PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ೧೩ : ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪುರುಷೋತ್ತಮ ಪಂಚಮುಖಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ ಅಂಕಗಳಿಗೆ ೬೦೫ ಅಂಕಗಳನ್ನು ಪಡೆದು ೯೬.೮೦ % ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಶ್ರೀನಿಧಿ ಡಂಬಳ ೬೦೪ (೯೬.೬೪%) ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಮತ್ತು ಕು. ಚೈತ್ರಶ್ರೀ ಭಟ್ ೬೦೩ (೯೬.೪೮%) ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಉಳಿದಂತೆ ಚೇತನಾ ದೇಸಾಯಿ - ೯೫.೫೨%, ರಿಶಬ್ ಕುಮಾರ ಮೆಹತಾ - ೯೪.೮೮%, ಪ್ರಶಾಂತ ಜೋಶಿ - ೯೪.೮೮%, ರಂಜಿತಾ ಜಾಗೀರದಾರ - ೯೪.೭೨%, ಶ್ವೇತಾ ಹಿರೇಮಠ - ೯೩.೭೬%, ಅಮೃತಾ ಕುಲಕರ್ಣಿ - ೯೨.೩೨%, ಭಾರ್ಗವಿ ಹೊಸಕೋಟೆ - ೯೧.೦೪%, ಶಶಿಧರ ಅಮಟಿ - ೯೦.೮೮%, ಅವಿನಾಶ ಪಾಟೀಲ - ೯೦.೫೬%, ಸೈಂ                                                                                                                                                       ಲiದಾ ಶೇರ್‌ಬಾನು - ೯೦.೨೪% ಪ್ರತಿಶತ ಪಡೆದಿದ್ದಾರೆ. ಒಟ್ಟಾರೆ ೧೩ ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, ೨೩ ವಿದ್ಯಾರ್ಥಿಗಳು ಎ ಶ್ರೇಣಿಯಲ್ಲಿ, ೨೩ ವಿದ್ಯಾರ್ಥಿಗಳು ಬಿ+ ಶ್ರೇಣಿಯಲ್ಲಿ, ೧೮ ವಿದ್ಯಾರ್ಥಿಗಳು ಬಿ ಶ್ರೇಣಿಯಲ್ಲಿ, ೯ ವಿದ್ಯಾರ್ಥಿಗಳು ಸಿ+ ಶ್ರೇಣಿಯಲ್ಲಿ ಮತ್ತು ಇಬ್ಬರು ಸಿ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಶಾಲೆಯ ಒಟ್ಟು ಫಲಿತಾಶ ಶೇಕಡಾ ೯೦% ರಷ್ಟು ಆಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top