ಕೊಪ್ಪಳ:೨೭, ಕ್ಷೇತ್ರದ ಅಳವಂಡಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ರೈತರು ದೇಶದ ಬೆನ್ನೆಲಬು ಆಗಿದ್ದಾರೆ. ಇಡೀ ದೇಶಕ್ಕೆ ಅನ್ನಹಾಕುವ ತಾವುಗಳು ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಸಮಂಜಸವಲ್ಲಾ. ಪ್ರತಿಯೊಬ್ಬರಿಗೆ ಕಷ್ಟಗಳು ಬರುವುದು ಸಹಜ ರೈತರು ಆತ್ಮವಿಶ್ವಾಸದಿಂದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು. ಸರ್ಕಾರ ನಿಮ್ಮಜೋತೆಗಿದೆ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನಿಮ್ಮ ಸಮಸ್ಯೆಗಳಿಗೆ ತೀಕ್ಷಣವಾಗಿ ಸ್ಪಂಧನೆಮಾಡುತ್ತಿದ್ದಾರೆ. ತಾವುಗಳು ಸಾಲಕ್ಕೆ ಹೆದರದೆ ಆತ್ಮಹತ್ತೆಮಾಡಿಕೊಂಡರೆ ನಿಮ್ಮ ಕುಟುಂಬದ ನಿರ್ವಹಣೆ ಹಾಗೂ ಪರಿಸ್ಥಿತಿ ತೀರ್ವಹದೆಗೆಡುತ್ತದೆ. ಅದಕ್ಕಾಗಿ ನಾನು ಪ್ರತಿಯೊಬ್ಬ ರೈತರಿಗೆ ಮನವಿಮಾಡುತ್ತೇನೆ. ಯಾರೂಬ್ಬರೂ ಆತ್ಮಹತ್ತೆಗೆ ಪ್ರಯತ್ನ ಮಾಡಬಾರದು. ಕ್ಷೇತ್ರದ ಪ್ರತಿಯೊಬ್ಬ ರೈತನ ಸಮಸ್ಯೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೇನು ತಮಗೆ ಯಾರಾದರೂ ಸಾಲದ ಕೀರುಕುಳ ನೀಡಿದರೆ ನೇರವಾಗಿ ನಮ್ಮಲ್ಲಿ ಚರ್ಚಿಸಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವೇನು ಎಂದು ಬರವಸೆ ನೀಡಿದರು. ವರುಣನ ಅವಕೃಪೆಗೆ ಒಳಗಾಗಿರುವ ನಮ್ಮ ಕ್ಷೇತ್ರ ತೀರ್ವ ಬರಗಾಲ ಪರಿಸ್ಥಿತಿ ಬಂದಿದೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಅಳವಂಡಿ, ಕವಲೂರು ಭಾಗದ ರೈತರ ಬೆಳೆ ಹಾನಿಗೆ ಈಗಾಗಲೇ ರೂ.೮೩ ಲಕ್ಷ ಹಣವನ್ನು ಮಂಜೂರು ಮಾಡಿಸಿರುತ್ತೇನೆ. ಈ ಭಾಗದ ರೈತರ ಜಾನುವಾರುಗಳಿಗೆ ಶೀಘ್ರವೇ ಅಳವಂಡಿ ಹಾಗೂ ಹಿರೇಸಿಂದೋಗಿ ಗ್ರಾಮಗಳಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಪಕೀರಮ್ಮ ಜಂತ್ಲಿ, ಉಪಾಧ್ಯಕ್ಷರಾದ ಉಮಾ ಕರ್ಕಿಹಳ್ಳಿ, ಕೆ.ಎಮ್.ಎಫ್. ಅಧ್ಯಕ್ಷರಾದ ವೆಂಕನಗೌಡ್ರು ಹಿರೇಗೌಡ್ರು, ಕೆ.ಎಮ್.ಸಯ್ಯದ್, ತಾಲೂಕು ಪಂಚಾಯತ ಸದಸ್ಯರಾದ ಶ್ರೀಮತಿ ಮುದ್ದಮ್ಮ ಕರಡಿ, ಬಸವರೆಡ್ಡಪ್ಪ ಹಳ್ಳಿಕೇರಿ, ಹನುಮಂತಗೌಡ್ರು ಗಾಳಿ, ಕರಡಿ ರಂಗಪ್ಪ, ಹಟ್ಟಿ ಭರಮಪ್ಪ, ದೇವಪ್ಪ ಹಳ್ಳಿ, ಸಿದ್ದಪ್ಪ ಕವಲೂರು, ಗ್ರಾ.ಪಂ ಸದಸ್ಯರುಗಳಾದ ಶಿದ್ದಲಿಂಗಯ್ಯ ಹಿರೇಮಠ, ಗುರುಬಸವರಾಜ ಹಳ್ಳಿಕೇರಿ, ಪರಶುರಾಮ ಭೈರಾಪುರ, ಸುರೇಶ ದಾಸರೆಡ್ಡಿ, ಶಿವಾನಂದ ಹೂದ್ಲೂರು, ಇನ್ನೂ ಅನೇಕ ಗ್ರಾಮದ ಗುರುಹಿರಿಯರು ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಇಲಾಖೆಗಳ ಅಧಿಕಾರಿಗಳು ಅಭಿಯಂತರರು, ಹಾಗೂ ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.
Home
»
Koppal News
»
koppal organisations
»
news
» ರೈತರ ಸಮಸ್ಯೆಗೆ ಸಾವು ಪರಿಹಾರವಲ್ಲಾ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.
Subscribe to:
Post Comments (Atom)
0 comments:
Post a Comment