PLEASE LOGIN TO KANNADANET.COM FOR REGULAR NEWS-UPDATES

ಪ್ರತಿಭೆಗಳು ಅರಳುವುದೇ ಗುಡಿಸಿಲಿನಲ್ಲಿ ಎನ್ನುವ ಮಾತಿದೆ. ಇದು ಯಾವತ್ತೂ ಸತ್ಯ. ಬಡತನದಲ್ಲಿಯೇ ಪ್ರತಿಭೆಗಳು ಅರಳುತ್ತವೆಇದಕ್ಕೊಂದು ಉದಾಹರಣೆ ಈ ಮಗಳು. ಅಪ್ಪ ಟೇಲರ್  , ಬಾಡಿಗೆ ಮನೆ, ಶಾಲೆಯ ಪೀಸ್ ಕಟ್ಟಲಾಗದ ಪರಿಸ್ಥಿತಿ ಆದರೂ ಪರಿಶ್ರಮದಿಂದ ಓದಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿ ಬಡ ತಂದೆ ತಾಯಿಗಳ ಮುಖದಲ್ಲಿ ಸಂತಸದ ನಗು ತಂದಿದ್ದಾಳೆಎಸ್ ಎಸ್ ಎಲ್ ಸಿಯಲ್ಲಿ  97.2 % ಅಂಕಗಳನ್ನು ಪಡೆದಿರುವ ಐಶ್ವರ್ಯಾ ತಂದೆ,ತಾಯಿಗೆ ಮತ್ತು ಶಾಲೆಗೆ ಊರಿಗೆ ಕೀರ್ತಿ ತಂದಿದ್ದಾಳೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರ ಗ್ರಾಮದ ಪರಶುರಾಮ ಗೊಂದಕರ ಹಾಗೂ ಸಾವಿತ್ರಿ ಗೊಂದಕರರ ಸುಪುತ್ರಿ ಐಶ್ವರ್ಯಾ ಈ ಸಾಧನೆ  ಮಾಡಿದವಳು. ಸ್ಥಳೀಯ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿರುವ  ಐಶ್ವರ್ಯಾ ಬಗ್ಗೆ ಶಿಕ್ಷಕರಿಗೂ ಹೆಮ್ಮೆ.
ಗಣಿತದಲ್ಲಿ 100 ಕ್ಕೆ 100 ಅಂಕಗಳು ಕನ್ನಡ 99, ಹಿಂದಿ94, ಇಂಗ್ಲೀಷ್ 122, ವಿಜ್ಞಾನ 97,ಸಮಾಜ -95 ಅಂಕಗಳನ್ನು ಪಡೆದಿರುವ ಐಶ್ವರ್ಯಾ ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ.ನಿರಂತರವಾಗಿ ದಿನಕ್ಕೆ 4-5 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ, ನನ್ನ ಸಾಧನೆಗೆ ನನ್ನ ಶಿಕ್ಷಕರು ಮತ್ತು ಪಾಲಕರೇ ಕಾರಣ ಎನ್ನುತ್ತಾಳೆ ಐಶ್ವರ್ಯಾ
 ಮುಂದೆ ವಿಜ್ಞಾನ ವಿಭಾಗಕ್ಕೆ ಸೇರಬೇಕು , ಡಾಕ್ಟರ್ ಆಗಬೇಕು ಎನ್ನುವ ಕನಸಿರುವ  ಐಶ್ವರ್ಯಾಗಳಿಗೆ ಶಾಲಾ ಆಡಳಿತ ಮಂಡಳಿ ಬೆನ್ನೆಲುಬಾಗಿ ನಿಂತಿದೆ. ಮುಂದಿನ ಶಿಕ್ಷಣದ ವೆಚ್ಚ ಆಡಳಿತ ಮಂಡಳಿಯೇ ಭರಿಸಲಿದೆ ಎಂದಿದ್ದಾರೆ ಸಂಸ್ಥೆಯ ಕಾರ್ಯದರ್ಶಿ ಪ್ರಹ್ಲಾದ ಅಗಳಿ. ಐಶ್ವರ್ಯಾ ಎಲ್ಲ ಬಡ, ಪ್ರತಿಭಾವಂತ ಮಕ್ಕಳಿಗೆ ಪ್ರೇರಣೆಯಾಗಲಿ

Advertisement

0 comments:

Post a Comment

 
Top