ಶರಣಪ್ಪ ಮೇರಿನಾಳ, ಹಾಗೂ ಯುವ ರೈತರುಗಳಾದ ಮಾರುತಿ.ನಾಯಕ, ವೀರಭದ್ರ.ಬುಡಕುಂಟಿ ಹಾಗೂ ಇತರೆ ರೈತರು ಭಾಗವಹಿಸಿದ್ದರು.

Advertisement

0 comments:

Post a Comment

 
Top