ಭಾರತೀಯರ ಅತಿದೊಡ್ಡ ಮನರಂಜನೆ ನಾಟಕ ಎಂದರೆ ತಪ್ಪಿಲ್ಲ. ಇಂದಿಗೂ ನಗರವಾಸಿಗಳಿಗೆ ಹವ್ಯಾಸಿ ಹಾಗೂ ಗ್ರಾಮೀಣ ಜನತೆಗೆ ವೃತ್ತಿ ರಂಗಭೂಮಿ ನಾಟಕಗಳು ಪ್ರದರ್ಶನಗಳ ಕೇಂದ್ರ. ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಹಾಗೂ ಸುರ್ವೆ ಕಲ್ಚರಲ್ ಅಕಾಡೆಮಿ ತನ್ನ ೨೩ನೇ ವಾರ್ಷಿಕೋತ್ಸವದಲ್ಲಿ, ಎಂದಿನಂತೆ ನಾಟಕಗಳ ಮೂಲಕ, ಪ್ರೇಕ್ಷಕರಿಗೆ ರಸದೌತಣ ಹಾಗೂ ಕಾರ್ಯಕ್ರಮಕ್ಕೆ ಹಾಸ್ಯನಾಟಕಗಳ ಮೃಷ್ಠಾನ್ನ ಭೋಜನ ಉಣಬಡಿಸಲಿದೆ.
ನಾಟಕ ರಚನೆಯಲ್ಲಿ ಏಕಾಂಕ ನಾಟಕಗಳ ಸಾರ್ವಭೌಮನೆಂದೇ ಗುರುತಿಸುವ ಹಾಗೂ ಹಾಸ್ಯ-ವ್ಯಂಗ್ಯ ಲೇಪಿತ ನಾಟಕಗಳ ಪಿತಾಮಹನೆಂದೇ ಹೆಸರಾದ, ಪರ್ವತವಾಣಿ ಇಂದು ನಮ್ಮೊಡನೆ ಇಲ್ಲದಿದ್ದರೂ, ಅವರ ನೂರಾರು ನಾಟಕಗಳ ಮೂಲಕ ನಮ್ಮೊಡನೆ ಇದ್ದಾರೆ. ಬೆಂಗಳೂರಿನಲ್ಲಿ ಅವರ ನಾಟಕಗಳು ಸಾವಿರಾರು ಪ್ರಯೋಗಗಳನ್ನು ಕಂಡಿವೆ. ಕಾಣುತ್ತಲೂ ಇವೆ.
ಈ ನಿಟ್ಟಿನಲ್ಲಿ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್(ರಿ) ತಮ್ಮ ೨೩ನೇ ವಾರ್ಷಿಕೋತ್ಸವಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ನಯನ ಸಭಾಂಗಣದಲ್ಲಿ, ೨೦೧೫ ರ ಮೇ ತಿಂಗಳ ದಿನಾಂಕ ೭ ರಿಂದ ೧೧ ರವರೆಗೆ ೫ ದಿನಗಳ ಕಾಲ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನದಲ್ಲಿ ಜರುಗಲಿರುವ ವಚನ ವೈಭವ ಸಾಂಸ್ಕೃತಿಕ ವಚನೋತ್ಸವದಲ್ಲಿ, ಪರ್ವತವಾಣಿಯವರ ೫ ನಾಟಕಗಳ ನಾಟಕೋತ್ಸವ ಹಮ್ಮಿಕೊಂಡಿದೆ.
