ಮಂಡ್ಯದ ಹಿಂದಿ ಶಿಕ್ಷಕ್ ಪ್ರಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಪ್ರಸಕ್ತ ಸಾಲಿನ ಹಿಂದಿ ಶಿಕ್ಷಕ್ ಟ್ರೇನಿಂಗ್ ಕೋರ್ಸ್‌ನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹಿಂದಿ ಶಿಕ್ಷಕ್ ಟ್ರೇನಿಂಗ್ ಕೋರ್ಸ್ ಹತ್ತು ತಿಂಗಳ ಅವಧಿಯದ್ದಾಗಿದ್ದು, ಅರ್ಜಿ ಸಲ್ಲಿಸಲಿಚ್ಛಿಸುವವರು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಉತ್ತೀರ್ಣರಾಗಿರಬೇಕು. ಹಿಂದಿ ರತ್ನ, ಪ್ರವೀಣ್, ವಿದ್ವಾನ್ ಪದವಿ ಪರೀಕ್ಷೆಯಲ್ಲಿ ಶೇಕಡಾ ೫೦ ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ೧೮ ರಿಂದ ೪೦ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಹಿಂದಿ ಶಿಕ್ಷಕ್ ಟ್ರೇನಿಂಗ್ ಕಾಲೇಜ್ ಹಿಂದಿ ಭವನ, ಜಿಲ್ಲಾ ಪಂಚಾಯತ್ ಕಛೇರಿ ಎದುರು, ಮಂಡ್ಯ, ದೂರವಾಣಿ ಸಂಖ್ಯೆ: ೦೮೨೩೨-೨೨೬೬೬೭ ಅಥವಾ ೯೪೪೮೨೬೮೧೧೪ ಮೂಲಕ ಸಂಪರ್ಕಿಸಬಹುದಾಗಿದೆ ಹಾಗೂ ಬೆಂಗಳೂರಿನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಹಿಂದಿ ಶಿಕ್ಷಕ್ ಟ್ರೇನಿಂಗ್ ಕೋರ್ಸ್ ನ ಪರೀಕ್ಷೆಯು ಮೇ.೧೧ ರಿಂದ ಆರಂಭವಾಗಲಿದ್ದು, ಮಂಡ್ಯದ ಹಿಂದಿ ಶಿಕ್ಷಕ್ ಪ್ರಶಿಕ್ಷಣ ಕಾಲೇಜಿನ ವಿವಿಧ ಜಿಲ್ಲೆಯ ಪ್ರಶಿಕ್ಷಣಾರ್ಥಿಗಳು ಪ್ರವೇಶ ಪತ್ರ ಹಾಗೂ ಪರೀಕ್ಷಾ ಸಂಬಂಧಿ ಮಾಹಿತಿಯನ್ನು ಸಂಸ್ಥೆಯಿಂದ ಪಡೆಯಬಹುದು .
0 comments:
Post a Comment