ಕೊಪ್ಪಳ : ರಾಜ್ಯದಲ್ಲಿ ಬಡವರಿಗೆ ಹಸಿವುನಿಂದ ಮುಕ್ತಗೊಳಿಸಲು ಬಿಪಿಎಲ್ ಕಾರ್ಡ್‌ದಾರ ಎಲ್ಲಾ ಬಡವರಿಗೆ ಮೇ ೦೧ ರಿಂದ ೫ಕೆ.ಜಿ ಉಚಿತ ಅಕ್ಕಿ, ರಿಯಾಯತಿ ದರದಲ್ಲಿ ೨೫ ರೂ.ಗೆ ೧ ಲೀಟರ್ ತಾಳೆ ಎಣ್ಣೆ, ೨ ರೂಗೆ ಅಯೋಡಿನ್ ಉಪ್ಪುನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ನೀಡುತ್ತಿದೆ ಅನ್ನ ಭಾಗ್ಯ ಯೋಜನೆಯಡಿ ಬಡವರಿಗೆ ಹೊಟ್ಟೆ ತುಂಬಾ ಅನ್ನ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ ಎಂದು ಭಾಗ್ಯನಗರ ಗ್ರಾ.ಪಂ ಅಧ್ಯಕ್ಷ ಹೊನ್ನೂರುಸಾಬ ಭೈರಾಪುರು ಹೇಳಿದರು.
ಅವರು ರವಿವಾರದಂದು ವಾರ್ಡ್ ೯ ರಲ್ಲಿ ನ್ಯಾಯಬೆಲೆ ಅಂಗಡಿ ಮುಂಭಾಗ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಣೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಿಪಿಎಲ್ ಕಾರ್ಡ್ ಹೊಂದಿದವರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಅಂದಾಗ ರಾಜ್ಯಸರಕಾರ ಉದ್ದೇಶ ಈಡೇರಿದಂತೆಯಾಗುತ್ತದೆ, ಈ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬೇಡಿ ಅಂತವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಈಗಾಗಿ ಈ ಆಹಾರಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಯಿಂದ ಪಡೆದು ನಿಮ್ಮ ಕುಟುಂಬದ ಹಸಿವು ಮುಕ್ತಗೊಳಿಸಿ ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿ ಜೀವನ ಸಾಗಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಶಂಕ್ರಪ್ಪ ಕುರಹಟ್ಟಿ, ಮಲ್ಲೇಶ ಬುಲ್ಟಿ, ಜಗದೀಶ ಮಾಲಗಿತ್ತಿ, ಗ್ಯಾನಪ್ಪ ಕುರಹಟ್ಟಿ, ಸುರೇಶ ದರಗದಕಟ್ಟಿ, ಚಂದ್ರು ಉಂಕಿ, ಶಿವರಾಮ ಮ್ಯಾಗಳಮನಿ, ನ್ಯಾಯಬೆಲೆ ಅಂಗಡಿ ಮಾಲೀಕ ಮಲ್ಲಪ್ಪ ತುಬಾಕಿ, ವಾರ್ಡಿನ ಗುರು ಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು.
0 comments:
Post a Comment