ದಿನಾಂಕ : ೭-೫-೨೦೧೫ ರಂದು ಶ್ರೀ ಜಯ ಭಾರತಿ ಕಲಾ ಸಂಘದಿಂದ ಬಿ.ವಿ. ವೇಣುಗೋಪಾಲ್ ನಿರ್ದೇಶನದಲ್ಲಿ ಬುರ್ಕಿವೃತ ನಾಟಕ, ದಿನಾಂಕ : ೮-೫-೨೦೧೫ ರಂದು ಶ್ರೀ ಶಾರದಾ ಕಲಾನಿಕೇತನದಿಂದ ಕೆ. ಪ್ರದೀಪ್ ನಿರ್ದೇಶನದಲ್ಲಿ ಆಂತಿಂಥ ಹೆಣ್ಣು ಇವಳಲ್ಲ ನಾಟಕ, ದಿನಾಂಕ : ೯-೫-೨೦೧೫ ರಂದು ಅನಿಕೇತನ ಮಹಿಳಾ ಮತ್ತು ಮಕ್ಕಳ ಸಾಂಸ್ಕೃತಿಕ ತಂಡದಿಂದ ಎಂ.ಬಿ. ನಂದಿನಿ ನಿರ್ದೇಶನದಲ್ಲಿ ತಿನ್ನಬೇಕೆ ತಿಂದು ಕುಡಿಯಬೇಕೆ ನಾಟಕ, ದಿನಾಂಕ : ೧೦-೫-೨೦೧೫ ರಂದು ನವ ವೇದಿಕೆಯಿಂದ ಡಿ.ಕೆ. ಶಿಂಧೆ ನಿರ್ದೇಶನದಲ್ಲಿ ಹಗ್ಗದ ಕೊನೆ ನಾಟಕ, ದಿನಾಂಕ : ೧೧-೫-೨೦೧೫ ರಂದು ರಂಗಹೆಜ್ಜೆ ತಂಡದಿಂದ ಆರ್. ರಾಮಮೂರ್ತಿ ನಿರ್ದೇಶನದಲ್ಲಿ ಮುಕುತಿ ಮೂಗುತಿ ನಾಟಕ ಜರುಗಲಿವೆ.
ಬೆಂಗಳೂರಿನ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ, ನಯನ ರಂಗಮಂದಿರದಲ್ಲಿ ದಿನಾಂಕ ೭, ೮ ೯, ೧೦ ಮತ್ತು ೧೧- ಮೇ - ೨೦೧೫ರಲ್ಲಿ ೫ ದಿನಗಳ ಕಾಲ, ಅಥಣಿಯ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳು ಸಮ್ಮೇಳನಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ಜರುಗಲಿದೆ. ಈ ಕಾರ್ಯಕ್ರಮದ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ, ಬಹುಮಾನ ಯೋಜನೆ ರೂಪಿಸಿದ್ದು, ಕಾರ್ಯಕ್ರಮದಲ್ಲಿ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಬರೆದು, ಸಭಾಂಗಣದಲ್ಲಿರುವ ಡಬ್ಬದಲ್ಲಿ ಹಾಕಬೇಕು. ವಂದನಾರ್ಪಣೆಯ ಸಂದರ್ಭದಲ್ಲಿ ಪ್ರತಿದಿನ ಡ್ರಾ ಮಾಡಲಾಗುವುದು. ಪ್ರತಿದಿನ ಆಯ್ಕೆಯಾದ ೧೦ ಪ್ರೇಕ್ಷಕರಿಗೆ, ೨೫೦ ರೂ. ಮುಖಬೆಲೆಯ ಪುಸ್ತಕ ಬಹುಮಾನ ನೀಡಲಾಗುವುದು ಹಾಗೂ ಪೂರ್ಣ ದಿನ ಭಾಗವಹಿಸಿದವರಿಗೆ ಅತ್ಯುತ್ತಮ ವೀಕ್ಷಕರೆಂದು ಪ್ರಮಾಣ ಪತ್ರ ನೀಡಲಾಗುವುದು. ಎಲ್ಲರಿಗೂ ಮದ್ಯಾಹ್ನ ಭೋಜನ ವ್ಯವಸ್ಥೆ ಇದ್ದು. ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. ನೀವು ಬನ್ನಿ.. ನಿಮ್ಮ ಸ್ನೇಹಿತರನ್ನು ಕರೆತನ್ನಿ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ರಮೇಶ ಸುರ್ವೆ ಮೊ: ೯೮೪೫೩೦೭೩೨೭
0 comments:
Post a Comment